More

    30 ಅಂಡರ್​ 30 ಏಷ್ಯನ್​ ಸೆಲೆಬ್ರಿಟಿ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ

    ಮುಂಬೈ: ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಹಲವು ಟಾಪ್​ ಟೆನ್​ ಸಮೀಕ್ಷೆಗಳಾಗಿವೆ. ಅತ್ಯುತ್ತಮ ನಟ, ಚಿತ್ರ, ನಟಿ ಸೇರಿದಂತೆ ಹಲವು ಸಂಸ್ಥೆಗಳು, ಹಲವು ರೀತಿಯ ಸಮೀಕ್ಷೆಗಳನ್ನು ಮಾಡಿವೆ. ಈಗ ಈಸ್ಟರ್ನ್​ ಐ ಎಂಬ ಸಂಸ್ಥೆಯು 30 ಅಂಡರ್​ 30 ಏಷ್ಯನ್​ ಸೆಲೆಬ್ರಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಸಹ ಇರುವುದು ವಿಶೇಷ.

    ಇದನ್ನೂ ಓದಿ: ‘ಡ್ಯಾಶ್​’ ಹಾಡಿಗೆ ಕೋಟಿ ವೀಕ್ಷಣೆ … ಖುಷಿಯಾದರು ಚಂದನ್​, ಸಂಜನಾ

    30 ಅಂಡರ್​ 30 ಏಷ್ಯನ್​ ಸೆಲೆಬ್ರಿಗಳ ಎಂಬ ಹೆಸರೇ ಹೇಳುವಂತೆ 30ರ ವಯಸ್ಸಿನ ಒಳಗಿರುವ 30 ಸೆಲೆಬ್ರಿಟಿ ಪಟ್ಟಿಗಳು ಇಲ್ಲಿದೆ. ಇದು ಬರೀ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಏಷ್ಯಾದ ಸೆಲೆಬ್ರಿಟಿಗಳು ಇಲ್ಲಿದ್ದು, ಇದರಲ್ಲಿ ಭಾರತದಿಂದಲೂ 10 ಮಂದಿ ಇದ್ದಾರೆ ಎನ್ನುವುದು ವಿಶೇಷ.

    ಈ ಪಟ್ಟಿಯಲ್ಲಿ ಕಾಣುವ ಪ್ರಮು ಹೆಸರುಗಳೆಂದರೆ ಅದು ರಶ್ಮಿಕಾ ಮತ್ತು ಆಲಿಯಾ ಭಟ್​ ಅವರದ್ದು. ರಶ್ಮಿಕಾ ದಕ್ಷಿಣ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿದರೆ, ಬಾಲಿವುಡ್​ನಿಂದ ಆಲಿಯಾ ಹೆಸರು ಪ್ರಮುಖವಾಗಿ ಕಾಣಿಸುತ್ತಿದೆ. ಮಿಕ್ಕಂತೆ ಅಹಾನ್​ ಶೆಟ್ಟಿ, ಸಂಗೀತಗಾರ ಅರ್ಮಾನ್​ ಮಲ್ಲಿಕ್​, ಅವಂತಿಕಾ ವಂದನಾಪು, ಆಲಯಾ ಫರ್ನೀಚರ್​ವಾಲ, ಅಖಿಲ್​ ಅಕ್ಕಿನೇನಿ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ.

    ಇದನ್ನೂ ಓದಿ: ಒಂದು ‘ಲಾಂಗ್​ ಡ್ರೈವ್​’ಗೂ ಮೊದಲು ಮತ್ತು ಆ ನಂತರ …

    ಈ ಪಟ್ಟಿಯಲ್ಲಿ ರಶ್ಮಿಕಾ ಹೆಸರು ಕಾಣಿಸಿಕೊಳ್ಳುವುದಕ್ಕೆ ಪ್ರಮುಖವಾಗಿ ‘ಪುಷ್ಪ – ದಿ ರೈಸ್​’ ಕಾರಣ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಯಶಸ್ಸಿನಿಂದಾಗಿ ರಶ್ಮಿಕಾ ಬಾಲಿವುಡ್​ಗೂ ಎಂಟ್ರಿ ಕೊಟ್ಟು, ನ್ಯಾಷನಲ್​ ಕ್ರಶ್​ ಆದರು ಎಂಬುದರಲ್ಲಿ ಎರಡು ಮಾತಿಲ್ಲ. ಸದ್ಯ ‘ಪುಷ್ಪ’ ಚಿತ್ರದ ಸೀಕ್ವೆಲ್​ನಲ್ಲಿ ನಟಿಸುತ್ತಿರುವ ರಶ್ಮಿಕಾ, ‘ಅನಿಮಲ್​’ ಎಂಬ ರಣಬೀರ್ ಕಪೂರ್ ಅಭಿನಯದ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    ನರೇಶ್​-ಪವಿತ್ರಾ ಲೋಕೇಶ್​ ಪ್ರಕರಣದಲ್ಲಿ ಸ್ಫೋಟಕ ಟ್ವಿಸ್ಟ್​: 3ನೇ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ ನರೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts