ಅಪ್ಪು ಅಭಿಮಾನಿಗಳಿಂದ ರಶ್ಮಿಕಾಗೆ ಛೀಮಾರಿ! ಕಾರಣ ಗೊತ್ತಾ?

ಕನ್ನಡ ಭಾಷೆಯ ಬಗ್ಗೆ ಮತ್ತು ಕನ್ನಡ ಸಿನಿಮಾಗಳ ಮೇಲೆ ಪ್ರೀತಿ, ಗೌರವ ಇಲ್ಲದ ಕಾರಣ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ, ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಅದರಲ್ಲಿಯೂ, ಈ ಬಾರಿ ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾದ ನಟಿ ರಶ್ಮಿಕಾ ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಮಾರ್ಚ್ 17 ರಂದು ರಾಜ್ಯದೆಲ್ಲೆಡೆ ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರ ಹುಟ್ಟು ಹುಬ್ಬವನ್ನು ಅವರು ಈಗ ಭೌತಿಕವಾಗಿ ಇಲ್ಲಿ ಇಲ್ಲದಿದ್ದರೂ, ತುಂಬಾನೆ ವೈಭವವಾಗಿ ಆಚರಿಸಿಲಾಗಿತ್ತು.
ಬೇರೆ ಬೇರೆ ರಾಜ್ಯದ ಸ್ಟಾರ್​ ನಟರುಗಳು ಅಪ್ಪು ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿ ಜತೆಗೆ ಅಂದು ರಿಲೀಸ್ ಆದ ನಟನ ಕೊನೆಯ ಸಿನಿಮಾ ಜೇಮ್ಸ್ಹಿಟ್ ಆಗಲಿ ಎಂದು ಆಶಿಸಿದರು. ಆದರೆ, ಕನ್ನಡದ ನಟಿಯಾಗಿ ಜತೆಗೆ ಅಪ್ಪು ಅವರ ಜತೆಗೆ ನಟಿಸಿದರೂ ರಶ್ಮಿಕಾ ಮಂದಣ್ಣ ಮಾತ್ರ ಪುನೀತ್ ರಾಜ್​ಕುಮಾರ್ ಅವರನ್ನು ಅಂದು ನೆನಪಿಸಿಕೊಂಡಿಲ್ಲ. ಹೌದು, ಅಪ್ಪು ಅವರು ನಿಧನರಾದಾಗಲೂ ನಟಿ ರಶ್ಮಿಕಾ ಮಂದಣ್ಣ ಅವರು ಅವರ ಬಗ್ಗೆ ಯಾವ ಒಂದು ಮಾಧ್ಯಮದಲ್ಲಿಯೂ ಒಂದು ಮಾತು ಸಹ ಮಾತಾಡಲೂ ಇಲ್ಲ. ಕೇವಲ, ನಟ ಪುನೀತ್ ರಾಜ್​ಕುಮಾರ್ ಅವರ ಕೊನೆಯ ದರ್ಶನ ಪಡೆದರು ಹೊರಟರು. ಆಗ, ಅಪ್ಪು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದ್ದರು ರಶ್ಮಿಕಾ ಮಂದಣ್ಣ.
ಇಷ್ಟೆಲ್ಲಾ ಆದ ಬಳಿಕವೂ, ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಅವರು ಟಾಲಿವುಡ್ ನಟ ಅಲ್ಲು ಅರ್ಜುನ್ 40ನೇ ಹುಟ್ಟು ಹಬ್ಬಕ್ಕೆ (ಏಪ್ರಲ್ 8 ರಂದು) ಬೆಳ್ಳಂಬೆಳಗ್ಗೆ ಶುಭಾಶಯಗಳು ತಿಳಿಸಿದ್ದಾರೆ. ಹೀಗೆ, ನಟಿ ರಶ್ಮಿಕಾ ಹಲವು ಬಾರಿ ಹಲವು ಪರಭಾಷೆಯ ನಟ-ನಟಿಯರಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. ಹಾಗಾದರೆ, ರಶ್ಮಿಕಾಗೆ ಕೇವಲ ಪರಭಾಷೆಯ ನಟನಟಿಯರ ಹುಟ್ಟು ಹಬ್ಬ ಮಾತ್ರ ನೆನಪಿರುತ್ತೆ? ಎಂದು ನೆಟ್ಟಿಗರು ಪ್ರಶ್ನಿಸ ತೊಡಗಿದ್ದಾರೆ. ಕರುನಾಡ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹುಟ್ಟು ಹಬ್ಬ ನಟಿಗೆ ನೆನಪಿಲ್ಲವೇ? ಎಂದು ಹಿಗ್ಗಾಮುಗ್ಗಾ ಛೀಮಾರಿ ಹಾಕುತ್ತಿದ್ದಾರೆ. ನಟಿ ರಶ್ಮಿಕಾಗೆ ಯಾವಾಗಲೂ ಪರಭಾಷೆಯ ಸೆಲೆಬ್ರಿಟಿಗಳನ್ನು ಮೆಚ್ಚಿಸಲು, ಒಲಿಸಿಕೊಳ್ಳಲು ನಾಚಿಕೆಯಾಗಬೇಕು ಎಂದು ಕೆಲವು ನೆಟ್ಟಿಗರು ಕಿಡಿಕಾರಿದ್ದಾರೆ

Contents
ಕನ್ನಡ ಭಾಷೆಯ ಬಗ್ಗೆ ಮತ್ತು ಕನ್ನಡ ಸಿನಿಮಾಗಳ ಮೇಲೆ ಪ್ರೀತಿ, ಗೌರವ ಇಲ್ಲದ ಕಾರಣ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ, ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಅದರಲ್ಲಿಯೂ, ಈ ಬಾರಿ ಕರುನಾಡ ಪವರ್ ಸ್ಟಾರ್ ನಟ ಪುನೀತ್ ರಾಜ್​ಕುಮಾರ್ ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾದ ನಟಿ ರಶ್ಮಿಕಾ ಎಲ್ಲರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಮಾರ್ಚ್ 17 ರಂದು ರಾಜ್ಯದೆಲ್ಲೆಡೆ ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರ ಹುಟ್ಟು ಹುಬ್ಬವನ್ನು ಅವರು ಈಗ ಭೌತಿಕವಾಗಿ ಇಲ್ಲಿ ಇಲ್ಲದಿದ್ದರೂ, ತುಂಬಾನೆ ವೈಭವವಾಗಿ ಆಚರಿಸಿಲಾಗಿತ್ತು.ಬೇರೆ ಬೇರೆ ರಾಜ್ಯದ ಸ್ಟಾರ್​ ನಟರುಗಳು ಅಪ್ಪು ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿ ಜತೆಗೆ ಅಂದು ರಿಲೀಸ್ ಆದ ನಟನ ಕೊನೆಯ ಸಿನಿಮಾ ‘ಜೇಮ್ಸ್‘ ಹಿಟ್ ಆಗಲಿ ಎಂದು ಆಶಿಸಿದರು. ಆದರೆ, ಕನ್ನಡದ ನಟಿಯಾಗಿ ಜತೆಗೆ ಅಪ್ಪು ಅವರ ಜತೆಗೆ ನಟಿಸಿದರೂ ರಶ್ಮಿಕಾ ಮಂದಣ್ಣ ಮಾತ್ರ ಪುನೀತ್ ರಾಜ್​ಕುಮಾರ್ ಅವರನ್ನು ಅಂದು ನೆನಪಿಸಿಕೊಂಡಿಲ್ಲ. ಹೌದು, ಅಪ್ಪು ಅವರು ನಿಧನರಾದಾಗಲೂ ನಟಿ ರಶ್ಮಿಕಾ ಮಂದಣ್ಣ ಅವರು ಅವರ ಬಗ್ಗೆ ಯಾವ ಒಂದು ಮಾಧ್ಯಮದಲ್ಲಿಯೂ ಒಂದು ಮಾತು ಸಹ ಮಾತಾಡಲೂ ಇಲ್ಲ. ಕೇವಲ, ನಟ ಪುನೀತ್ ರಾಜ್​ಕುಮಾರ್ ಅವರ ಕೊನೆಯ ದರ್ಶನ ಪಡೆದರು ಹೊರಟರು. ಆಗ, ಅಪ್ಪು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದ್ದರು ರಶ್ಮಿಕಾ ಮಂದಣ್ಣ.ಇಷ್ಟೆಲ್ಲಾ ಆದ ಬಳಿಕವೂ, ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಅವರು ಟಾಲಿವುಡ್ ನಟ ಅಲ್ಲು ಅರ್ಜುನ್ 40ನೇ ಹುಟ್ಟು ಹಬ್ಬಕ್ಕೆ (ಏಪ್ರಲ್ 8 ರಂದು) ಬೆಳ್ಳಂಬೆಳಗ್ಗೆ ಶುಭಾಶಯಗಳು ತಿಳಿಸಿದ್ದಾರೆ. ಹೀಗೆ, ನಟಿ ರಶ್ಮಿಕಾ ಹಲವು ಬಾರಿ ಹಲವು ಪರಭಾಷೆಯ ನಟ-ನಟಿಯರಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. ಹಾಗಾದರೆ, ರಶ್ಮಿಕಾಗೆ ಕೇವಲ ಪರಭಾಷೆಯ ನಟ–ನಟಿಯರ ಹುಟ್ಟು ಹಬ್ಬ ಮಾತ್ರ ನೆನಪಿರುತ್ತೆ? ಎಂದು ನೆಟ್ಟಿಗರು ಪ್ರಶ್ನಿಸ ತೊಡಗಿದ್ದಾರೆ. ಕರುನಾಡ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹುಟ್ಟು ಹಬ್ಬ ನಟಿಗೆ ನೆನಪಿಲ್ಲವೇ? ಎಂದು ಹಿಗ್ಗಾ–ಮುಗ್ಗಾ ಛೀಮಾರಿ ಹಾಕುತ್ತಿದ್ದಾರೆ. ನಟಿ ರಶ್ಮಿಕಾಗೆ ಯಾವಾಗಲೂ ಪರಭಾಷೆಯ ಸೆಲೆಬ್ರಿಟಿಗಳನ್ನು ಮೆಚ್ಚಿಸಲು, ಒಲಿಸಿಕೊಳ್ಳಲು ನಾಚಿಕೆಯಾಗಬೇಕು ಎಂದು ಕೆಲವು ನೆಟ್ಟಿಗರು ಕಿಡಿಕಾರಿದ್ದಾರೆ. 

ಕೈ ಜಾರಿದ ವಿಲ್ ಸ್ಮಿತ್​ಗೆ 10 ವರ್ಷ ಬ್ಯಾನ್! ಬಾಯಿ ಜಾರಿದ ಕ್ರಿಸ್ ರಾಕ್​ಗೆ ಶಿಕ್ಷೆ ಯಾಕಿಲ್ಲ?

ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?

ಆಲಿಯಾ-ರಣ್‌ಬೀರ್ ಮದುವೆ, 4 ದಿನಗಳ ಅದ್ಧೂರಿ ಕಾರ್ಯಕ್ರಮವಾಗಲಿದೆಯೇ? ಇಲ್ಲಿದೆ ವಿವರ
Share This Article

ಯಾವುದೇ ಕೆಲಸಕ್ಕೆ ಹೊರಗೆ ಹೋಗುವಾಗ ಸೀನುವುದು ಒಳ್ಳೆಯದಲ್ಲ! ಇದು ಯಾವುದರ ಸೂಚನೆ ಎಂದು ನಿಮಗೆ ತಿಳಿದಿದೆಯೇ? Sneezing

Sneezing  : ನಾವು ಯಾವುದೇ ಪ್ರಮುಖ ಕೆಲಸದ ಮೇಲೆ ಹೊರಗೆ ಹೋದಾಗ, ಕೆಲವು ಅನಿರೀಕ್ಷಿತ ಘಟನೆಗಳು…

ನೀವು ಪ್ರತಿದಿನ ಬಿಸಿನೀರಿನಿಂದ ಸ್ನಾನ ಮಾಡುತ್ತೀರಾ? ಇದನ್ನು ತಿಳಿದುಕೊಳ್ಳಲೇಬೇಕು.. Bathing

Bathing : ಪ್ರತಿನಿತ್ಯ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ನಾವು ವಾತಾವರಣಕ್ಕೆ ಹೊಂದಿಕೆಯಾಗಿ ಬಿಸಿ, ತಣ್ಣಿರನ್ನು…