More

    ರಣವೀರ್​ ಹೊಸ ವೇಷ; ಹೆಂಡತಿ ಬಟ್ಟೆ, ಬ್ಯಾಗು ತೊಟ್ಟ ಗಂಡ ಎಂದು ಅಣಕಿಸಲಾರಂಭಿಸಿದ ನೆಟ್ಟಿಗರು

    ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಅವರ ನಟನೆಗೆ ಹೆಚ್ಚು ವೈರಲ್ ಆಗೋದು ಅವರ ವೇಷಭೂಷಣಗಳಿಂದಲೇ. ಸದಾ ವಿಚಿತ್ರ ಬಟ್ಟೆಯನ್ನು ತೊಟ್ಟು ಟ್ರೋಲಿಗರ ಬಾಯಿಗೆ ಗುರಿಯಾಗುವ ರಣವೀರ್​ ಈ ಬಾರಿಯೂ ಅಂತದ್ದೇ ಕೆಲಸ ಮಾಡಿದ್ದಾರೆ.

    ನೀಲಿ ಬಣ್ಣದ ಶೈನಿಂಗ್ ಬಟ್ಟೆ. ಉದ್ದ ಕೂದಲು, ಎದೆ ತುಂಬುವ ಬಂಗಾರದ ಸರ, ಕಣ್ಣಿಗೆ ಕಪ್ಪು ಗ್ಲಾಸ್, ಕೈಯಲ್ಲೊಂದು ಹೆಣ್ಣು ಮಕ್ಕಳ ಹ್ಯಾಂಡ್​ ಬ್ಯಾಗ್! ಇದು ರಣವೀರ್​ನ ಹೊಸ ವೇಷದ ಒಂದು ಸಣ್ಣ ಝಲಕ್. ಅಂದ ಹಾಗೆ ಅವರಿಗೆ ಈ ಫ್ಯಾಷನ್ ಉಡುಗೆ ನೀಡಿ, ಫೋಟೋಶೂಟ್ ಮಾಡಿಸಿದ್ದು ಪ್ರಸಿದ್ಧ ಗುಸ್ಸಿ ಸಂಸ್ಥೆ. ಅದರ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ‘Alessandro, my beloved’ ಎಂದು ಬರೆದುಕೊಂಡಿದ್ದಾರೆ.

    ರಣವೀರ್ ಅವರ ಈ ಫೋಟೊಗಳು ಟ್ರೋಲಿಗರಿಗೆ ಆಹಾರವಾಗಿದೆ. ದೀಪಿಕಾ ಯಾವುದೇ ಬಟ್ಟೆ, ಬ್ಯಾಗ್ ತೆಗೆದುಕೊಂಡರೂ ರಣವೀರ್ ಅದನ್ನು ಹೀಗೆ ಟ್ರೈ ಮಾಡ್ತಾರೆ ಎನ್ನುವುದರಿಂದ ಹಿಡಿದು, ಈ ಹುಚ್ಚು ಸರಿಯಾಗುವುದಿಲ್ಲ ಎನ್ನುವವರೆಗೂ ವಿಧ ವಿಧವಾಗಿ ಟ್ರೋಲ್ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್)

    ತಂಗಿ ಫೋನ್​ ಬಳಸ್ತಾಳೆ ಎನ್ನುವ ಕಾರಣಕ್ಕೆ ಕುಡಗೋಲಿನಿಂದ ಕೊಚ್ಚಿ ಕೊಂದ ಅಣ್ಣ!

    ಯಮುನಾ ನದಿಗೆ ಹಾರಿದ ಸೋಶಿಯಲ್ ಮೀಡಿಯಾ ಸ್ಟಾರ್! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತ್ಮಹತ್ಯೆಯ ದೃಶ್ಯ

    11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts