More

    ರಂಗೋಲಿಯಲ್ಲಿ ಅರಳಿದ ವಿಜ್ಞಾನ ಚಿತ್ರಗಳು

    ಹನುಮಸಾಗರ: ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಗೌರಿ ಹಬ್ಬದ ನಿಮಿತ್ತ ‘ವಿಜ್ಞಾನ ಗೌರಿ, ಮನೆ ಮನೆ ಮುಂದೆ ರಂಗೋಲಿ ಸ್ಪರ್ಧೆ’ ಆಯೋಜಿಸಲಾಗಿತ್ತು.

    ಇದನ್ನೂ ಓದಿ: ಓರಾಯನ್​ ಮಾಲ್​ನಲ್ಲಿ ರಂಗೋಲಿ ಅನಾವರಣ; ಭಾರತ ಕ್ರಿಕೆಟ್​ ತಂಡಕ್ಕೆ ವಿಶೇಷ ಪ್ರೋತ್ಸಾಹ

    ವಿಜ್ಞಾನ ಶಿಕ್ಷಕ ಶಂಕ್ರಪ್ಪ ತಳವಾರ ವಿದ್ಯಾರ್ಥಿಗಳ ಮನೆಗೆ ತೆರಳಿ ರಂಗೋಲಿ ಚಿತ್ರಗಳನ್ನು ಪರಿಶೀಲಿಸಿ ಮಾತನಾಡಿ, ವಿದ್ಯಾರ್ಥಿಗಳ ಬಿಡುವಿನ ವೇಳೆ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಬೇಕು.

    ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿನಿಯರಿಗೆ ಮನೆ ಅಂಗಳದಲ್ಲಿ ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ಚಿತ್ರ ಮತ್ತು ಚಿತ್ರಾಧಾರಿತವಾಗಿ ಸುಮಾರು 16 ರಿಂದ 20 ಅಂಕಗಳಿರುವುದರಿಂದ ಹಬ್ಬದ ದಿನದಂದು ಈ ವಿನೂತನ ಸ್ಪರ್ಧೆಯನ್ನು ಮುಖ್ಯ ಶಿಕ್ಷಕಿ ರಾಯಮ್ಮ ಉಕ್ಕಲಿ ಸಲಹೆಯ ಮೇರೆಗೆ ಏರ್ಪಡಿಸಲಾಗಿದೆ ಎಂದರು.

    ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಗೊಲ್ಲರ, ಶಿಕ್ಷಕರಾದ ಶರಣಪ್ಪ ಗುಳೇದ, ಷಣ್ಮುಖಪ್ಪ ಕರಡಿ ಹಾಗೂ ಪ್ರಶಿಕ್ಷಣಾರ್ಥಿಗಳಾದ ಭಾವನಾ ಹಾಗೂ ಅಕ್ಷತಾ ತಂಡ ಮನೆ ಮನೆಗೆ ತೆರಳಿ ಮಕ್ಕಳು ಬಿಡಿಸಿದ್ದ ವಿಜ್ಞಾನ ಚಿತ್ರಗಳ ರಂಗೋಲಿ ಚಿತ್ರಗಳನ್ನು ಮೌಲ್ಯಮಾಪನ ಮಾಡಿ ಫಲಿತಾಂಶ ಘೋಷಿಸಿದರು.

    ವಿಜ್ಞಾನ ಚಿತ್ರಗಳ ರಂಗೋಲಿ ಸ್ಪರ್ಧೆಯಲ್ಲಿ ಮೋನಿಕಾ ರಂಗ್ರೇಜ್ (ಪ್ರಥಮ), ನಿಕಿತಾ ಹಬೀಬಿ (ದ್ವಿತೀಯ), ಜೈರಾಬಿ (ತೃತೀಯ) ಸ್ಥಾನ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts