More

    ‘ನನ್ನ ಪ್ರಕಾರ ಮದುವೆ, ಲವ್ ಅಂದರೆ’?: ರಶ್ಮಿಕಾ ಹೊಸ ಹೇಳಿಕೆ ವೈರಲ್!

    ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ಒಂದರ ಮೇಲೊಂದು ಚಿತ್ರಗಳಲ್ಲಿ ನಟಿಸುತ್ತಾ ಸದ್ಯ ಸಖತ್ ಬ್ಯೂಸಿಯಾಗಿದ್ದಾರೆ. ನಾಲ್ಕು ಭಾಷೆಗಳಲ್ಲಿ ನಟಿ ಕಮಾಲ್ ಮಾಡುತ್ತಿದ್ದಾರೆ. ರಶ್ಮಿಕಾ ಹೆಚ್ಚು ಸ್ಟಾರ್ ನಟರ ಚಿತ್ರಗಳಿಗೆಯೇ ಆಯ್ಕೆಯಾಗುತ್ತಿರುವುದು ವಿಶೇಷ. ನಟ ಅಲ್ಲು ಅರ್ಜುನ್ ಜತೆಗೆ ಅಭಿನಯಿಸಿದ ‘ಪುಷ್ಪಚಿತ್ರದಿಂದ ರಶ್ಮಿಕಾ ಅವರು ತಾವು ಎಂದಿಗೂ ಊಹಿಸಿದಷ್ಟು ಹೆಸರು ಮಡಿದ್ದಾರೆ. ಆದರೆ, ಇದೀಗ ನಟಿ ತಮ್ಮ ಸಿನಿಮಾಗಳಿಂದ ಅಲ್ಲದೇ, ಒಂದು ಹೊಸ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಹೌದು, ನಟಿ ಅವರ ಖಾಸಗಿ ಜೀವನದ ಬಗ್ಗೆ ಹೇಳಿರುವ ಕೆಲವು ವಿಷಯಗಳಿಂದ ಈಗ ಹೆಚ್ಚು ಸುದ್ದಿ ಆಗುತ್ತಿದ್ದಾರೆ.
    ಇದೀಗ, ಮದುವೆ ಬಗ್ಗೆ ಕಿರಕ್ಬೆಡಗಿ ರಶ್ಮಿಕಾ ಅವರು ಮಾತಾಡಿದ್ದು ಅವರ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸಂದರ್ಶನವೊಂದರಲ್ಲಿ ರಶ್ಮಿಕಾ ಮದುವೆ, ಲವ್ ವಿಚಾರಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ನಟ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಅವರ ಸ್ನೇಹದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಅನೇಕ ಬಾರಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಅನುಮಾನಗಳಿಗೆ ಇವರೇ ದಾರಿ ಮಾಡಿಕೊಟ್ಟರು. ಹಾಗಾಗಿ, ಶ್ರೀವಲ್ಲಿಯನ್ನು ಮೊದಲು ಲವ್ ಬಗ್ಗೆ ಕೇಳಲಾಗಿತ್ತು. ಆಗ ರಶ್ಮಿಕಾ ಅವರು, ”ಲವ್​ ಎಂದರೆ ಪರಸ್ಪರ ಸಮಯ, ಗೌರವವನ್ನು ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ನೀಡುವುದು.
    ಒಬ್ಬರ ಜೊತೆ ಇದ್ದಾಗ ಸುರಕ್ಷಿತವಾಗಿದ್ದೀವಿ ಅನಿಸಿದರೆ, ಆ ಭಾವನೆ ಪ್ರೀತಿ. ಪ್ರೀತಿ ಎಂಬುದು ಪೂರ್ತಿಯಾಗಿ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಅದನ್ನು ವಿವರಿಸುವುದು ಕಷ್ಟ. ಎರಡೂ ಕಡೆಯಿಂದಲೂ ಎಲ್ಲವೂ ನೆಟ್ಟಗಿದ್ದರೆ ಆಗ ಆ ಪ್ರೀತಿ ಫಲಿಸುತ್ತದೆ. ಕೇವಲ ಒಬ್ಬರ ಕಡೆಯಿಂದ ನಿಜವಾದ ಪ್ರೀತಿ ಇದ್ದರೂ, ಅದು ವೇಸ್ಟ್’’ ಎಂದು ಹೇಳಿದ್ದಾರೆ. ನಂತರ, ಮದುವೆ ಯಾವಾಗ ಎಂಬುದಕ್ಕೂ, ‘’ಇದರ ಬಗ್ಗೆ ಏನು ಆಲೋಚನೆ ಮಾಡಬೇಕು ಅಂತ ನನಗೆ ಇನ್ನೂ ತಿಳಿದಿಲ್ಲ. ಮದುವೆ ಆಗಲು ನಾನಿನ್ನೂ ತುಂಬಾ ಚಿಕ್ಕವಳು. ಮದುವೆ ಬಗ್ಗೆ ಯಾವ ನಿರ್ಧಾರ ಮಾಡಿಲ್ಲ’’, ಎಂದು ನಟಿ ತಿಳಿಸಿದ್ದಾರೆ. ರಶ್ಮಿಕಾಳ ಈ ಉತ್ತರಗಳು ಸಾಮಾಜಿಕ ಜಾಲತಾಣದಲ್ಲಿ ಸಣ್ಣ ಸಣ್ಣ ರೀಲ್ಸ್ ವಿಡಿಯೋಗಳಾಗಿ ವೈರಲ್ ಆಗುತ್ತಿವೆ

    ಚಿತ್ರರಂಗದ ವಿರುದ್ಧ ಗರಂ ಆಗಿ, ಜಗನ್​ಗೆ ಸಹಮತ ಸೂಚಿಸಿದರೇ ಬಾಲಯ್ಯ?

    ‘ಶರ್ಟ್​​ ಅನ್ನು ಉಲ್ಟಾ ಧರಿಸಿದ್ದೀರಾ’?: ಹಿಗ್ಗಾಮುಗ್ಗಾ ಟ್ರೋಲ್ ಆದ ಊರ್ಫಿ ಜಾವೇದ್!

    ನಟಿ ರಮ್ಯಾ ಕೊಟ್ಟ ಗಿಫ್ಟ್ ಬಗ್ಗೆ ಹಂಚಿಕೊಂಡ ಅಮೂಲ್ಯ! ಏನದರ ಸ್ಪೆಷಾಲಿಟಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts