More

    ಸೆಪ್ಟೆಂಬರ್ 20ರಿಂದ ದೇಶೀಯ ಕ್ರಿಕೆಟ್ ಋತು, ಜನವರಿ 5ರಿಂದ ರಣಜಿ ಟ್ರೋಫಿ

    ನವದೆಹಲಿ: ಸೆಪ್ಟೆಂಬರ್ 20ರಿಂದ ನಡೆಯಲಿರುವ ಮಹಿಳೆಯರ 19 ವಯೋಮಿತಿ ಏಕದಿನ ಟೂರ್ನಿ ಮತ್ತು ವಿನೂ ಮಂಕಡ್ ಟ್ರೋಫಿ ಪುರುಷರ 19 ವಯೋಮಿತಿ ಟೂರ್ನಿಯೊಂದಿಗೆ ಮುಂದಿನ 2021-22ರ ಸಾಲಿನ ದೇಶೀಯ ಕ್ರಿಕೆಟ್ ಋತುವಿಗೆ ಚಾಲನೆ ದೊರೆಯಲಿದೆ. ಕರೊನಾ ಹಾವಳಿಯಿಂದಾಗಿ ಕಳೆದ ವರ್ಷ ಇವೆರಡೂ ಟೂರ್ನಿಗಳು ನಡೆದಿರಲಿಲ್ಲ. ಎರಡೂ ಟೂರ್ನಿಗಳು ಅಕ್ಟೋಬರ್ 18ರವರೆಗೆ 29 ದಿನಗಳ ಕಾಲ ಸಾಗಲಿವೆ.

    ಅಕ್ಟೋಬರ್ 27ರಿಂದ ನವೆಂಬರ್ 22ರವರೆಗೆ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯೊಂದಿಗೆ ಸೀನಿಯರ್ ವಿಭಾಗದ ದೇಶೀಯ ಕ್ರಿಕೆಟ್ ಋತು ಶುರುವಾಗಲಿದೆ. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ ಡಿಸೆಂಬರ್ 1ರಿಂದ 29ರವರೆಗೆ ನಡೆಯಲಿದೆ. ದೇಶೀಯ ಕ್ರಿಕೆಟ್ ಆಯೋಜನೆ ಸಂಬಂಧ ಬಿಸಿಸಿಐ, ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಜತೆಗೆ ನಿಕಟ ಸಂಪರ್ಕದಲ್ಲಿದ್ದು, ಪಂದ್ಯಗಳನ್ನು ನಡೆಸುವ ಅನುಮತಿಯನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿದೆ. ‘ಕರೊನಾ ಸಾಂಕ್ರಮಿಕ ಪಿಡುಗಿನ ನಡುವೆ ಈ ಬಾರಿ ಪೂರ್ಣ ಪ್ರಮಾಣದ ದೇಶೀಯ ಕ್ರಿಕೆಟ್ ಋತು ಆಯೋಜಿಸಲು ಸಕಲ ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

    ಕೂಚ್ ಬೆಹಾರ್ ಟ್ರೋಫಿ 19 ವಯೋಮಿತಿ ಟೂರ್ನಿ ನವೆಂಬರ್ 21ರಿಂದ ಫೆಬ್ರವರಿ 2ರವರೆಗೆ ನಡೆಯಲಿದೆ. ಅದಕ್ಕೆ ಮುನ್ನ ಅಕ್ಟೋಬರ್ 26ರಿಂದ ನವೆಂಬರ್ 9ರವರೆಗೆ 19 ವಯೋಮಿತಿ ಚಾಲೆಂಜರ್ ಟ್ರೋಫಿ ನಡೆಯಲಿದೆ.

    2022ರ ಆರಂಭದಲ್ಲಿ ರಣಜಿ
    ಕರೊನಾ ವೈರಸ್ ಹಾವಳಿಯಿಂದ ಕಳೆದ ವರ್ಷ ರದ್ದುಗೊಂಡಿದ್ದ ರಣಜಿ ಟ್ರೋಫಿ ಈ ಬಾರಿ 2022ರ ಆರಂಭದಲ್ಲಿ ನಡೆಯಲಿದೆ. ಜನವರಿ 5ರಿಂದ ಮಾರ್ಚ್ 20ರವರೆಗೆ ರಣಜಿ ಟ್ರೋಫಿಯನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಈ ಮುನ್ನ ಬಿಸಿಸಿಐ ನವೆಂಬರ್‌ನಲ್ಲೇ ರಣಜಿ ಟ್ರೋಫಿ ಆಯೋಜಿಸಲು ಬಯಸಿದ್ದರೂ, ಇದೀಗ ವಿಜಯ್ ಹಜಾರೆ ಟ್ರೋಫಿ ನಂತರವೇ ರಣಜಿ ನಡೆಸಲು ನಿರ್ಧರಿಸಿದೆ.

    25 ವಯೋಮಿತಿ ಟೂರ್ನಿ
    ಪುರುಷರ ಕ್ರಿಕೆಟ್‌ನಲ್ಲಿ 25 ವಯೋಮಿತಿ ಅಂತರ ರಾಜ್ಯ ಟೂರ್ನಿಯೊಂದನ್ನು ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. ಈ ಟೂರ್ನಿ ಜನವರಿ 6ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ. 23 ವಯೋಮಿತಿಯಲ್ಲಿ ನಡೆಯುತ್ತಿದ್ದ ಸಿಕೆ ನಾಯ್ಡು ಟ್ರೋಫಿ ಬದಲಿಗೆ ಈ ಚತುರ್ದಿನ ಪಂದ್ಯಗಳ ಟೂರ್ನಿ ನಡೆಯಲಿದೆ.

    16 ವಯೋಮಿತಿ ಟೂರ್ನಿ ಡೌಟ್
    18 ವರ್ಷ ಕೆಳಗಿನವರು ಇನ್ನೂ ಲಸಿಕೆ ಹಾಕಿಸಿಕೊಳ್ಳದಿರುವ ಕಾರಣದಿಂದಾಗಿ 16 ವಯೋಮಿತಿಯ ವಿಜಯ್ ಮರ್ಚೆಂಟ್ ಟ್ರೋಫಿ ಈ ಬಾರಿ ನಡೆಯುವುದು ಅನುಮಾನವೆನಿಸಿದೆ. ನವೆಂಬರ್-ಡಿಸೆಂಬರ್ ವೇಳೆಗೆ ಈ ಟೂರ್ನಿ ನಡೆಸಲು ಬಿಸಿಸಿಐ ಸಂಭಾವ್ಯ ದಿನಾಂಕ ನಿಗದಿಪಡಿಸಿದ್ದರೂ, 18 ವರ್ಷ ಕೆಳಗಿನವರಿಗೂ ಲಸಿಕೆ ಹಾಕುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದರಷ್ಟೇ ಈ ಟೂರ್ನಿ ನಡೆಯಲಿದೆ ಎನ್ನಲಾಗಿದೆ.

    ಮಗುವಿನ ಶಸ್ತ್ರಚಿಕಿತ್ಸೆಗಾಗಿ ಒಲಿಂಪಿಕ್ಸ್ ಪದಕ ಹರಾಜು! ಖರೀದಿಸಿದವರು ನೀಡಿದ ಟ್ವಿಸ್ಟ್ ಏನು ಗೊತ್ತೇ?

    ಪಿಟಿ ಉಷಾ ಯಶಸ್ಸಿನ ರೂವಾರಿ ತರಬೇತುದಾರ ನಂಬಿಯಾರ್ ನಿಧನ

    ಲಿಯೋನೆಲ್ ಮೆಸ್ಸಿ ಬಳಸಿದ್ದ ಟಿಶ್ಯು ಪೇಪರ್ 7.44 ಕೋಟಿ ರೂಪಾಯಿಗೆ ಸೇಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts