More

    ರವಿಶಾಸ್ತ್ರಿಯ ಒಂದೇ ಮಾತಿಗೆ ಹೆದರಿ ಯೂಟರ್ನ್‌ ಹೊಡೆದ ಆಸ್ಟ್ರೇಲಿಯಾ: ಆಸಿಸ್‌ ಕರಾಳ ಮುಖ ಬಯಲು!

    ನವದೆಹಲಿ: ನಮ್ಮ ಆಟಗಾರರ ಕುಟುಂಬಕ್ಕೆ ದಿಢೀರನೇ ಪ್ರವೇಶ ನಿರಾಕರಿಸಿದರೆ ನಮ್ಮ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಟೀಂ ಇಂಡಿಯಾ ಕೋಚ್‌ ರವಿಶಾಸ್ತ್ರಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಆಸಿಸ್‌ ಯೂಟರ್ನ್‌ ಹೊಡೆದ ಸಂಗತಿಯನ್ನು ಫೀಲ್ಡಿಂಗ್‌ ಕೋಚ್‌ ಆರ್‌. ಶ್ರೀಧರ್‌ ಅವರು ಬಹಿರಂಗಪಡಿಸಿದ್ದಾರೆ.

    ಸ್ಪಿನ್‌ ಮಾಂತ್ರಿಕ ಆರ್‌. ಅಶ್ವಿನ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಧರ್‌ ಹಾಗೂ ಅಶ್ವಿನ್‌ ಆಸಿಸ್‌ ಪ್ರವಾಸದ ಕರಾಳ ಮುಖವನ್ನು ಅನಾವರಣ ಮಾಡಿದರು.

    ಇದನ್ನೂ ಓದಿರಿ: ಎಸ್​ಐಗೆ ಸಾವಿನ ದಾರಿ ತೋರಿದ ಬ್ಯೂಟಿಷಿಯನ್​ ಬಂಧನ: ಸುಂದರಿಯ ಹೈಡ್ರಾಮಕ್ಕೆ ಬೆದರಿ ನೇಣಿಗೆ ಶರಣು!

    ಮೊದಲು ಮಾತನಾಡಿದ ಅಶ್ವಿನ್‌ 2021 ಆರಂಭಕ್ಕೂ ಮುನ್ನವೇ ಮೆಲ್ಬೋರ್ನ್‌ನಲ್ಲಿ ಸಾಕಷ್ಟು ನಾಟಕ ನಡೆಯಿತು. ನಮ್ಮನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಹ್ವಾನಿಸುವಾಗ ಕರೊನಾ ನಿಯಮಗಳು ಸಡಿಲ ಇರುತ್ತವೆ ಎಂದು ಭರವಸೆ ನೀಡಿದರು. ಈಗಾಗಲೇ ಐಪಿಎಲ್‌ನಲ್ಲಿ 3.5 ತಿಂಗಳು ಬಯೋ ಬಬಲ್‌ (ಕರೊನಾ ನಿಯಮ)ನಲ್ಲಿ ಇದ್ದೀರಿ, ಆಸಿಸ್‌ಗೆ ಬಂದಾಗ 14 ದಿನಗಳ ಕ್ವಾರಂಟೈನ್‌ ಬಿಟ್ಟರೆ ಸಾಫ್ಟ್‌ ಬಬಲ್‌ ಇರುತ್ತದೆ. ಕ್ವಾರಂಟೈನ್‌ ಅವಧಿ ಮುಗಿದ ಬಳಿಕ ಕಾಫಿ, ಸಿನಿಮಾ ಮತ್ತು ಎಂಜಾಯ್‌ ಮಾಡಲು ಹೊರಗಡೆ ಹೋಗಬಹುದು ಎಂದು ಹೇಳಿದರು. ಆದರೆ, ಸರಣಿ ಆರಂಭವಾಗಿ 1-1 ರಿಂದ ಸರಣಿ ಸಮವಾದ ಬೆನ್ನಲ್ಲೆ ನಮ್ಮ ರೂಮಿನಲ್ಲೆ ಉಳಿಯುವಂತೆ ಹೇಳಿದರು ಎನ್ನುತ್ತ ಆಸಿಸ್‌ ಸರ್ಕಾರದ ಕ್ರಮವನ್ನುಅಶ್ವಿನ್‌ ಖಂಡಿಸಿದರು.ನಾವೇಗೆ ರೂಮಿನಲ್ಲಿ ಯಾವಗಲೂ ಉಳಿಯಲು ಸಾಧ್ಯ? ನಾನು ಕುಟುಂಬದ ಜತೆಯಲ್ಲಿ ಇದ್ದೆ. ನಿಜಕ್ಕೂ ಅದು ಸವಾಲಿನ ಸಮಯವಾಗಿತ್ತು ಎಂದು ಹೇಳಿದ್ದಾರೆ.

    ಶ್ರೀಧರ್‌ ಮಾತನಾಡಿ ದುಬೈನಲ್ಲಿ ಕ್ವಾರಂಟೈನ್‌ನಲ್ಲಿ ಇರುವಾಗ ಕುಟುಂಬದೊಂದಿಗೆ ಉಳಿಯಲು ಅನುಮತಿ ನೀಡುವುದಿಲ್ಲ ಎಂದು ದಿಢೀರನೇ ಹೇಳಿಬಿಟ್ಟರು. ಆವಾಗಿನ್ನೂ ಪ್ರವಾಸವೂ ಕೂಡ ಶುರುವಾಗಿರಲಿಲ್ಲ. ಆದರೆ, ಆಗಲೇ ಅವರ ಸ್ಲೆಡ್ಜಿಂಗ್‌ ಶುರುವಾಗಿತ್ತು. ಸಾಕಷ್ಟು ಕರೆಗಳನ್ನು ಮಾಡಿದರೂ ಸಹ ಕುಟುಂಬಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದುಬಿಟ್ಟರು ಎಂದು ಶ್ರೀಧರ್‌ ತಿಳಿಸಿದರು.

    ಇದನ್ನೂ ಓದಿರಿ: ಕಾಲೇಜು ಯುವತಿಯ ಬೆತ್ತಲೆ ಫೋಟೋ ಸ್ನೇಹಿತರ ಕೈಯಲ್ಲಿ! ಮುಂದೆ ನಡೆದೇ ಹೋಯ್ತು ಅವಾಂತರ…

    ಒಟ್ಟು ಏಳು ಕುಟುಂಬವಿತ್ತು. ಆಸಿಸ್‌ ಸರ್ಕಾರಕ್ಕೆ ಹೇಗೆ ಮನವರಿಕೆ ಮಾಡಬೇಕೆಂದು ತಿಳಿಯಲಿಲ್ಲ. ಹೀಗಿರುವಾಗ ರವಿಶಾಸ್ತ್ರಿ ಮಧ್ಯ ಪ್ರವೇಶಿಸಿದರು. ಜೂಮ್‌ ಕಾಲ್‌ನಲ್ಲಿ ಮಾತನಾಡಿದ ಅವರು ನಮ್ಮ ಹುಡುಗರ ಕುಟುಂಬಕ್ಕೆ ಅನುಮತಿ ನೀಡದಿದ್ದರೆ, ನಾವು ಆಸಿಸ್‌ ಪ್ರವಾಸವನ್ನೇ ಬಹಿಷ್ಕರಿಸುತ್ತೇವೆ ಎಂದರು. ನೀವು ಏನಾದರೂ ಮಾಡಿ, ನಾವು ನೋಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ನನಗಿಂತಲೂ ಆಸ್ಟ್ರೇಲಿಯಾ ಬಗ್ಗೆ ಯಾರಿಗೂ ಹೆಚ್ಚಿಗೆ ತಿಳಿದಿಲ್ಲ. ಸುಮಾರು 40 ವರ್ಷಗಳಿಂದಲೂ ನಾನು ಭೇಟಿ ನೀಡುತ್ತಲೇ ಬಂದಿದ್ದೇನೆ. ಅವರೊಂದಿಗೆ ಹೇಗೆ ಮಾತನಾಡಬೇಕೆಂದು ನನಗೆ ತಿಳಿದಿದೆ ಎಂಬ ರವಿಶಾಸ್ತ್ರಿ ಮಾತಿಗೆ ಬಿಸಿಸಿಐ ಒಂದು ಕ್ಷಣ ಬೆರಗಾಯಿತು. ಕೊನೆಗೆ ಆಸಿಸ್‌ ಸರ್ಕಾರ ಕೂಡ ತನ್ನ ನಿಲುವು ಬದಲಿಸಿತು. ಕುಟುಂಬ ಪ್ರವಾಸಕ್ಕೆ ಅನುಮತಿ ನೀಡಿತು ಎಂದು ಶ್ರೀಧರ್‌ ವಿವರಣೆ ನೀಡಿದರು.

    ಕೊನೆಯಲ್ಲಿ ಮಾತನಾಡಿದ ಅಶ್ವಿನ್‌ ಹಿಂದೆದೂ ಈ ರೀತಿ ಆಗಿರಲಿಲ್ಲ ಎಂದು ಆಸಿಸ್‌ ಕರಾಳ ಮುಖ ಪರಿಚಯ ಮಾಡಿದರು. (ಏಜೆನ್ಸೀಸ್‌)

    ಬೆತ್ತಲೆ ಫೋಟೋ ಹರಿಬಿಟ್ಟು ಸಂಭ್ರಮಿಸಿದ ಮಹಿಳೆ: ಕಾರಣ ಕೇಳಿದ್ರೆ ಹೀಗೂ ಉಂಟೆ ಅಂತಿರಾ!

    ಸೆಲ್ಫಿ ತೆಗೆದುಕೊಳ್ಳುವಾಗ ಜೇನುನೊಣಗಳ ದಾಳಿ, ಮೂವರು ನೀರು ಪಾಲು: ಒಬ್ಬ ಹುಡುಗ-ಹುಡುಗಿ ಪಾರು…

    ಹುಣಸೋಡು ಜಿಲೆಟಿನ್ ಲಾರಿ ಸ್ಫೋಟ ಘಟನೆ ನಂತರ ಜನರಿಗೆ ಈ ಅಧಿಕಾರಿ ನೆನಪಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts