More

    ಬ್ಯಾಟಿಂಗ್​, ಬೌಲಿಂಗ್​ನಲ್ಲೂ ಮಿಂಚಿದ ಟೀಂ ಇಂಡಿಯಾ ಬೌಲರ್ ಮೊಹಮ್ಮದ್​​ ಶಮಿ ಸಹೋದರ ‘ಕೈಫ್’

    ಕಾನ್ಪುರ: ಮೈದಾನದಲ್ಲಿ ಸದಾ ನಿಯಮಿತ ವೇಗದೊಂದಿಗೆ ಉತ್ತಮ ಸ್ಥಳದಲ್ಲಿ ಚೆಂಡನ್ನು ಬೌಲ್ ಮಾಡಿ ವಿಕೆಟ್ ಪಡೆಯುವ ಕಲೆ ಹೊಂದಿರುವ ಮೊಹಮ್ಮದ್ ಶಮಿ ಅವರ ಸಹೋದರ ಮೊಹಮ್ಮದ್​ ಕೈಫ್ ಇತ್ತೀಚೆಗಷ್ಟೇ ದೇಶಿಯ ಕ್ರಿಕೆಟ್​ ಪದಾರ್ಪಣೆ ಮಾಡಿದ್ದಾರೆ.

    ಇದನ್ನೂ ಓದಿ:‘ಇವೆಲ್ಲಾ ಕೇವಲ ಮೂರು ವಾರವಷ್ಟೇ ಸಾಧ್ಯ’! ಬಿಗ್ ಬಾಸ್​ ಒಳಗಿನ ಪ್ರಪಂಚದ ಬಗ್ಗೆ ರೂಪೇಶ್​ ಹೇಳಿದ ಅಚ್ಚರಿ ಸಂಗತಿಳಿವು

    ಕೈಫ್​ ಇದೀಗ ಬ್ಯಾಟಿಂಗ್​ ಮತ್ತು ಬೌಲಿಂಗ್​ನಿಂದ ಮಿಂಚಿದ್ದಾರೆ. ಬಂಗಾಳ ತಂಡವನ್ನು ಪ್ರತಿನಿಧಿಸುವ ಮೊಹಮ್ಮದ್​ ಕೈಫ್​ ಉತ್ತರ ಪ್ರದೇಶ ವಿರುದ್ಧ ಆಲ್​ರೌಂಡ್​ ಪ್ರದರ್ಶನ ನೀಡಿದ್ದಾರೆ.

    ಉತ್ತರ ಪ್ರದೇಶ ಮೊದಲ ಇನಿಂಗ್ಸ್​ನಲ್ಲಿ ಕೇವಲ 60 ರನ್​ಗಳಿಗೆ ಆಲೌಟಾಯಿತು.ಮಾರಕ ದಾಳಿ ನಡೆಸಿದ ಮೊಹಮ್ಮದ್​ ಕೈಫ್​ 5.5 ಓವರ್​​ ಬೌಲಿಂಗ್​ ಮಾಡಿ 14 ರನ್​ ನೀಡಿ ಚೊಚ್ಚಲ ನಾಲ್ಕು ವಿಕೆಟ್​ ಪಡೆದಿದ್ದಾರೆ.

    ಬ್ಯಾಟಿಂಗ್​ ನಡೆಸಿದ ಬಂಗಾಲ ತಂಡಕ್ಕೂ ಕೈಫ್​ ನೆರವಾದರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಆಗಮಿಸಿದ ಕೈಫ್​ ಅಜೇಯ 45 ರನ್​ ಮಾಡಿದರು. ಇದೇ ಮೊದಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್​ ಆಡುತ್ತಿರುವ ಶಮಿ ಸಹೋದರ ಎರಡು ಸಿಕ್ಸರ್​ ಸಹಿತ ಅಜೇಯವಾಡಿದರು.

    ಸಹೋದರ ಪ್ರಥಮ ದರ್ಜೆ ಕ್ರಿಕೆಟ್​ ಪದಾರ್ಪಣೆ ಬಗ್ಗೆ ಶಮಿ ಕೆಲ ದಿನಗಳ ಹಿಂದೆ ಸಂತಸ ವ್ಯಕ್ತಪಡಿಸಿದ್ದರು. ದೀರ್ಘ ಹೋರಾಟದ ನಂತರ ನೀನು ಬಂಗಾಳಕ್ಕೆ ರಣಜಿ ಟ್ರೋಫಿ ಕ್ಯಾಪ್​ ಪೆಡೆದುಕೊಂಡಿದ್ದೀರಿ ಚೀಯರ್ಸ್​ ಉತ್ತಮ ಸಅಧನೆ ಅಭಿನಂದನೆಗಳು ಎಂದು ಹೇಳಿದ್ದರು. ನಾನು ನಿಮಗೆ ಉತ್ತಮ ಭವಿಷ್ಯವನ್ನು ಹಾರೈಸುತ್ತೇನೆ. ಕಠಿಣ ಪರಿಶ್ರಮವನ್ನು ಮುಂದುವರೆಸು ಎಂದು ಮೊಹಮ್ಮದ್​ ಶಮಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದರು.

    ಸಿಎಂ ಏಕನಾಥ್ ಶಿಂಧೆ ಸಮ್ಮುಖದಲ್ಲಿ ಶಿವಸೇನಾ ಸೇರಿದ ಕಾಂಗ್ರೆಸ್​ ನಾಯಕ ಮಿಲಿಂದ್​ ದಿಯೋರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts