More

    ರವಿಶಾಸ್ತ್ರಿ ಶ್ವಾನಗಳಿಂದಲೂ ಐಸಿಸಿ ಮಾರ್ಗಸೂಚಿ ಪಾಲನೆ!

    ಬೆಂಗಳೂರು: ಕ್ರಿಕೆಟ್ ಚಟುವಟಿಕೆಗಳ ಪುನರಾರಂಭಕ್ಕೆ ಐಸಿಸಿ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಮಾರ್ಗಸೂಚಿಯಲ್ಲಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯಗೊಳಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಮುಂಬೈನ ಮನೆಯಲ್ಲೇ ಲಾಕ್ ಆಗಿರುವ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ನೆಚ್ಚಿನ ಶ್ವಾನಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದೇ ವೇಳೆ ಶ್ವಾನಗಳಿಗೂ ಸಾಮಾಜಿಕ ಅಂತರದ ‘ಮಾರ್ಗಸೂಚಿ ಪಾಲನೆ’ ಕಡ್ಡಾಯಗೊಳಿಸಿದ್ದಾರೆ!

    ಇದನ್ನೂ ಓದಿ: VIDEO: ಕ್ರಿಕೆಟರ್ ಜೆಮೀಮಾ ಈಗ ರಾಕ್‌ಸ್ಟಾರ್

    ರವಿಶಾಸ್ತ್ರಿ ಭಾನುವಾರ ಟ್ವಿಟರ್‌ನಲ್ಲಿ ತಮ್ಮ ಮನೆಯ ಐದು ನಾಯಿಗಳೊಂದಿಗೆ ಕುಳಿತಿರುವ ಮತ್ತು ನಾಯಿಯೊಂದು ಬಣ್ಣದ ಕೂಲಿಂಗ್ ಗ್ಲಾಸ್ ಧರಿಸಿ ನಡೆಯುತ್ತಿರುವ ಚಿತ್ರವನ್ನು ಟ್ವೀಟಿಸಿದ್ದಾರೆ. ಜತೆಗೆ, ‘ಐಸಿಸಿ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸಭೆ ನಡೆಸಲಾಯಿತು. ಸಣ್ಣ ಮಳೆಯೊಂದರ ಬಳಿಕ ನಾಯಕ ಮೈದಾನ ಪರಿಶೀಲನೆಗೆ ತೆರಳುತ್ತಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಹೃದಯ ಗೆದ್ದ ಪಾಂಡ್ಯ-ನತಾಶಾ ಸೆಲ್ಫಿ!

    ರವಿಶಾಸ್ತ್ರಿ ಟ್ವೀಟ್‌ಗೆ ಕ್ರಿಕೆಟ್ ಪ್ರೇಮಿಗಳಿಂದ ವಿವಿಧ ಬಗೆಯ ಕಮೆಂಟ್‌ಗಳು ಹರಿದು ಬಂದಿದ್ದು, ‘ನಾಯಿಗಳನ್ನು ಟೀಮ್ ಇಂಡಿಯಾ ಆಟಗಾರರಿಗೆ ಹೋಲಿಸಿದ್ದೀರಾ’ ಎಂದು ಕೆಲವರಿಂದ ಆಕ್ಷೇಪಗಳೂ ಬಂದಿವೆ. ಮದ್ಯಪ್ರಿಯರಾಗಿರುವ ರವಿಶಾಸ್ತ್ರಿಗೆ, ‘ರಾತ್ರಿ ಕುಡಿದ ನಶೆ ಇನ್ನೂ ಇಳಿದಿಲ್ಲವೇ’ ಎಂದೂ ಕೆಲವರು ಕುಟುಕಿದ್ದಾರೆ.

    https://twitter.com/RaviShastriOfc/status/1264452066455326720

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts