More

    ಕರೊನಾ ಸಂಕಷ್ಟದಲ್ಲಿ ಖುಲಾಯಿಸಿದ ಅದೃಷ್ಟ; ಒಂದೇ ಮೀನಿಗೆ 20 ಲಕ್ಷ ರೂಪಾಯಿ..! ಏನಿದರ ವಿಶೇಷ?

    ದಿಘಾ (ಪಶ್ಚಿಮ ಬಂಗಾಳ): ಕರೊನಾ ಸಂಕಷ್ಟ ಕಾಲದಲ್ಲಿ ಪಶ್ಚಿಮ ಬಂಗಾಳದ ಮೀನುಗಾರರಿಗೆ ಅದೃಷ್ಟ ಖುಲಾಯಿಸಿದೆ. ಅವರ ಟ್ರಾಲರ್​ ಬೋಟ್​ನಲ್ಲಿ ಸೆರೆ ಸಿಕ್ಕ ಒಂದೇ ಮೀನು 20 ಲಕ್ಷ ರೂ. ಹೆಚ್ಚಿನ ಬೆಲೆಯುಳ್ಳದ್ದಾಗಿದೆ. ಈ ಮೀನು ಸಿಕ್ಕಿರುವುದು ಬೋಟ್​ನವರಿಗೆ ಲಾಟಿರಿ ಹೊಡೆದಂತಾಗಿದೆ. ಈ ಮೀನನ್ನು ನೋಡಲು ಬಂದರಿನಲ್ಲಿ ಜನಸಾಗರವೇ ನೆರೆದಿತ್ತು.

    ದಿಘಾದ ಕಡಲ ತೀರಕ್ಕೆ ಬಂದ ಬೋಟ್​ನಲ್ಲಿತ್ತು ಕಪ್ಪು ಬನ್ಣದ ಚಿಲ್​ಶಂಕರ್​ ಮೀನು. ಇದು ಭಾರಿ ಅಪರೂಪ. ಅದರಲ್ಲೂ ಪಶ್ಚಿಮ ಬಂಗಾಳದ ಕಡಲಲ್ಲಿ ಕಾಣ ಸಿಗುವುದೇ ಇಲ್ಲ. ಹೀಗಾಗಿ ಇದಕ್ಕೆ ಭಾರಿ ಬೆಲೆ ಹಾಗೂ ಬೇಡಿಕೆಯಿದೆ.

    ಇದನ್ನೂ ಓದಿ; ಅಮೆರಿಕ ಸರ್ಕಾರಕ್ಕೇ 41 ಕೋಟಿ ರೂ. ಮುಂಡಾಯಿಸಿದ ಮುಕುಂದ್​ ಮೋಹನ್​; ಕರೊನಾ ಸಂಕಷ್ಟದಲ್ಲಿ ಖತರ್ನಾಕ್​ ಐಡಿಯಾ…!

    ಈ ಚಿಲ್​ಶಂಕರ್​ ಮೀನು ಭಾರಿ ಭಾರವಾಗಿರುತ್ತದೆ. ಸೋಮವಾರ ಬಲೆಗೆ ಬಿದ್ದಿರುವ ಮೀನು ಬರೋಬ್ಬರಿ 800 ಕೆಜಿ ತೂಗುತ್ತಿದೆ. ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬೇಕೆಂದರೆ ಹಗ್ಗ ಹಾಕಿ ಎಳೆದೊಯ್ಯಬೇಕಷ್ಟೇ.

    ಸ್ಥಳೀಯ ಮೀನುಗಾರಿಕಾ ಸಹಕಾರ ಸಂಘದ ಮಾರುಕಟ್ಟೆಯಲ್ಲಿ ಇದರ ಸಗಟು ಬೆಲೆಯನ್ನು ಪ್ರತಿ ಕೆ.ಜಿಗೆ 2,100 ರೂ. ನಿಗದಿಪಡಿಸಲಾಗಿದೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಇದು 20 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಬಿಕರಿಯಾಗಲಿದೆ.

    ಇದನ್ನೂ ಓದಿ; ಕರೊನಾ ಲಸಿಕೆಯಿಂದ ಡಿಎನ್​ಎ ಬದಲಾವಣೆ; 7 ಲಕ್ಷ ಜನರಿಗೆ ಅಡ್ಡ ಪರಿಣಾಮ; ಇಲ್ಲಿದೆ ಫ್ಯಾಕ್ಟ್​ ಚೆಕ್​….! 

    ಮೀನಿನ ಮೂಳೆ ಹಾಗೂ ಎಣ್ಣೆ ಔಷಧೀಯ ಉದ್ದೇಶಕ್ಕೆ ಬಳಕೆಯಾದರೆ, ಇನ್ನುಳಿದದ್ದು ಖಾದ್ಯವಾಗಿ ಸವಿಯಲ್ಪಡುತ್ತದೆ ಎಂದು ಮೀನುಗಾರರು ಹೇಳುತ್ತಾರೆ.

    ಮಕ್ಕಳು ಬೇಡ, ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಲಿ; ಡೆತ್​ನೋಟ್​ ಬರೆದಿಟ್ಟು ಪಯಣ ಮುಗಿಸಿದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts