More

    ಪಾರ್ಕಿಂಗ್​ ಸ್ಥಳದಲ್ಲಿ ನಾಯಿ ಮೇಲೇ ಅತ್ಯಾಚಾರ ಮಾಡಿದ ಕಾಮುಕ; ನಾಯಿಯ ಬಾಯಿ ಕಟ್ಟಿ ವಿಕೃತಿ

    ಮುಂಬೈ: ಕಾಮುಕನೊಬ್ಬ ಮೂಕ ಪ್ರಾಣಿ ನಾಯಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಹಿಂಸಾಚಾರದಿಂದಾಗಿ ಅಸ್ವಸ್ಥವಾಗಿರುವ ನಾಯಿ ಪ್ರಾಣಿಗಳ ಆಸ್ಪತ್ರೆ ಸೇರಿದ್ದರೆ, ಕಾಮುಕ ಕಾರ್ಮಿಕ ಜೈಲು ಪಾಲಾಗಿದ್ದಾನೆ.

    ನಗರದ ಮುಲುಂದ್​ ಏರಿಯಾದಲ್ಲಿರುವ ಕಟ್ಟಡವೊಂದರಲ್ಲಿ ಈ ದುಷ್ಕೃತ್ಯ ನಡೆದಿದೆ. 30 ವರ್ಷ ಕಾರ್ಮಿಕ, ಕಟ್ಟಡದ ಪಾರ್ಕಿಂಗ್​ ಸ್ಥಳಕ್ಕೆ ಹೆಣ್ಣು ನಾಯಿಯನ್ನು ಯಾರಿಗೂ ಗೊತ್ತಾಗದಂತೆ ಹೊತ್ತೊಯ್ದಿದ್ದಾನೆ. ಮರೆಯಲ್ಲಿ ನಿಂತು, ನಾಯಿಯ ಬಾಯಿಯನ್ನು ಕಟ್ಟಿ, ಅದರ ಮೇಲೆ ಅತ್ಯಾಚಾರವೆಸಗಿದ್ದಾನೆ. ನಾಯಿ ಅಳುವ ಶಬ್ದ ಕೇಳಿದ ಇತರ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದಾಗ, ಕಾಮುಕ ಕಾರ್ಮಿಕನ ನಿಜ ಬಣ್ಣ ಬಯಲಾಗಿದೆ. ಅತ್ಯಾಚಾರಕ್ಕೆ ಒಳಗಾದ ನಾಯಿಗೆ ತೀವ್ರ ರಕ್ತಸ್ತ್ರಾವವಾಗಿದೆ. ತಕ್ಷಣ ಓಂ ಫೌಂಡೇಷನ್​ ಹೆಸರಿನ ಎನ್​ಜಿಒಗೆ ಕರೆ ಮಾಡಿ ವಿಚಾರ ತಿಳಿಸಲಾಗಿದೆ. ಎನ್​ಜಿಒ ಸಲಹೆ ಮೇರೆಗೆ ಪೊಲೀಸರಿಗೂ ದೂರು ನೀಡಲಾಗಿದೆ.

    ಇದನ್ನೂ ಓದಿ: PHOTOS| ಪತಿ ಜತೆಗಿನ ಚುಂಬನದ ಫೋಟೋ ಶೇರ್ ಮಾಡಿಕೊಂಡ ಕಾಜಲ್​

    ಮೂಕ ಪ್ರಾಣಿಯ ಅತ್ಯಾಚಾರ ಮಾಡಿದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 377 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ರ 11 (1) (ಎ) ಅಡಿಯಲ್ಲಿ ಪ್ರಕರಣ ದಾಖಲಿಸಕೊಳ್ಳಲಾಗಿದೆ. ನಾಯಿಗೆ ಪ್ರಾಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ಈ ಹಿಂದೆ ಮುಂಬೈನ ಪೊವಾಯಿ ಏರಿಯಾದಲ್ಲಿ ನೂರಿ ಹೆಸರಿನ ನಾಯಿಯ ಮೇಲೆ ಅತ್ಯಾಚಾರ ಮಾಡಿದ್ದಾಗಿ ವರದಿಯಾಗಿತ್ತು. (ಏಜೆನ್ಸೀಸ್​)

    ರುಚಿಯಾಗಿದೆ ಎಂದು ಮುಗಿಬಿದ್ದು ತಿಂತಿದ್ರು; ಪಾನಿಪೂರಿಗೆ ಬೆರೆಸಿದ್ದು ಬಚ್ಚಲ ನೀರಂತ ಗೊತ್ತಾಯ್ತು, ಅಷ್ಟೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts