More

    ರಟ್ಟಿಹಳ್ಳಿಯಲ್ಲಿ ರಾಘವೇಂದ್ರ ಸ್ವಾಮಿಗಳ ರಥೋತ್ಸವ

    ರಟ್ಟಿಹಳ್ಳಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ನಿಮಿತ್ತ ರಥೋತ್ಸವ ಶನಿವಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

    ಕಳೆದ 3 ದಿನಗಳಿಂದ ರಾಘವೇಂದ್ರ ಸ್ವಾಮಿಗೆ ಕ್ಷೀರಾಭಿಷೇಕ, ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ, ರಾಘವೇಂದ್ರಸ್ವಾಮಿ ಅಷ್ಟೋತ್ತರ ಪಠಣ, ತೊಟ್ಟಿಲು ಮತ್ತು ಪಲ್ಲಕ್ಕಿ ಸೇವೆ ಶ್ರದ್ಧಾ ಭಕ್ತಿಯಿಂದ ಜರುಗಿದವು. ಇತ್ತೀಚಿಗೆ ನವೀಕರಣಗೊಂಡ ಮಠಕ್ಕೆ ಉತ್ತಮವಾಗಿ ದೀಪಾಲಂಕಾರ ಮಾಡಲಾಗಿತ್ತು.

    ಬೆಳಗ್ಗೆ ರಾಯರಿಗೆ ವಿವಿಧ ಪೂಜೆ ಮತ್ತು ಧಾರ್ಮಿಕ ವಿಧಿ-ವಿಧಾನ ಸಲ್ಲಿಸಿದ ನಂತರ ಪ್ರಾರಂಭವಾದ ರಥೋತ್ಸವವು ಸಮ್ಮಾಳ ಮತ್ತು ಧಾರ್ಮಿಕ ವಾದ್ಯಗಳೊಂದಿಗೆ ಸಂಭ್ರಮದಿಂದ ಜರುಗಿತು. ಸ್ಥಳೀಯ ನಿವಾಸಿಗಳು ತಮ್ಮ ಮನೆಯ ಅಂಗಳದಲ್ಲಿ ರಂಗೋಲಿ ಮತ್ತು ಹಸಿರು ತಳಿರು ತೋರಣಗಳಿಂದ ಶೃಂಗಾರಗೊಳಿಸಿ ರಥೋತ್ಸವ ಸ್ವಾಗತಿಸಿದರು.

    ಅರ್ಚಕರಾದ ಗೋಪಾಲ ಆಚಾರ್ಯ, ವಿಜೇಂದ್ರ ಶಿರೋಳ, ರಾಘವೇಂದ್ರ ಆದಿ, ಭೀವಣ್ಣ ಗುಂಡಭಟ್ರ್, ವಿಶ್ವನಾಥ ಅಧ್ಯಾಪಕ, ಜಯಣ್ಣ ಅಧ್ಯಾಪಕ, ಶಂಭಣ್ಣ ಗೂಳಪ್ಪನವರ, ಶ್ಯಾಮರಾವ ಜಾಧವ್, ಸುನಿಲ ನಾಡಗೇರ, ಪ್ರಶಾಂತ ಕುಲ್ಕರ್ಣಿ, ಅನಂತ ಅದ್ವಾನಿ, ಪ್ರಸನ್ನ ಬಿದರಹಳ್ಳಿ, ನರಸಿಂಹ ಅದ್ವಾನಿ, ಗಿರೀಶ ನಾಡಗೇರ, ವಾಸುದೇವ ಶಿರೋಳ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts