More

    VIDEO: ಕ್ರಿಕೆಟರ್ ಜೆಮೀಮಾ ಈಗ ರಾಕ್‌ಸ್ಟಾರ್

    ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಲಾಕ್ ಆಗಿರುವ ಸಮಯದಲ್ಲಿ ಕ್ರೀಡಾಪಟುಗಳ ಕೆಲ ವಿಶೇಷ ಪ್ರತಿಭೆಗಳು ಹೊರಬರುತ್ತಿವೆ. ಕ್ರೀಡೆಯನ್ನೇ ಜೀವನವಾಗಿಸಿಕೊಂಡ ಕ್ರೀಡಾಪಟುಗಳು ಲಾಕ್‌ಡೌನ್ ಸಮಯದಲ್ಲಿ ಈ ವಿಶೇಷ ಪ್ರತಿಭೆಯನ್ನೇ ಸಮಯ ಕಳೆಯುವ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟುಗಾರ್ತಿ ಜೆಮೀಮಾ ರೋಡ್ರಿಗಸ್ ಕೂಡ ಈಗ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದು, ತಮ್ಮಲ್ಲಿರುವ ‘ರಾಕ್‌ಸ್ಟಾರ್’ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

    ಇದನ್ನೂ ಓದಿ: ಹೃದಯ ಗೆದ್ದ ಪಾಂಡ್ಯ-ನತಾಶಾ ಸೆಲ್ಫಿ!

    ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಂಗಳೂರು ಮೂಲದ ಮುಂಬೈ ಕ್ರಿಕೆಟರ್ ಜೆಮೀಮಾ, ಸಂಗೀತ ಉಪಕರಣ ಉಕುಲೆಲೆ ನುಡಿಸುತ್ತ ಹಾಡು ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಸಹ-ಆಟಗಾರ್ತಿಯರಿಂದ ‘ಲಿಟಲ್ ಜೆ’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ 19 ವರ್ಷದ ಬ್ಯಾಟುಗಾರ್ತಿ ಜೆಮೀಮಾ, ‘ಚಾಂದ್ ಸ ರೋಶನ್ ಚೆಹರಾ’ ಎಂಬ ಜನಪ್ರಿಯ ಬಾಲಿವುಡ್ ಹಾಡಿನೊಂದಿಗೆ ಮಿಂಚಿದ್ದಾರೆ.

    ಇದನ್ನೂ ಓದಿ: ಅಮ್ಮ ಕ್ರೀಡಾತಾರೆ, ಮಗ ಕ್ರೀಡಾ ವೈದ್ಯ 

    ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ರನ್ನರ್‌ಅಪ್ ಭಾರತ ತಂಡದ ಭಾಗವಾಗಿದ್ದ ಜೆಮೀಮಾ, ಇದುವರೆಗೆ 16 ಏಕದಿನ ಮತ್ತು 43 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸ್ಮತಿ ಮಂದನಾ ಬಳಿಕ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿರುವ ಕೇವಲ 2ನೇ ಭಾರತೀಯ ಮಹಿಳೆ ಎನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts