More

    LIVE: ರಿವರ್ಸ್ ರೆಪೋ ದರ 25 ಮೂಲಾಂಶ ಇಳಿಸಿದ ಆರ್​ಬಿಐ, ರಾಜ್ಯಗಳ ಡಬ್ಲ್ಯುಎಂಎ ಮಿತಿ ಶೇಕಡ 60ಕ್ಕೆ ಏರಿಕೆ

    ಮುಂಬೈ: ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಎರಡನೇ ಹಂತದ ಲಾಕ್​ಡೌನ್​ನಲ್ಲಿ ಮುಂದುವರಿದಿದ್ದು, ಅರ್ಥ ವ್ಯವಸ್ಥೆ ಚೇತರಿಕೆ ಹೇಗೆ ಎಂಬ ಚಿಂತೆಯೂ ಕಾಡಿದೆ. ಈ ಸಂದರ್ಭದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಬೆಳಗ್ಗೆ ಎಂಟು ಗಂಟೆಗೆ ಟ್ವೀಟ್ ಮಾಡಿದ್ದು, ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಪ್ರಕಟಿಸಿತ್ತು. ಹೀಗಾಗಿ ಎಲ್ಲರ ಚಿತ್ತವೂ ನೆಟ್ಟಿದ್ದು, ಅವರ ಮಾತುಗಳ ವಿವರ ಇಲ್ಲಿದೆ.

    10:43 AM: ಕಮರ್ಷಿಯಲ್​ ರಿಯಲ್​ಎಸ್ಟೇಟ್​ ವ್ಯವಹಾರಕ್ಕೆ ರಿಲೀಫ್: ವಾಣಿಜ್ಯ ರಿಯಲ್ ಎಸ್ಟೇಟ್​ ವ್ಯವಹಾರಕ್ಕಾಗಿ ಎನ್​ಬಿಎಫ್​ಸಿಗಳು ನೀಡಿದ ಸಾಲಗಳಿಗೂ ಸದ್ಯ ಉಳಿದ ಸಾಲಗಳಿಗೆ ಸಿಕ್ಕ ವಿನಾಯಿತಿಯೇ ಸಿಗಲಿದೆ. ಇದರಿಂದ ಎನ್​ಬಿಎಫ್​ಸಿಗಳಿಗೂ ರಿಯಲ್ ಎಸ್ಟೇಟ್ ಸೆಕ್ಟರ್​ಗೂ ಪ್ರಯೋಜನವಾಗಲಿದೆ. ಮುಂದಿನ ದಿನಗಳಲ್ಲಿ ಯಾವಾಗ ಅಗತ್ಯ ಬೀಳುವುದೋ ಆಗ ಇನ್ನಷ್ಟು ಕ್ರಮಗಳನ್ನು ಘೋಷಿಸಲಾಗುವುದು.

    10:40 AM: ಅವಧಿ ವಿಸ್ತರಣೆ: ಎನ್​ಪಿಎ ನಿರ್ಣಯ ಯೋಜನೆಗಳ ಅವಧಿ 90 ದಿನಗಳಿಗೆ ವಿಸ್ತರಣೆಯಾಗಲಿದೆ. ಮುಂದಿನ ಆದೇಶದ ತನಕ ಬ್ಯಾಂಕುಗಳು ಡಿವಿಡೆಂಡ್​ಗಳನ್ನು ಘೋಷಿಸುವಂತಿಲ್ಲ.  ಅದೇ ರೀತಿ, ಬ್ಯಾಂಕುಗಳ ಎಲ್​ಸಿಆರ್ ಅಗತ್ಯಗಳನ್ನು ತತ್​​ಕ್ಷಣವೇ ಶೇಕಡ 100ರಿಂದ ಶೇಕಡ 80ಕ್ಕೆ ಇಳಿಸಬೇಕು. ಇದನ್ನು ಮತ್ತೆ 2020ರ ಅಕ್ಟೋಬರ್​ನಲ್ಲಿ ಶೇಕಡ 90ಕ್ಕೆ ಅದೇ ರೀತಿ 2021ರ ಏಪ್ರಿಲ್​ನಲ್ಲಿ ಶೇಕಡ 100ಕ್ಕೆ ಏರಿಸಬಹುದಾಗಿದೆ.

    10:36 AM: ಎನ್​ಪಿಎ ಕ್ಲಾಸಿಫಿಕೇಶನ್​ನಲ್ಲಿ ಮೋರಟೋರಿಯಂ ಪೀರಿಯಡ್ ಇಲ್ಲ: ಎನ್​ಪಿಎ ಕ್ಲಾಸಿಫಿಕೇಶನ್​​ನಲ್ಲಿ ಮೋರಟೋರಿಯಂ ಪೀರಿಯಡ್​ ಇರುವುದಿಲ್ಲ. 25,000 ಕೋಟಿ ರೂಪಾಯಿಗಳ ಟಾರ್ಗೆಟೆಡ್ ಲಾಂಗ್​-ಟರ್ಮ್ ರೆಪೋ ಆಪರೇಷನ್​ ಹರಾಜು ಇಂದು ನಡೆಯಲಿದೆ. ಹೆಚ್ಚಿನ ನಿಬಂಧನೆಗಳನ್ನು ಬ್ಯಾಂಕುಗಳು ಹಾಗೆಯೇ ಉಳಿಸಲಿದ್ದು, ಮುಂದೆ ವಾಸ್ತವ ಲೆಕ್ಕಾಚಾರ ನೋಡಿ ಹೊಂದಾಣಿಕೆ ಮಾಡಿಕೊಳ್ಳಲಿವೆ.

    10:32 AM: ರಿವರ್ಸ್​ ರೆಪೊ ರೇಟ್ ಇಳಿಕೆ- ರಿವರ್ಸ್ ರೆಪೊ ರೇಟ್ 25 ಬಿಪಿಎಸ್​ನಷ್ಟು ಇಳಿಸುವುದಕ್ಕೆ ಆರ್​ಬಿಐ ತೀರ್ಮಾನಿಸಿದ್ದು, ಪರಿಣಾಮ ಶೇಕಡ 4ರಿಂದ ಶೇಕಡ 3.75ಕ್ಕೆ ಇಳಿಕೆಯಾಗಲಿದೆ. ಇದೇ ರೀತಿ, ರಾಜ್ಯ ಸರ್ಕಾರಗಳ ಡಬ್ಲ್ಯುಎಂಎ(Ways and Means Advances) ಮಿತಿಯನ್ನು ಶೇಕಡ 60 ಏರಿಕೆ ಮಾಡಲಾಗಿದೆ.

    10:28 AM: ತಡೆಇಲ್ಲದ ಸಾಲ ಸೌಲಭ್ಯ: ಅರ್ಥವ್ಯವಸ್ಥೆಯಲ್ಲಿ ಹಣಕಾಸಿನ ಹರಿವು ಸಾಕಷ್ಟು ಇರುವಂತೆ ನಿರ್ವಹಿಸುವುದಕ್ಕಾಗಿ ಬ್ಯಾಂಕುಗಳ ಮೂಲಕ ಸಾಲಸೌಲಭ್ಯ ಸರಿಯಾಗಿರುವಂತೆ ನೋಡಿಕೊಳ್ಳುವುದು. ಅದಕ್ಕೆ ಇನ್​ಸೆಂಟಿವ್ ಮತ್ತು ಅಗತ್ಯ ಇತರೆ ಕ್ರಮಗಳನ್ನು ತೆಗೆದುಕೊಳ್ಳುವುದು. ಹಣಕಾಸಿನ ಒತ್ತಡ ಅಥವಾ ಹೊರೆಯನ್ನು ಕಡಿಮೆ ಮಾಡಿಕೊಂಡು ಮಾರುಕಟ್ಟೆಗಳ ವಹಿವಾಟು ಸುಗಮವಾಗಿ ಇರುವಂತೆ ಮಾಡುವುದು ಆದ್ಯತೆ ವಿಚಾರವಾಗಿದೆ.

    10:25 AM: ಇಂದಿನ ಘೋಷಣೆಯ ಮುಖ್ಯಾಂಶ: * ಅರ್ಥವ್ಯವಸ್ಥೆಯಲ್ಲಿ ಸಾಕಷ್ಟು ಲಿಕ್ವಿಡಿಟಿ ಇರುವಂತೆ ನೋಡಿಕೊಳ್ಳುವುದು. * ಹಣಕಾಸಿನ ಒತ್ತಡವನ್ನು ಕಡಿಮೆಮಾಡುವುದು * ಔಪಚಾರಿಕ ಮಾರುಕಟ್ಟೆ ಕಾರ್ಯಚಟುವಟಿಕೆಗೆ ಅವಕಾಶ ಮಾಡಿಕೊಡುವುದು – ಇದಕ್ಕೆ ಪೂರಕವಾಗಿ ನಿಶ್ಚಿತ​ ದೀರ್ಘಾವಧಿ ಅವಧಿ ರೆಪೊ ಆಪರೇಷನ್ಸ್​ ಅನ್ನು 50,000 ರೂಪಾಯಿಗೆ ಏರಿಸಿ ಆರಂಭಿಸುವುದು. ಅದನ್ನು ಮಾರುಕಟ್ಟೆ ಹೇಗೆ ಬಳಸುವುದೆಂದು ಗಮನಿಸಿಕೊಂಡು ನಂತರ ಈ ಮೊತ್ತವನ್ನು ಹೆಚ್ಚಿಸಲಾಗುವುದು.

    10:20 AM: ಉತ್ತೇಜನಾ ಕ್ರಮ:   ಭಾರತದ ಫಾರೆಕ್ಸ್​ ರಿಸರ್ವ್​ 11.8 ತಿಂಗಳ ಆಮದಿಗೆ ಬೇಕಾಗುವಷ್ಟು ಇದ್ದು,  476.5 ಶತಕೋಟಿ ಡಾಲರ್​ ಗಳ ಮಟ್ಟದಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ. ಈ ವರ್ಷ ಫೆ.6ರಿಂದ ಮಾರ್ಚ್​ 27ರ ಅವಧಿಯಲ್ಲಿ ದೇಶದ ಜಿಡಿಪಿಯ ಶೇಕಡ 3.2ರ ಪ್ರಮಾಣದಲ್ಲಿ ಆರ್​ಬಿಐ ಹಣಕಾಸಿನ ಉತ್ತೇಜನವನ್ನು ಆರ್ಥಿಕತೆಗೆ ತುಂಬಲಾಗಿದೆ.

    10:15 AM: ಬ್ಯಾಂಕ್​, ಖಾರಿಫ್​ ಔಟ್​ಪುಟ್​ ಏರುಮುಖ: ಬ್ಯಾಂಕುಗಳ ಚಟುವಟಿಕೆ ಮತ್ತು ಖಾರಿಫ್ ಔಟ್​ಪುಟ್ ಇಳಿಮುಖವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೆಟ್​ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಪ್ರಮಾಣ ಹೆಚ್ಚಾಗಿದೆ. ಈ ಪರಿಸ್ಥಿತಿ ಬ್ಯಾಂಕುಗಳಿಗೆ ಹೆಚ್ಚಿನ ಲಾಭವನ್ನೇ ತಂದುಕೊಡುತ್ತಿದೆ. ಇದೇ ರೀತಿ, COVID19 ಹರಡಿ ಏರುಮುಖವಾಗುವುದನ್ನು ತಪ್ಪಿಸಲು ತೆಗೆದುಕೊಂಡಿರುವ ಕ್ರಮಗಳು ಸರಿಯಾಗಿಯೇ ಇವೆ. ಇದರ ಪರಿಣಾಮ ಐಐಪಿ ಪ್ರಿಂಟ್​ನಲ್ಲಿ ಕಂಡುಬಂದಂತೆ ಆ ಡೇಟಾದಿಂದ ಯಾರೂ ತಪ್ಪು ತಿಳಿಯಬೇಕಾದ್ದಿಲ್ಲ. ಖಾರಿಫ್ ಔಟ್​ಪುಟ್ ಶೇಕಡ 37 ಏರಿಕೆ ಕಂಡುಬಂದಿದೆ.

    10:10 AM : ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಮುಖ್ಯಾಂಶ: ದೇಶದ ಮ್ಯಾಕ್ರೋ ಎಕನಾಮಿಕ್ ಪರಿಸ್ಥಿತಿ ಕೆಲವು ಕ್ಷೇತ್ರಗಳಲ್ಲಿ ತೊಂದರೆಗೀಡಾಗಿದೆ. ಐಎಂಎಫ್​ನ ಭವಿಷ್ಯ ನುಡಿಯ ಪ್ರಕಾರವೂ ಜಾಗತಿಕ ಜಿಡಿಪಿ ಕೂಡ ಇಳಿಮುಖವಾಗಿದೆ. ಜಾಗತಿಕವಾಗಿ ಕೂಡ ಷೇರುಪೇಟೆಗಳಲ್ಲಿ ಏರಿಳಿತಗಳು ಮುಂದುವರಿದಿದ್ದು, ಕಚ್ಚಾ ತೈಲದ ದರದಲ್ಲೂ ಅದೇ ಪರಿಸ್ಥಿತಿ ಇದೆ. ಜಿಡಿಪಿ ಬೆಳವಣಿಗೆ ಏರುಮುಖದಲ್ಲಿರುವ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ.

    10:05 AM: ಮರಣ ಮೃದಂಗದ ಮಧ್ಯೆ, ಜೀವನ ನಿರಂತರ: ಸದ್ಯದ ಪರಿಸ್ಥಿತಿ ನಿಭಾಯಿಸುವಲ್ಲಿ ಆರ್​ಬಿಐ ಕಾರ್ಯಪ್ರವೃತ್ತವಾಗಿದ್ದು, ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮಹಾತ್ಮಗಾಂಧಿ ಅವರ ಮಾತೊಂದಿದೆ- ಸಾವುಗಳ ನಡುವೆ ಜೀವನ ನಿರಂತರವಾಗಿ ಸಾಗುತ್ತಿರುತ್ತದೆ. ಇದೇ ರೀತಿ ಕರೊನಾ ವೈರಸ್​ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಎಲ್ಲರಿಗೂ ವಿಶೇಷವಾಗಿ ಆರ್ಥಿಕವಲಯದವರಿಗೆ ಧನ್ಯವಾದಗಳು.

    10:03 AM: ಸುದ್ದಿಗೋಷ್ಠಿ ಆರಂಭಿಸಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

    ಹೆಕ್ಕಿ ಜೇಬಿಗಿಳಿಸುವವರಿಲ್ಲದೆ ರಸ್ತೆ ಮೇಲೆ ಬಿದ್ದಿದ್ದವು ಒಂದಲ್ಲ, ಎರಡಲ್ಲ 25 ನೋಟುಗಳು!! – ವ್ಯಕ್ತಿಯೊಬ್ಬ ಎಸೆದು ಹೋದ ನೋಟುಗಳವು!!

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts