More

    ಬಾಯಿಗೆ ಪೆಟ್ಟು ಬಿದ್ದಿದ್ದ ಚಿರತೆ ಆಹಾರ ಸೇವಿಸಲಾಗದೆ ಸಾವು

    ರಾಣೆಬೆನ್ನೂರ: ಬಾಯಿ ನೋವಿನಿಂದ ಬಳಲುತ್ತಿದ್ದ 3 ವರ್ಷದ ಹೆಣ್ಣು ಚಿರತೆಯೊಂದು ಆಹಾರ ಸೇವಿಸಲಾಗದೆ ನಿತ್ರಾಣಗೊಂಡು ಮೃತಪಟ್ಟ ಘಟನೆ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
    ಗ್ರಾಮದ ರೈತರೊಬ್ಬರ ಅಡಕೆ ತೋಟಕ್ಕೆ ಆಹಾರ ಅರಸಿ ಬಂದ ಚಿರತೆಯು ಅಲ್ಲಿದ್ದ ಕೋಳಿ ತಿನ್ನಲು ಮುಂದಾಗಿದೆ. ಆದರೆ, ಅದರ ಬಾಯಿ ವಿಪರೀತ ಗಾಯಗೊಂಡಿದ್ದರಿಂದ ಸಾಧ್ಯವಾಗಿಲ್ಲ. ಇದರಿಂದ ಅಲ್ಲಿಯೆ ಬಿದ್ದು ಮೃತಪಟ್ಟಿದೆ.
    ಚಿರತೆಗೆ ಕಳೆದ 15 ದಿನಗಳ ಹಿಂದೆ ಬಾಯಿಗೆ ಪೆಟ್ಟು ಬಿದ್ದಿದ್ದರಿಂದ ಹುಳುಗಳು ಬಿದ್ದಿವೆ. ಇದರಿಂದಾಗಿ ಅದು ಆಹಾರ, ನೀರು ಕುಡಿಯಲು ಆಗದ ಸ್ಥಿತಿಗೆ ತಲುಪಿದೆ. ಇದರಿಂದಾಗಿ ಸಂಪೂರ್ಣ ನಿಶಕ್ತಿ ಹೊಂದಿದ ಚಿರತೆ ಭಾನುವಾರ ಬೆಳಗ್ಗೆ ಮೃತಪಟ್ಟಿದೆ. ಚಿರತೆಯ ಮೃತ ದೇಹ ತಂದು ಪರೀಕ್ಷೆ ನಡೆಸಿದಾಗ ಅದು ಆಹಾರವಿಲ್ಲದ ಕಾರಣ ಮೃತಪಟ್ಟಿರುವುದು ದೃಢಪಟ್ಟಿದೆ.
    ಈ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ನ್ಯಾಯಾಧೀಶರ ಅನುಮತಿ ಪಡೆದು ಮೃತ ಚಿರತೆಯ ಶವ ಸಂಸ್ಕಾರ ನೆರವೇರಿಸಲಾಗಿದೆ ಎಂದು ಅರಣ್ಯಾಧಿಕಾರಿ ಕಿರಣಕುಮಾರ ಮಲ್ಲಮ್ಮಣ್ಣನವರ ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts