ಮುಂಬೈ: ವೊಡಾಫೋನ್ಗೆ ನೀಡಿದ್ದ ಎಂ-ಪೇಸಾದ ಸರ್ಟಿಫಿಕೇಟ್ ಆಫ್ ಅಥೋರೈಸೇಷನ್ ಕ್ಯಾನ್ಸಲ್ ಮಾಡಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ಹೇಳಿದೆ.
ಸರ್ಟಿಫಿಕೇಟ್ ಆಫ್ ಅಥೋರೈಸೇಷನ್ ಕ್ಯಾನ್ಸಲ್ ಆಗಿರುವ ಕಾರಣ ವೊಡಾಫೋನ್ ಇನ್ನು ಮೇಲೆ ಪ್ರೀಪೇಯ್ಡ್ ಇನ್ಸ್ಟ್ರುಮೆಂಟ್ ಬಳಸುವಂತಿಲ್ಲ. ವೊಡಾಫೋನ್ ಸ್ವಯಂಪ್ರೇರಿತವಾಗಿ ಅಥೋರೈಸೇಷನ್ ಸರ್ಟಿಫಿಕೇಟನ್ನು ಸರಂಡರ್ ಮಾಡಿತ್ತು. ಹೀಗಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಆದಾಗ್ಯೂ, ಗ್ರಾಹಕರು ಅಥವಾ ವ್ಯಾಪಾರಿಗಳು ಪಿಎಸ್ಒ(ಪೇಮೆಂಟ್ ಸಿಸ್ಟಮ್ ಆಪರೇಟರ್) ರೀತಿಯಲ್ಲಿ ವ್ಯವಹರಿಸಬಹುದಾಗಿದ್ದು, ಸರ್ಟಿಫಿಕೇಟ್ ಆಫ್ ಅಥೋರೈಸೇಷನ್ ಕ್ಯಾನ್ಸಲ್ ಆಗಿರುವ ಕಾರಣ 2022ರ ಸೆಪ್ಟೆಂಬರ್ 30ರೊಳಗೆ ಸೆಟಲ್ಮೆಂಟ್ ಮಾಡಿಕೊಳ್ಳಬೇಕು.
ವೊಡಾ ಫೋನ್ ಎಂ ಪೇಸಾ ಸೇರಿ 11 ಸಂಸ್ಥೆಗಳಿಗೆ ಆರ್ಬಿಐ 2015ರಲ್ಲಿ ಬ್ಯಾಂಕಿಂಗ್ ವಹಿವಾಟು ನಡೆಸಲು ಪರವಾನಗಿ ನೀಡಿತ್ತು. ಕಳೆದ ವರ್ಷ ಆದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಬಾಗಿಲು ಮುಚ್ಚುವ ಘೋಷಣೆ ಮಾಡಿದ ಬೆನ್ನಲ್ಲೇ ಎಂ-ಪೇಸಾವನ್ನು ಮುಚ್ಚಲು ವೊಡಾಫೋನ್ ತೀರ್ಮಾನಿಸಿತ್ತು. ಎಂ-ಪೇಸಾ ಆದಿತ್ಯ ಬಿರ್ಲಾ ಐಡಿಯಾ ಪೇಮೆಂಟ್ಸ್ ಬ್ಯಾಂಕ್ ಜತೆ ವಿಲೀನವಾಗಿತ್ತು. (ಏಜೆನ್ಸೀಸ್)