ಕುಷ್ಟಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಶಾಸಕ ದೊಡ್ಡನಗೌಡ ಪಾಟೀಲ್‌ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ:http://ಪಡಿತರದಲ್ಲಿ ಸ್ಥಳೀಯ ಆಹಾರ ಧಾನ್ಯ ವಿತರಿಸಿ
ರೈತರು ಮತ್ತು ಕೂಲಿಕಾರರ ಹಿತದೃಷ್ಟಿಯಿಂದ ಪಡಿತರದಲ್ಲಿ ಆಯಾ ಪ್ರದೇಶಕ್ಕನುಗುಣವಾಗಿ ಅಕ್ಕಿ, ರಾಗಿ, ಜೋಳ, ತೊಗರಿಬೇಳೆ, ಅಡುಗೆ ಎಣ್ಣೆ ವಿತರಿಸಬೇಕು.
ನರೇಗಾ ಯೋಜನೆಯಡಿ 90 ದಿನಗಳ ಮಾನವ ದಿನಗಳನ್ನು ಪೂರ್ಣಗೊಳಿಸುವ ಕೂಲಿಕಾರರಿಗೆ ಕಾರ್ಮಿಕ ಕಾರ್ಡ್, ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ವಿರುಪಮ್ಮ ದೋಟಿಹಾಳ, ಭಾರತಿ ಕೇಸೂರು, ಕಾಮಾಕ್ಷಿ ದೋಟಿಹಾಳ, ಕೆಂಚಮ್ಮ ಹನುಮಸಾಗರ, ಬಸವರಾಜ ರಾಯಚೂರು, ದುರ್ಗಮ್ಮ ಹನುಮಸಾಗರ, ಮಹಾದೇವಪ್ಪ ಕೇಸೂರು ಇತರರು ಇದ್ದರು.