More

    ತೆಲಂಗಾಣ ಚುನಾವಣೆಯಲ್ಲಿ ಮತಗಟ್ಟೆಗೆ ತೆರಳಲು ಉಚಿತ ಬೈಕ್ ರೈಡ್‌; ಈ ಸೌಲಭ್ಯ ನೀಡುತ್ತಿರುವುದು ಯಾವುದೇ ಪಕ್ಷ ಅಥವಾ ಅಭ್ಯರ್ಥಿಯಲ್ಲ!

    ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಗೆ ನವೆಂಬರ್ 30 ರಂದು ಮತಾದನ ನಡೆಯಲಿದೆ. ಈ ಸಂದರ್ಭದಲ್ಲಿ ಮತಗಟ್ಟೆಗಳಿಗೆ ತೆರಳಲು ಮತದಾರರಿಗೆ ಉಚಿತವಾಗಿ ಬೈಕ್​ ಸವಾರಿ ಸೌಲಭ್ಯ ಒದಗಿಸಲಾಗುತ್ತಿದೆ!

    ಚುನಾವಣೆಗೆ ನಿಂತಿರುವ ಯಾವುದೇ ಅಭ್ಯರ್ಥಿ ಇಲ್ಲವೇ ಯಾವುದೇ ಪಕ್ಷ ಇಂತಹ ಸೌಲಭ್ಯ ಒದಗಿಸುತ್ತಿಲ್ಲ.

    ರೈಡ್ ಶೇರಿಂಗ್ ಪ್ಲಾಟ್‌ಫಾರ್ಮ್ ಕಂಪನಿ ರ್ಯಾಪಿಡೊ ಇಂತಹ ಸೌಲಭ್ಯ ಒದಗಿಸುವುದಾಗಿ ಸೋಮವಾರ ಘೋಷಿಸಿದೆ. ಆದರೆ, ರಾಜಧಾನಿ ಹೈದರಾಬಾದ್​ ನಗರದಲ್ಲಿ ಮಾತ್ರ ಸೌಲಭ್ಯ ಒದಗಿಸಲಾಗುತ್ತಿದೆ. ಈ ನಗರದ 2600 ಮತಗಟ್ಟೆಗಳಿಗೆ ಈ ಉಚಿತ ಸೌಲಭ್ಯ ಕಲ್ಪಿಸಲು ಮುಂದಾಗಿದೆ

    ತೆಲಂಗಾಣದಲ್ಲಿ ಮತದಾನ ಪ್ರಮಾಣವನ್ನು, ವಿಶೇಷವಾಗಿ ಯುವಕರಲ್ಲಿ ಹೆಚ್ಚಿಸಲು ರ್ಯಾಪಿಡೊ ಕಂಪನಿಯ ಬದ್ಧತೆಯನ್ನು ಈ ಕ್ರಮ ಪ್ರತಿಬಿಂಬಿಸುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

    “ಭಾರತದ ಪ್ರಜಾಪ್ರಭುತ್ವವು ಈ ದೇಶದ ಪ್ರಮುಖ ಸಂಗತಿಯಾಗಿದೆ. ಪ್ರತಿ ಮತವನ್ನು ಎಣಿಕೆ ಮಾಡುವಂತೆ ಕೆಲಸ ಮಾಡುವಲ್ಲಿ ನಾವು ಹೆಮ್ಮೆಪಡುತ್ತೇವೆ. ಸಾರಿಗೆಯ ಬಗ್ಗೆ ಚಿಂತಿಸದೆ ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನಾವು ಜನರನ್ನು ಕೋರುತ್ತೇವೆ. ಚುನಾವಣೆ ದಿನದಂದು ಉಚಿತ ಬೈಕ್ ರೈಡ್‌ಗೆ ಅನುಕೂಲ ಮಾಡಿಕೊಡುವ ಮೂಲಕ, ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಉತ್ತೇಜಿಸಲು ನಾವು ಉದ್ದೇಶಿಸಿದ್ದೇವೆ.
    -ರ್ಯಾಪಿಡೊ ಸಹ ಸಂಸ್ಥಾಪಕ ಪವನ್ ಗುಂಟುಪಲ್ಲಿ

    ಸನಾತನ ಧರ್ಮ ಉದಯನಿಧಿಯಿಂದ ನಿರ್ಮೂಲನೆಯಾಗುತ್ತದೆ ಎನ್ನುವುದು ತಮಾಷೆ; ಜಾರ್ಖಂಡ್​ ರಾಜ್ಯಪಾಲರ ವಾಗ್ದಾಳಿ

    73ರ ವೃದ್ಧಾಪ್ಯದಲ್ಲೂ ಮೂತ್ರಪಿಂಡ ಕಸಿ ಯಶಸ್ವಿ; 63ರ ವಯೋವೃದ್ಧೆ ಪತ್ನಿಯೇ ದಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts