More

    ರವೀಂದ್ರ ಕಲಬುರ್ಗಿ ಹೇಳಿಕೆ 30 ರಂದು ಶೈಕ್ಷಣಿಕ ಕಾರ್ಯಾಗಾರ

    ಬಾದಾಮಿ: ಬೆಳಗಾವಿ ವಿಭಾಗ ವ್ಯಾಪ್ತಿಗೊಳಪಡುವ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಬನಶಂಕರಿ ಗಾಯತ್ರಿ ಸಮುದಾಯ ಭವನದಲ್ಲಿ ಡಿ.30 ರಂದು ಒಂದು ದಿನದ ಶೈಕ್ಷಣಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ರವೀಂದ್ರ ಕಲಬುರ್ಗಿ ತಿಳಿಸಿದರು.

    ನಗರದ ಲೋಕೋಪಯೋಗಿ ಇಲಾಖೆ ಪರಿವೀಕ್ಷಣಾ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಇದನ್ನೂ ಓದಿ: ಮಹಾಪುರುಷರ ಜಯಂತಿ ಅರ್ಥಪೂರ್ಣ ಆಚರಣೆ

    ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಸದ ಪಿ.ಸಿ. ಗದ್ದಿಗೌಡರ ಉದ್ಘಾಟಿಸುವರು.

    ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ. ರಾಜು ಅಧ್ಯಕ್ಷತೆ ವಹಿಸುವರು. ಸಿದ್ದನಗೌಡ ಪಾಟೀಲ ಮತ್ತು ಬಿ.ಎಲ್. ಲಕ್ಕೇಗೌಡರ ಭಾವಚಿತ್ರಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪುಷ್ಪಾರ್ಚನೆ ಮಾಡುವರು.

    ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ನಿರ್ದೇಶಕ ಪ್ರಕಾಶ ತಪಶೆಟ್ಟಿ, ಮುಖಂಡರಾದ ದ್ಯಾಮಣ್ಣ ಗಾಳಿ, ರಾಮಗೊಂಡ ಮಿರ್ಜಿ, ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಮಹೇಂದ್ರಪ್ರಸಾದ ಗೌಡ, ನಿರ್ದೇಶಕರಾದ ಗುರುಪಾದಪ್ಪಗೌಡ ಪಾಟೀಲ, ಮಹಾಂತೇಶ ಮಮದಾಪುರ, ಎಂ.ಬಿ. ಹಂಗರಗಿ, ಧರೆಪ್ಪ ಆಲಗೂರ, ಎಂ.ಬಿ. ಪೂಜಾರಿ ಆಗಮಿಸುವರು ಎಂದು ತಿಳಿಸಿದರು.

    ನಿರ್ದೇಶಕ ಶೇಖರಗೌಡ ಮಾಲಿ ಪಾಟೀಲ ಮಾತನಾಡಿ, ಅಂದಿನ ಕಾರ್ಯಾಗಾರದಲ್ಲಿ ಬೆಳಗಾವಿ ವಿಭಾಗದ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಲಿದ್ದು, 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.

    11 ರಿಂದ 12.30 ರ ವರೆಗೆ ಮೊದಲ ಅವಧಿಯಲ್ಲಿ ಬೆಳಗಾವಿ ವಿಭಾಗದ ಸಂಯುಕ್ತ ನಿಬಂಧಕ ಡಾ. ಸುರೇಶಗೌಡ ಪಾಟೀಲ ಅವರಿಂದ ಉಪನ್ಯಾಸ ಹಾಗೂ ಮುಕ್ತ ಚರ್ಚೆ ನಡೆಯಲಿದೆ.

    ಇದನ್ನೂ ಓದಿ: ಉಚಿತ ಹೃದಯ ರೋಗ ತಪಾಸಣೆ

    ಎರಡನೇ ಅವಧಿಯಲ್ಲಿ 12 ರಿಂದ 2 ರವರೆಗೆ ಬೆಳಗಾವಿ ವಿಭಾಗದ ಆದಾಯ ತೆರಿಗೆ ಅಧಿಕಾರಿ ಪಂಪಾಪತಿ ದೇಸಾಯಿ ಉಪನ್ಯಾಸ ನೀಡುವರು. 3 ರಿಂದ 4.30 ರ ವರೆಗೆ ಬೆಳಗಾವಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನಿರ್ಮಲಾ ಉಜ್ವಲ ಉಪನ್ಯಾಸ ನೀಡುವರು ಎಂದು ಮಾಹಿತಿ ನೀಡಿದರು.
    ಸಹಕಾರ ಮಹಾಮಂಡಳದ ನಿರ್ದೇಶಕ ಹೊನ್ನಯ್ಯ ಹಿರೇಮಠ ಮಾತನಾಡಿದರು. ಗಾಯತ್ರಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರವಿ ರಾಮದುರ್ಗ, ಹನುಮಂತ ವಡ್ಡೊಡಗಿ, ಮಹೇಶ ಶೆಬಿನಕಟ್ಟಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts