More

    ಕೋಲುಮಂಡೆ ಸಾಂಗ್​ ವಿವಾದ: ಸ್ಪಷ್ಟನೆ ನೀಡಿ, ಕ್ಷಮೆಯಾಚಿಸಿದ ರ‍್ಯಾಪರ್​ ಚಂದನ್​ ಶೆಟ್ಟಿ!

    ಬೆಂಗಳೂರು: ಮೊನ್ನೆಯಷ್ಟೇ ಬಿಡುಗಡೆಯಾದ “ಕೋಲು ಮಂಡೆ ಜಂಗಮ ದೇವರು” ರ‍್ಯಾಪ್​ ಸಾಂಗ್ ವಿವಾದ ಕಿಡಿ ಹೊತ್ತಿಸಿದ ಬೆನ್ನಲ್ಲೇ ರ‍್ಯಾಪರ್​ ಚಂದನ್​ ಶೆಟ್ಟಿ ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

    ಮೊದಲಿಗೆ ಚಾಮರಾಜನಗರ ಜಾನಪದ ಕಲಾವಿದರಿಗೆ ಧನ್ಯವಾದ ತಿಳಿಸಿರುವ ಚಂದನ್​, ಇದೇ ತಿಂಗಳ 22 ರಂದು ಯೂಟ್ಯೂಬ್‌ನಲ್ಲಿ ಕೋಲುಮಂಡೆ ಎಂಬ ಸಾಂಗ್​ ಬಿಡುಗಡೆ ಮಾಡಿದ್ದೆ. ಈ ಸಾಂಗ್​ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಬರುತ್ತಿದೆ. ಯಾವುದೇ ವ್ಯಕ್ತಿ, ಜಾತಿ ಮತ್ತು ಧರ್ಮಕ್ಕೆ ಅವಮಾನ ಮಾಡಬೇಕೆಂಬ ಉದ್ದೇಶದಿಂದ ಸಾಂಗ್​ ಮಾಡಿಲ್ಲ. ಒಳ್ಳೆಯ ಉದ್ದೇಶದಿಂದ ಸಾಂಗ್​ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: VIDEO| ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈಗೆ ದಕ್ಷತೆ ಪಟ್ಟ ತಂದುಕೊಟ್ಟ ರೋಚಕ ಘಟನೆಗಳಿವು!

    ಈಗಿನ ಪೀಳಿಗೆ ಮಕ್ಕಳಿಗೆ ಪ್ರಸ್ತುತ ಮ್ಯೂಸಿಕ್​ ಅನ್ನು ಮಿಕ್ಸ್​ ಮಾಡಿ ಇಂತಹ ಸಾಂಗ್​ ಅನ್ನು ನೀಡಿದಾಗ ಅದನ್ನು ಮುಂದಿನ ಪೀಳಿಗೆಗೆ ಅವರು ಕೊಂಡೊಯ್ಯುತ್ತಾರೆ ಎಂಬ ನಿಟ್ಟಿನಿಲ್ಲಿ ಈ ಸಾಂಗ್​ ಮಾಡಿದ್ದೇವೆ. ಈ ಹಾಡಿನಲ್ಲಿ ಬರುವ ಶಂಕಮ್ಮ ಪಾತ್ರಕ್ಕೆ ಅವಮಾನ ಮಾಡುವ ನಿಟ್ಟಿನಿಲ್ಲಿ ದೃಶ್ಯ ಚಿತ್ರೀಕರಣ ಮಾಡಿಲ್ಲ. ಏನಾದರೂ ತಪ್ಪಾಗಿದ್ದರೆ, ಅದು ನಮ್ಮ ಅರಿವೆ ಬರದೇ ಆಗಿರುತ್ತದೆ. ಹೀಗಾಗಿ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದಿದ್ದಾರೆ.

    ನಮ್ಮ ಸಂಸ್ಕೃತಿಯಲ್ಲಿ ಯಾವೆಲ್ಲಾ ಕಲೆಯಿಂದ ಎಂದು ಸಾರುವ ಉದ್ದೇಶದಿಂದ ಈ ಸಾಂಗ್​ ಮಾಡಿದೆ. ಇದಕ್ಕೆ ನಿಮ್ಮ ಸಹಕಾರ ಇರಲಿ. ಏನಾದರೂ ನಿಮಗೆ ಇದರಿಂದ ನೋವಾಗಿದ್ದರೆ ನಮ್ಮ ಇಡೀ ತಂಡದ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆಂದು ಚಂದನ್​ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಮಾದಪ್ಪನ ಗೀತೆಗೆ ಅಪಮಾನ: ಚಂದನ್​ ಶೆಟ್ಟಿ ವಿರುದ್ಧ ಸಿಡಿದೆದ್ದ ಚಾಮರಾಜನಗರ ಯುವಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts