More

    ರಂಗೋಲಿ ಬಿಡಿಸಿ ಮತದಾನ ಜಾಗೃತಿ

    ಕಮತಗಿ: ಸ್ಥಳೀಯ ಸ್ವಾಮಿ ವಿವೇಕಾನಂದ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಪಪಂ ವತಿಯಿಂದ ಬೃಹತ್ ರಂಗೋಲಿ ಬಿಡಿಸುವ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

    ಮುಖ್ಯಾಧಿಕಾರಿ ಲೀಲಾವತಿ ವಿ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಚುನಾವಣೆ ಆಯೋಗ ಹಾಗೂ ಬಾಗಲಕೋಟೆ ಜಿಲ್ಲಾ ಆಡಳಿತವು ಶೇ.100ರಷ್ಟು ಮತದಾನ ಮಾಡುವ ಗುರಿ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಪಟ್ಟಣದಲ್ಲಿ ಆಯೋಜಿಸಲಾಗಿದೆ ಎಂದರು.

    ಪಪಂ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸೇರಿ ಪಟ್ಟಣದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಂಗೋಲಿ ಬಿಡಿಸುವ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

    ಪಪಂ ಕಚೇರಿ ವ್ಯವಸ್ಥಾಪಕ ರಮೇಶ ಪದಕಿ, ಕಿರಿಯ ಆರೋಗ್ಯ ನಿರೀಕ್ಷಕ ಎಸ್.ಎಂ. ಸರಗಣಾಚಾರಿ, ಶೈಲಾ ಚಲವಾದಿ, ಸುನೀಲ ವಂದಗನೂರ, ಮಹೇಶ ಪೂಜಾರಿ, ಮಂಜುನಾಥ ಚಲವಾದಿ, ಸಿದ್ದಪ್ಪ ಮಾದರ, ಸಂತೋಷ ಯಲಿಗಾರ, ರವಿ ವಂದಗನೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts