More

    2018ರ ಕ್ರಿಪ್ಟೊ ಕರೆನ್ಸಿ ಸುತ್ತೋಲೆ ಮಾನ್ಯವಲ್ಲ: ವರ್ಚುವಲ್​ ಕರೆನ್ಸಿ ವ್ಯವಹಾರಕ್ಕೆ ಆರ್​ಬಿಐ ಅಸ್ತು

    ನವದೆಹಲಿ: ಬ್ಯಾಂಕ್​ಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿರುವ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ), 2020ರಲ್ಲಿ ಸುಪ್ರೀಂಕೋರ್ಟ್​ ಹೇಳಿದಂತೆ ಕ್ರಿಪ್ಟೋಕರೆನ್ಸಿ ಕುರಿತು 2018ರಲ್ಲಿ ಆರ್​ಬಿಐ ಹೊರಡಿಸಿರುವ ಸುತ್ತೋಲೆ ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟೀಕರಣ ನೀಡಿದೆ.

    ಗೌರವಾನ್ವಿತ ಸುಪ್ರೀಂ ಕೋರ್ಟ್​ನ 2020ರ ಆದೇಶದ ದೃಷ್ಟಿಯಿಂದ, ಸುತ್ತೋಲೆಯು ಸುಪ್ರೀಂ ಕೋರ್ಟ್ ತೀರ್ಪಿನ ದಿನಾಂಕದಿಂದ ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂದು ಕೇಂದ್ರ ಬ್ಯಾಂಕ್​ ಸುತ್ತೋಲೆಯಲ್ಲಿ ತಿಳಿಸಿದೆ.

    ಕೆಲ ಬ್ಯಾಂಕ್​ಗಳು 2018ರಲ್ಲಿ ಆರ್​ಬಿಐ ಹೊರಡಿಸಿರುವ ಸುತ್ತೋಲೆಯನ್ನು ಉಲ್ಲೇಖಿಸಿ ಕ್ರಿಪ್ಟೋಕರೆನ್ಸಿಗಳನ್ನು ಬಳಸದಂತೆ ತನ್ನ ಗ್ರಾಹಕರ ದಿಕ್ಕು ತಪ್ಪಿಸುತ್ತಿರುವುದು ಆರ್​ಬಿಐ ಗಮನಕ್ಕೆ ಬಂದಿದೆ. ಅನೇಕ ಬ್ಯಾಂಕ್​ಗಳ ನಡೆಯಿಂದ ಕೆಟ್ಟ ಹೆಸರು ಬರುತ್ತಿದೆ ಎಂದು ಗರಂ ಆಗಿರುವ ಆರ್​ಬಿಐ ಇನ್ನು ಮುಂದೆ ಕ್ರಿಪ್ಟೊ ಕರೆನ್ಸಿ ಬಳಸಬಹುದು ಎಂದು ಸುತ್ತೋಲೆಯಲ್ಲಿ ತಿಳಿಸುವ ಮೂಲಕ ಆರ್​ಬಿಐ ಸ್ಪಷ್ಟನೆ ನೀಡಿದೆ.

    ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳು ಕ್ರಿಪ್ಟೊ ಕರೆನ್ಸಿ ಸಂಬಂಧ ಯಾವುದೇ ಸೇವೆ ನೀಡದಂತೆ ಸೂಚಿಸಿದ್ದ ಆರ್​ಬಿಐ, ಕ್ರಿಪ್ಟೊ ಕರೆನ್ಸಿ ವ್ಯವಹಾರಗಳನ್ನು 2018ರ ಏಪ್ರಿಲ್​ನಲ್ಲಿ ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿ ಅನೇಕರು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು.

    ಈ ಸಂಬಂಧ 2020ರಲ್ಲಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್​, ಆರ್‌ಬಿಐ ವರ್ಚುವಲ್ ಕರೆನ್ಸಿಗಳನ್ನು ನಿಷೇಧಿಸಿಲ್ಲವಾದ್ದರಿಂದ ಮತ್ತು ಭಾರತ ಸರ್ಕಾರ ಇನ್ನೂ ನಿರ್ಧಾರಕ್ಕೆ ಬಂದಿಲ್ಲವಾದ್ದರಿಂದ, ಆರ್‌ಬಿಐ ವಿಧಿಸಿರುವ ಅನೌಪಚಾರಿಕ ನಿಷೇಧವು ಅರ್ಹತೆಯನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಆರ್​ಬಿಐ ಸುತ್ತೋಲೆಯನ್ನು ರದ್ದುಪಡಿಸಿತ್ತು.

    ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರಗಳಾದ ವಾಜಿರ್ಎಕ್ಸ್, ಯುನೊಕೊಯಿನ್ ಮತ್ತು ಜಿಯೋಟಸ್, ಬ್ಯಾಂಕುಗಳ ಕಡೆಯಿಂದ ಕಿಪ್ಟೊ ಕರೆನ್ಸಿ ಬ್ಯಾನ್​ನಿಂದ ಪ್ರತಿಕೂಲ ಪರಿಣಾಮ ಬೀರಿದೆ. ಇದೀಗ ಆರ್​ಬಿಐ ಸುಪ್ರೀಂಕೋರ್ಟ್​ ತೀರ್ಪನ್ನು ಅನುಸರಿಸಿರುವುದಾಗಿ ಹೇಳಿದ್ದು, ಅನೇಕ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರಗಳು ನಿರ್ಧಾರವನ್ನು ಸ್ವಾಗತಿಸಿವೆ. (ಏಜೆನ್ಸೀಸ್​)

    ಮಗು ಕದ್ದವಳ ಪತ್ತೆಗೆ 35000 ಕಾಲ್ ಟ್ರೇಸ್, 800 ಮಂದಿ ವಿಚಾರಣೆ!; ವರ್ಷದ ಬಳಿಕ ಸಿಕ್ಕಿಬಿದ್ದ ಮನೋವೈದ್ಯೆ

    ಮೈನಸ್ ಶೇ.7.3ಕ್ಕೆ ತಗ್ಗಿದ ಜಿಡಿಪಿ; ಕಡೆಯ ತ್ರೖೆಮಾಸಿಕದಲ್ಲಿ ಶೇ.1.6 ಬೆಳವಣಿಗೆ

    ಶುರು ಹೊಸ ಜೀವನ: ಇಂದಿನಿಂದಲೇ ಹಲವು ಸೇವೆಗಳು ಹೊರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts