More

    VIDEO| ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈಗೆ ದಕ್ಷತೆ ಪಟ್ಟ ತಂದುಕೊಟ್ಟ ರೋಚಕ ಘಟನೆಗಳಿವು!

    ಬೆಂಗಳೂರು: ದಕ್ಷ ಅಧಿಕಾರಿಯಾಗಿ ಮನೆಮಾತಾಗಿದ್ದ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ದಿಢೀರ್​ ರಾಜೀನಾಮೆಯಿಂದ ಅಸಂಖ್ಯಾತ ಅಭಿಮಾನಿಗಳು ಬೇಸರಗೊಂಡಿದ್ದರು. ಅಣ್ಣಾಮಲೈ ಅವರ ಸೇವೆಯನ್ನು ಬಯಸಿದ್ದ ಅನೇಕರಿಗೆ ನಿರಾಸೆಯು ಆಗಿತ್ತು. ರಾಜೀನಾಮೆ ಹಿಂಪಡೆಯುವಂತೆ ಸಾವಿರಾರು ಮಂದಿ ಕರೆ ಮಾಡಿ ಒತ್ತಾಯ ಕೂಡ ಮಾಡಿದ್ದರು.

    ತುಂಬಾ ದಿನಗಳವರೆ ಅಣ್ಣಾಮಲೈ ಅವರು ಸುಮ್ಮನಿದಿದ್ದನ್ನು ನೋಡಿ ನಮಗಿನ್ನೂ ಅವರ ಸೇವೆ ಸಿಗುವುದಿಲ್ಲವೇನೋ ಅಂದುಕೊಂಡಿದ್ದ ಜನರಿಗೆ ಇದೀಗ ಗುಡ್​ ನ್ಯೂಸ್​ಸಿಕ್ಕಿದೆ. ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಅಣ್ಣಾಮಲೈ ಇಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಜನರ ಸೇವೆಗೆ ಮತ್ತಷ್ಟು ಹತ್ತಿರವಾಗಲು ಸಿದ್ಧರಾಗಿದ್ದಾರೆ.

    ದೆಹಲಿಯ ಬಿಜೆಪಿ ಕಚೇರಿಯಲ್ಲಿಂದು ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಅಣ್ಣಾಮಲೈ ಬಿಜೆಪಿ ಸೇರಲಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್​ ಇಲಾಖೆಯಲ್ಲಿ ಓರ್ವ ದಕ್ಷ ಅಧಿಕಾರಿಯಾಗಿ ಅಣ್ಣಾಮಲೈ ಅವರು ತಮ್ಮದೇ ಛಾಪು ಮೂಡಿಸಿದ ಒಂದಿಷ್ಟು ಘಟನೆಗಳ ಮೆಲುಕು ಇಲ್ಲಿದೆ.

    ರಸ್ತೆ ತಡೆ ಮಾಡಿದವರಿಗೆ ಅವಾಜ್​
    ಒಮ್ಮೆ ಸಣ್ಣ ಅಪಘಾತ ಪ್ರಕರಣವೊಂದರಲ್ಲಿ ಗ್ರಾಮಸ್ಥರು ಹಾಗೂ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಸಬ್​ ಇನ್ಸ್​ಪೆಕ್ಟರ್​ ನಡುವೆ ಘರ್ಷಣೆ ಉಂಟಾಗಿತ್ತು. ಈ ವೇಳೆ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಭಾರಿ ಹೈಡ್ರಾಮ ಸೃಷ್ಟಿಸಿದ್ದರು. ಈ ವೇಳೆ ಅಲ್ಲಿನ ಪೊಲೀಸ್​ ವರಿಷ್ಠಾಧಿಕಾರಿಯಾಗಿದ್ದ ಅಣ್ಣಾಮಲೈ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಾನೂನಿಗಿಂತ ದೊಡ್ಡವರ ನೀವು ತಾಕತ್ತಿದ್ದರೆ ನನ್ನ ಮುಂದೆ ರಸ್ತೆ ತಡೆಯಿರಿ ಎಂದು ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತಂದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

    ಉದ್ವಿಗ್ನ ಚಿಕ್ಕಮಗಳೂರನ್ನು ಎರಡೇ ಗಂಟೆಯಲ್ಲಿ ನಿಯಂತ್ರಣ
    2017ರಲ್ಲಿ ಚಿಕ್ಕಮಗಳೂರಿನಲ್ಲಿ ದತ್ತಮಾಲಾ ನಡೆಯಿತು. ಈ ವೇಳೆ ಇನಾಂ ದತ್ತಾತ್ರೆಯ ಪೀಠಕ್ಕೆ ವಿವಿಧೆಡೆಗಳಿಂದ ಸಹಸ್ರಾರು ದತ್ತಮಾಲಾಧಾರಿಗಳು ಬಂದಿದ್ದರು. ಇವರಲ್ಲಿ ಓರ್ವ ದತ್ತಪೀಠ ಆವರಣದ ಬೇಲಿ ಜಿಗಿದು ನಿರ್ಬಂಧಿತ ಪ್ರದೇಶದಲ್ಲಿ ಭಾಗವಾಧ್ವಜ ನೆಟ್ಟಿದ್ದರ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಎಸ್​ಪಿ ಅಣ್ಣಾಮಲೈ ನೇತೃತ್ವದ ಪೊಲೀಸ್​ ತಂಡ ಎರಡೇ ಗಂಟೆಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು.

    5 ವರ್ಷದಲ್ಲಿ ಬರೀ 21 ರಜೆ
    ಅಣ್ಣಾಮಲೈ ಕಳೆದ 5 ವರ್ಷಗಳಲ್ಲಿ ಬರೀ 21 ರಜೆಗಳನ್ನಷ್ಟೇ ಪಡೆದಿದ್ದಾರೆ. ಪೊಲೀಸ್ ಪೇದೆಗಳಿಗೆ ಉತ್ತಮ ವೇತನ ನೀಡಿ, ಅವರ ಆರೋಗ್ಯ ಹಾಗೂ ಇತರ ಸೌಲಭ್ಯಗಳ ಬಗ್ಗೆ ಚೆನ್ನಾಗಿ ನೋಡಿಕೊಳ್ಳಬೇಕು. ಎಷ್ಟೋ ಪೇದೆಗಳಿಗೆ ಸೂಕ್ತ ರಜೆಗಳೇ ಸಿಗುತ್ತಿಲ್ಲ. ಈ ವ್ಯವಸ್ಥೆಗಳು ಸರಿಯಾಗಬೇಕು ಎಂಬ ಆಸೆ ಅವರದ್ದು. 2013ರ ಡಿ.3ರಂದು ಕರ್ನಾಟಕಕ್ಕೆ ಬಂದಾಗ ನನಗೆ ಸರಿಯಾಗಿ ಭಾಷೆಯೂ ಬರುತ್ತಿರಲಿಲ್ಲ. ಆದರೆ, ಇಲ್ಲಿನ ಜನ ನನ್ನ ತಪು್ಪಗಳನ್ನು ತಿದ್ದಿ ಪ್ರೋತ್ಸಾಹಿಸಿದ್ದಾರೆ. ಕೆಲವರು ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡುವಾಗ ಬಹಳ ಬೇಸರಪಡುತ್ತಾರೆ. ನಾನು ಸಂತೋಷವಾಗಿದ್ದೇನೆ ಎಂದು ತಿಳಿಸಿದರು.

    2011ನೇ ಬ್ಯಾಚ್ ಅಧಿಕಾರಿ
    1984 ಜೂ.4ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಜನಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್​ನಲ್ಲಿ ಬಿಇ ವ್ಯಾಸಂಗ ಮಾಡಿ, ಎಂಬಿಎ ಪದವಿ ಪಡೆದಿದ್ದಾರೆ. 2011ನೇ ಬ್ಯಾಚ್​ನ ಐಪಿಎಸ್ ಅಧಿಕಾರಿ ಆಗಿದ್ದಾರೆ. ಕಾರ್ಕಳ ಉಪ ವಿಭಾಗದ ಎಎಸ್​ಪಿಯಾಗಿ ವೃತ್ತಿ ಆರಂಭ. 2013ರಲ್ಲಿ ಉಡುಪಿ ಎಸ್​ಪಿ, ನಂತರ ಚಿಕ್ಕಮಗಳೂರು ಎಸ್​ಪಿ ಆಗಿ ಸೇವೆ. 2018ರ ಅ.17ರಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕಾರ.

    ಹೀಗೆ ಸಾಕಷ್ಟು ಪ್ರಕರಣಗಳಲ್ಲಿ ಅಣ್ಣಾಮಲೈ ಅವರು ತೋರಿದ ದಿಟ್ಟತನ ಕನ್ನಡಿಗರನ್ನು ಪ್ರಭಾವಿತಗೊಳಿಸಿದೆ. ದಿಟ್ಟತನ ಮಾತ್ರವಲ್ಲ ಅಣ್ಣಾಮಲೈ ಅವರ ಮಾನವೀಯ ಕಳಕಳಿಯು ಪ್ರಶಂಸೆಗೆ ಪಾತ್ರವಾಗಿದ್ದು, ಅವರನ್ನು ಮಾದರಿಯನ್ನಾಗಿಸಿದೆ. ಇನ್ನು ಅವರ ಸ್ಪೂರ್ತಿಯ ಮಾತುಗಳನ್ನು ಕೇಳಿ ಅನೇಕರು ಅವರಂತೆ ಆಗಬೇಕೆಂದು ಅಂದುಕೊಂಡವರು ಇದ್ದಾರೆ. ಅವರ ಆಡಳಿತಾವಧಿಯಲ್ಲಿ ಕೈಕೊಂಡ ಮಾನವೀಯ ಕೆಲಸಗಳು ಹಾಗೂ ಪೊಲೀಸ್​ ಇಲಾಖೆಯಲ್ಲಿ ಬದಲಾವಣೆಗಳ ಒಂದು ಝಲಕ್​ ಅನ್ನು ಈ ಕೆಳಗಿನ ಲಿಂಕ್​ಗಳಲ್ಲಿ ಕಾಣಬಹುದಾಗಿದೆ.

    ನ್ಯಾಯಕ್ಕಾಗಿ ಬಂದಿದ್ದ ಮಹಿಳೆ ಮೇಲೆ ಎಎಸ್​ಐ ದರ್ಪ: ಅಮಾನತಿಗೆ ಡಿಸಿಪಿ ಅಣ್ಣಾಮಲೈ ಆದೇಶ

    ಅಧಿಕಾರ ಸ್ವೀಕರಿಸಿದ ಮೂರೇ ದಿನದಲ್ಲಿ ಲೈಂಗಿಕ ಕಿರುಕುಳ ಆರೋಪಿ ಪೇದೆಗೆ ಡಿಸಿಪಿ ಅಣ್ಣಾಮಲೈ​ರಿಂದ ಗೇಟ್​ ಪಾಸ್

    ವೃದ್ಧಾಶ್ರಮಕ್ಕೆ ಭೇಟಿ ಕುಶಲೋಪರಿ ವಿಚಾರಿಸಿದ ಎಸ್ಪಿ ಅಣ್ಣಾಮಲೈ

    ಮಹಿಳೆ ಮೇಲೆ ಎಎಸ್‌ಐ ಹಲ್ಲೆ ಪ್ರಕರಣ: ಠಾಣೆಯ ಎಲ್ಲ 71 ಸಿಬ್ಬಂದಿ ವರ್ಗಾವಣೆ

    ರಾಜೀನಾಮೆ ಕೊಟ್ಟು ತೆರಳುವಾಗ ಕರ್ನಾಟಕ ರಾಜ್ಯ ಬ್ಯೂಟಿಫುಲ್‌ ಎಂದ ಅಣ್ಣಾಮಲೈಗೆ ಕನ್ನಡಿಗನಾಗಿ ಹೆಮ್ಮೆಯಿದೆಯಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts