More

    ಲೆಕ್ಕವಿಲ್ಲದಷ್ಟು ಅತ್ಯಾಚಾರ: ದುಡಿಮೆಯ ಹಣ ಕೇಳಿದ್ರೆ ಅಪ್ರಾಪ್ತ ಹೆಣ್ಣು ಮಕ್ಕಳ ದೇಹ ಕೇಳುವ ಕಾಮುಕರು

    ಲಖನೌ: ಸ್ವತಂತ್ರ ಭಾರತದಲ್ಲಿ ಎಲ್ಲರಂತೆ ಬದುಕಿ ಬಾಳಲು ಸಾಧ್ಯವಾಗದಂತಹ ಒಂದೇ ಒಂದು ಶಾಪವೆಂದರೆ ಅದು ಬಡತನ. ಕೇವಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಇನ್ನು ನಮ್ಮ ದೇಶದಲ್ಲಿರುವುದು ದುರ್ದೈವದ ಸಂಗತಿ. ವಿಧಿಯಿಲ್ಲದೇ ಹೊಟ್ಟೆ ತುಂಬಿಸಿಕೊಳ್ಳಲು ಕೆಲವೊಂದನ್ನು ಕೊಟ್ಟು ತೆಗೆದುಕೊಳ್ಳುವ ಪಾಪಾ ಕೃತ್ಯಕ್ಕೆ ಕೆಲ ಹೆಣ್ಣು ಮಕ್ಕಳು ಬಲಿಯಾಗುತ್ತಿರುವುದು ನೋವಿನ ಸಂಗತಿ. ಅದರಲ್ಲೂ ಈ ಕರೊನಾ ಲಾಕ್​ಡೌನ್​ ಇಲ್ಲಿನ ಹೆಣ್ಣು ಮಕ್ಕಳ ಸ್ಥಿತಿಯನ್ನು ಅತಂತ್ರವಾಗಿಸಿದೆ.

    ಹೌದು, ಇಂಥಾ ಕರುಳು ಕಿವುಚುವಂತಹ ಘಟನೆಯು ಉತ್ತರ ಪ್ರದೇಶದಿಂದ ವರದಿಯಾಗಿದೆ. ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ತಮ್ಮ ಶೀಲವನ್ನು ಮಾರಿಕೊಂಡ ಹದಿಹರೆಯದ ಹೆಣ್ಣುಮಕ್ಕಳ ನೋವಿನ ಕತೆ ಇದಾಗಿದೆ.

    ಇದನ್ನೂ ಓದಿ: ಶಾಲಾ-ಕಾಲೇಜು ಆರಂಭ, ಆನ್​ಲೈನ್​ ತರಗತಿ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​

    ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 700 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಬುಂದೇಲ್​ಖಂಡ್​ ವಲಯದ ಚಿತ್ರಕೂಟ ಪ್ರದೇಶ ನಿಜಕ್ಕೂ ಕೆಲವರ ಪಾಲಿಗೆ ನರಕಕೂಪವಾಗಿದೆ. ಇಲ್ಲಿನ ಬಡ ಬುಡಕಟ್ಟು ಜನಾಂಗ ತಮ್ಮ ಹೊಟ್ಟೆಪಾಡಿಗಾಗಿ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಬಲವಂತಾಗಿ ಗಣಿಗಾರಿಕೆ ಕೆಲಸಕ್ಕೆ ದೂಡುತ್ತಾರೆ. ಮೊದಲೇ ಕಷ್ಟದಲ್ಲಿರುವ ಮಂದಿಗೆ ಮಧ್ಯವರ್ತಿಗಳು ಹಣವನ್ನು ನೀಡದೇ ಮತ್ತಷ್ಟು ಸತಾಯಿಸುತ್ತಾರೆ. ಕೊನೆಗೆ ತಮ್ಮ ಅಲ್ಪ ವೇತನಕ್ಕಾಗಿ ಇಲ್ಲಿನ ಹೆಣ್ಣುಮಕ್ಕಳು ತಮ್ಮ ಮೈಮಾರಿಕೊಳ್ಳಬೇಕಾದ ವ್ಯವಸ್ಥೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

    ಚಿಲ್ಡ್ರನ್​ ಲೈಫ್​ ಇಸ್​ ಗೋಲ್ಡನ್​ ಲೈಫ್​ ಎನ್ನುತ್ತಾರೆ. ಆದರೆ, ಇಲ್ಲಿನ ಮಕ್ಕಳಿಗೆ ಅದು ದೂರದ ನಕ್ಷತ್ರ ಎಂಬಂತಾಗಿದೆ. ಆಟ-ಪಾಠ ಅಂದುಕೊಂಡು ಆಡಿ ನಲಿಯಬೇಕಿದ್ದ ಹೆಣ್ಣು ಮಕ್ಕಳು ಬಡತನದ ಬೇಗೆಯಲ್ಲಿ ಬೇಯುತ್ತಿರುವ ಕುಟುಂಬಕ್ಕೆ ಹೆಗಲುಕೊಟ್ಟು ಕುಟುಂಬದ ಅದಾಯಕ್ಕಾಗಿ ತಮ್ಮ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ, ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವುದು ಮಾನವೀಯತೆಯ ಬುಡಕ್ಕೆ ಕೊಡಲಿ ಪೆಟ್ಟು ನೀಡಿದಂತಾಗಿದೆ.

    ಇಲ್ಲಿ 12 ರಿಂದ 14 ವರ್ಷದ ಹೆಣ್ಣು ಮಕ್ಕಳು ಅಕ್ರಮ ಗಣಿಗಾರಿಕೆಯಲ್ಲಿ ವಿಷಕಾರಿ ಧೂಳಿನ ನಡುವೆ ದುಡಿಮೆ ಮಾಡುತ್ತಿದ್ದಾರೆ. ಕೇವಲ 200 ರಿಂದ 300 ರೂ. ಕೂಲಿಗಾಗಿ ಅದು ತಾವು ದುಡಿದ ಹಣಕ್ಕಾಗಿ ಮಧ್ಯವರ್ತಿಗಳಿಗೆ ಮೈಮಾರಿಕೊಳ್ಳಬೇಕಾದ ಪರಿಸ್ಥಿತಿ ಇರುವುದು ದುರ್ದೈವದ ಸಂಗತಿ. ಅವರ ಹಕ್ಕಿನ ಹಣ ನೀಡಲು ದೇಹವನ್ನೇ ಕೇಳುವ ಮಂದಿ ನರರೂಪದ ರಾಕ್ಷಸರು ಎಂದರೆ ತಪ್ಪಾಗಲಾರದು.

    ಇದನ್ನೂ ಓದಿ: ಪಡ್ಡೆ ಹುಡುಗ್ರು ಬ್ಲೂಫಿಲ್ಮ್​ಗೆ ಕಾದು ಕೊನೆಗೆ ಏನಿಲ್ಲ ಎಂಬತಾಯಿತು: ಉಪ್ಪಿ ಫ್ಯಾನ್ಸ್​ ಕಾಲೆಳೆದ ಅನುಪಮಾ!

    ಇಂಡಿಯಾ ಟುಡೆ ಮಾಧ್ಯಮ ಚಿತ್ರಕೂಟಕ್ಕೆ ತೆರಳಿ ಲೈಂಗಿಕ ಕಿರುಕುಳ ಮತ್ತು ಹಣದ ಅಪವಿತ್ರ ಸಂಬಂಧದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಅನೇಕ ಹೆಣ್ಣು ಮಕ್ಕಳು ತಮಗೆ ಎದುರಾದ ಕರಾಳ ಘಟನೆಗಳನ್ನು ವಿವರಿಸಿದ್ದಾರೆ. ಗುತ್ತಿಗೆದಾರರನ್ನು ಕೆಲಸ ಕೇಳಿಕೊಂಡು ಹೋದರೆ ಅವರು ಕೆಲಸ ನೀಡುವುದಾಗಿ ಒಪ್ಪಿಕೊಂಡು ಷರತ್ತೊಂದನ್ನು ಮುಂದಿಡುತ್ತಾರಂತೆ. ದೇಹವನ್ನು ಒಪ್ಪಿಸದರೆ ಕೆಲಸ ಕೊಡುವುದಾಗಿ ಹೇಳುತ್ತಾರಂತೆ. ಉದ್ಯೋಗ ಕೊಟ್ಟರು ನಮಗೆ ಹಣ ನೀಡುವುದಿಲ್ಲ. ತುಂಬಾ ಶೋಷಣೆ ಮಾಡುತ್ತಾರೆ. ಲೈಂಗಿಕ ಸಂಬಂಧ ತಿರಸ್ಕರಿಸದರೆ, ಉದ್ಯೋಗದಿಂದ ತೆಗೆದು ಹಾಕುವುದಾಗಿ ಬೆದರಿಸುತ್ತಾರೆ. ಕೆಲಸವಿಲ್ಲದಿದ್ದರೆ ನಾವೇನು ತಿನ್ನುವುದು ಎನ್ನುತ್ತಾರೆ ನೊಂದ ಹೆಣ್ಣು ಮಕ್ಕಳು. ಅಲ್ಲದೆ, ಕಣ್ಣೀರಿನಿಂದಲೇ ಕೊನೆಗೆ ಎಲ್ಲ ನಿಯಮಗಳಿಗೆ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ನಮಗೆ ಎದುರಾಗುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ.

    ಇನ್ನು ಮಕ್ಕಳ ಮೇಲಿನ ಶೋಷಣೆ ಬಗ್ಗೆ ಪಾಲಕರಿಗೆ ತಿಳಿದಿದ್ದರೂ ಸಹ ಬಡತನ ಅವರ ಕೈಕಟ್ಟಿ ಹಾಕಿ ಅಸಹಾಯಕರನ್ನಾಗಿಸಿದೆ. ನಾವು ಅಸಹಾಯಕರಾಗಿದ್ದೇವೆ. ಮೊದಲು 300 ರಿಂದ 400 ರೂ. ಕೂಲಿ ನೀಡುವುದಾಗಿ ಭರವಸೆ ನೀಡಿದರು. ಆದರೀಗ 150 ರೂ. ನೀಡುತ್ತಾರೆ. ಕೆಲವೊಮ್ಮೆ 200 ರೂ. ನೀಡುತ್ತಾರೆ. ನಮ್ಮ ಮಕ್ಕಳು ಕೆಲಸದಿಂದ ಮನೆಗೆ ಬಂದಾಗ ಅವರ ಮೇಲೆ ನಡೆದ ದೌರ್ಜನ್ಯವನ್ನು ವಿವರಿಸುತ್ತಾರೆ. ಆದರೆ ನಾವೇನು ಮಾಡುವುದು? ನಮ್ಮ ಕುಟುಂಬವನ್ನು ನಾವು ಪಾಲನೆ ಮಾಡಬೇಕಲ್ಲ. ನನ್ನ ಪತಿ ಅನಾರೋಗ್ಯ ತುತ್ತಾಗಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಬೇಕು ಎನ್ನುತ್ತಾರೆ ಕೆಲ ಹೆಣ್ಣು ಮಕ್ಕಳ ಪಾಲಕರು.

    ಇನ್ನು ರಾಜ್ಯ ಸರ್ಕಾರದ ನಿರಾಶಕ್ತಿ ಹಾಗೂ ಹುಟ್ಟಿನಿಂದಲೇ ಬಂದ ಬಡತನದ ಶಾಪ ನಮ್ಮ ಅಸಹಯಾಕರನ್ನಾಗಿಸಿದೆ ಎಂದು ಅಲ್ಲಿನ ಪುರಷರು ಸಹ ಇದೇ ಮಾತನ್ನು ಹೇಳುತ್ತಾರೆ. ಹೀಗೆ ಅನೇಕ ಕುಟುಂಬಗಳು ಚಿತ್ರಕೂಟ್​ನಲ್ಲಿ ಪ್ರತಿನಿತ್ಯ ನರಕಯಾತನೆಯನ್ನು ಅನುಭವಿಸುತ್ತಿದ್ದು, ಸಹಾಯದ ನಿರೀಕ್ಷೆಯಲ್ಲಿದ್ದಾರೆ.

    ಇದನ್ನೂ ಓದಿ: 6ನೇ ತರಗತಿ ವಿದ್ಯಾರ್ಥಿ ರೇಪ್ ಮಾಡಿ ಶಿಕ್ಷೆ ಬಳಿಕ ಮದ್ವೆಯಾಗಿ ಕ್ಯಾನ್ಸರ್​ಗೆ ತುತ್ತಾದ ಶಿಕ್ಷಕಿಯ ದುರಂತ ಕತೆ!

    ಇನ್ನು ಇಂಡಿಯಾ ಟುಡೆ ವರದಿಯಿಂದ ಬೆನ್ನಲ್ಲೇ ಎಚ್ಚೆತ್ತಿರುವ ಅಲ್ಲಿನ ಜಿಲ್ಲಾ ನ್ಯಾಯಾಲಯ ತನಿಖೆಗೆ ಆದೇಶಿಸಿದೆ. ಅಲ್ಲದೆ, ರಾಜ್ಯ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್​ ಶೇಶ್​ ಮಣಿ ಪಾಂಡೆ, ದೂರು ಬಂದಾಗಲೆಲ್ಲಾ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ ಎನ್ನುತ್ತಾರೆ.

    ಇನ್ನು ಉತ್ತರ ಪ್ರದೇಶದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ. ವಿಶೇಶ್​ ಗುಪ್ತ, ನಾವು ವಿಚಾರವನ್ನು ಗಮನಕ್ಕೆ ತೆಗೆದುಕೊಂಡಿದ್ದೇವೆ. ತನಿಖೆ ನಡೆಸಲು ಒಂದು ತಂಡವನ್ನು ಕಳುಹಿಸಿದ್ದೇವೆ ಎನ್ನುತ್ತಾರೆ. ಚಿತ್ರಕೂಟ್​ ಎಎಸ್​ಪಿ ಆರ್​.ಎಸ್​. ಪಾಂಡೆ ಮಾತನಾಡಿ, ನಾವು ಈ ರೀತಿಯಾದ ಯಾವುದೇ ಘಟನೆಗಳ ಬಗ್ಗೆ ಕೇಳಿಲ್ಲ. ಸದ್ಯ ಈ ಬಗ್ಗೆ ಹೆಚ್ಚು ಗಮನ ವಹಿಸಿದ್ದೇವೆ. ವರದಿ ತರಲು ಸಿಬ್ಬಂದಿಗೆ ಸೂಚಿಸಿದ್ದೇವೆ ಎನ್ನುತ್ತಾರೆ. (ಏಜೆನ್ಸೀಸ್​)

    ರಾಕ್‌ಲೈನ್‌ ವೆಂಕಟೇಶ್‌ಗೂ ಒಕ್ಕರಿಸಿದ ಕರೊನಾ- ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts