More

    ಪದವೀಧರರ ಆಪದ್ಬಾಂಧವ ರಾಮೋಜಿಗೌಡ

    ಜನರ ಕಷ್ಟಗಳ ಪರಿಹಾರಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಟದ ಮೂಲಕ ಧ್ವನಿ ಎತ್ತುತ್ತಿರುವವರು ಆನೇಕಲ್ ರಾಮೋಜಿಗೌಡ. ಶಿಕ್ಷಕರ- ಪದವೀಧರರ ಜತೆ ನಿರಂತರ ಒಟನಾಟ ಇಟ್ಟುಕೊಂಡು ಮನ್ನಣೆ ಗಳಿಸಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ ಪೂರೈಸಿಯೂ ಉದ್ಯೋಗ ಸಿಗದೆ ಪರಿತಪಿಸುವ ಸಾವಿರಾರು ಯುವಜನತೆಗೆ ಆಸರೆಯಾಗಿರುವ ರಾಮೋಜಿಗೌಡ, ತಮ್ಮ ನೆಕ್ಸ್​ಪ್ಲೇಸ್ ಇನ್ಪೋ ಪ್ರೖೆ.ಲಿ. ಕಂಪನಿ ಮೂಲಕ ಹಲವೆಡೆ ಉದ್ಯೋಗ ಮೇಳ ಆಯೋಜಿಸಿ 35 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ಪಡೆಯಲು ಕಾರಣರಾಗಿದ್ದಾರೆ. ಹೋರಾಟ, ನಾಯಕತ್ವದ ಗುಣದಿಂದ ಹಂತ ಹಂತವಾಗಿ ಬೆಳೆದ ರಾಮೋಜಿಗೌಡ, ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಿರುವುದು ವಿಶೇಷ. ಸಮಾಜ ಸೇವೆಯಲ್ಲಿ ಛಾಪು ಮೂಡಿಸಿರುವ ಇವರ ಸಾಧನೆಯನ್ನು ಪರಿಗಣಿಸಿ ವಿಜಯವಾಣಿ ಪತ್ರಿಕೆ ‘ಬೆಂಗಳೂರು ರತ್ನ’ ಗೌರವ ನೀಡುತ್ತಿದೆ.

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಜನರ ಸಮಸ್ಯೆಗಳಿಗೆ ಮುಂಚೂಣಿಯಲ್ಲಿ ನಿಂತು ಹೋರಾಟದ ಮೂಲಕ ಧ್ವನಿ ಎತ್ತಿರುವ ನಾಯಕ ರಾಮೋಜಿಗೌಡ. ಮುಂಬರುವ ವಿಧಾನಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ 3ನೇ ಬಾರಿ ಅಖಾಡಕ್ಕಿಳಿದಿರುವ ಅವರು ಜನಸೇವೆ ವಿಚಾರದಲ್ಲಿ ನೈಜ ಕಳಕಳಿ ಹೊಂದಿರುವವರು. ಈಗಿಂದಲೇ ಚುನಾವಣೆ ಸಿದ್ಧತೆ ನಡೆಸಿ ಪ್ರತಿ ಪದವೀಧರರನ್ನು ಖುದ್ದಾಗಿ ಭೇಟಿ ನೀಡಿ ತಮಗೆ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ. 2012 ಮತ್ತು 2018ರಲ್ಲಿ ಅಲ್ಪಮತಗಳಿಂದ ಸೋತಿದ್ದರು. ಆದರೂ, ಕ್ಷೇತ್ರದ ಪದವೀಧರರ ಹಾಗೂ ಶಿಕ್ಷಕರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ವಿಶ್ವಾಸ ಗಳಿಸಿದ್ದಾರೆ. ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಂಸದ ಡಿ.ಕೆ. ಸುರೇಶ್ ಸೇರಿ ಕಾಂಗ್ರೆಸ್​ನ ಘಟಾನುಘಟಿ ನಾಯಕರ ನಾಮಬಲದಿಂದ ಹಾಗೂ ಸೋಲಿನ ಅನುಕಂಪದಿಂದ ಈ ಬಾರಿ ಚುನಾವಣೆಯಲ್ಲಿ ಜಯ ಸಾಧಿಸುವ ಅತೀವ ವಿಶ್ವಾಸ ಹೊಂದಿದ್ದಾರೆ.

    ಬೆಂಗಳೂರು ಪದವೀಧರ ಕ್ಷೇತ್ರವು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಿದೆ. ಇದರ ವ್ಯಾಪ್ತಿಗೆ ಬರುವ 36 ವಿಧಾನಸಭಾ ಕ್ಷೇತ್ರಗಳ ಪೈಕಿ 19ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ರಾಮೋಜಿಗೌಡ ಅವರನ್ನು ಆಯ್ಕೆ ಮಾಡಿದರೆ ಅವರದೇ ಸರ್ಕಾರ ಇರುವುದರಿಂದ ನಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರೆಯಲಿದೆ ಎಂದು ಪದವೀಧರರು ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟಣ್ಣ ಕಾಂಗ್ರೆಸ್ ಸೇರಿರುವುದ ಸ್ವಲ್ಪ ಬಲ ಬಂದಿದೆ. ಹೀಗಾಗಿ, ಮೇಲಿನ ಎಲ್ಲ ಅಂಶಗಳು ರಾಮೋಜಿಗೌಡ ಅವರ ಗೆಲುವಿಗೆ ಪ್ಲಸ್​ಪಾಯಿಂಟ್.

    ಪದವೀಧರರ ಆಪದ್ಬಾಂಧವ ರಾಮೋಜಿಗೌಡ

    ರಾಮೋಜಿಗೌಡ ಅವರು ಯಾವುದೇ ಸಂವಿಧಾನಬದ್ಧ ಹುದ್ದೆಗಳು ಇಲ್ಲದಿದ್ದರೂ ಕಳೆದ 2 ದಶಕಗಳಿಂದ ಶಿಕ್ಷಕರ ಮತ್ತ್ತು ಪದವೀಧರರ ಸಮಯದಾಯದಲ್ಲಿ ಮನೆಮಾತಾಗಿದ್ದಾರೆ. ಇವರೆಲ್ಲರ ಬದುಕಿನ ಆಶಾ ಜ್ಯೋತಿಯಾಗಿ ತಮ್ಮ ಸಂಘಟನೆ ಮೂಲಕ ಕ್ರಿಯಾಶೀಲತೆ, ಬದ್ಧತೆ, ಪ್ರೀತಿ, ವಿಶ್ವಾಸದ ಮೂಲಕ ಮನ ಗೆದ್ದಿದ್ದಾರೆ. ಎಲ್ಲರೊಂದಿಗೆ ಒಂದಾಗಿ ಬೆರೆತು ಬಾಳುವ ಸ್ನೇಹಜೀವಿ, ಇಂತಹ ದಿವ್ಯ ವ್ಯಕ್ತಿತ್ವದ ರಾಮೋಜಿಗೌಡ, ಪದವೀಧರ ಕ್ಷೇತ್ರದ ಪ್ರತಿನಿಧಿಯಾಗುತ್ತಿರುವುದು ನಮಗೆಲ್ಲರಿಗೂ ಹರ್ಷ ತಂದಿದೆ. ಈ ನಿಟ್ಟಿನಲ್ಲಿ ಪುಟ್ಟಣ್ಣನವರ ಗೆಲುವು ಕೂಡ ಹೊಸ ದಾಖಲೆಯನ್ನು ನಿರ್ವಿುಸಿದ್ದು, ಈ ಹಾದಿಯಲ್ಲಿ ನಡೆಯುತ್ತಿರುವ ರಾಮೋಜಿಗೌಡ ಅವರ ಗೆಲುವು ಕೂಡ ಶತಃಸಿದ್ಧ.

    ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿಲಿರುವ ರಾಮೋಜಿಗೌಡರು 2 ಬಾರಿ ಕಡಿಮೆ ಆಂತರದಲ್ಲಿ ಪರಾಭವಗೊಂಡರೂ ಪದವೀಧರ, ಶಿಕ್ಷಕರ ಜತೆ ನಿರಂತರ ಒಡನಾಟ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ರಾಮೋಜಿಗೌಡರ ಜತೆ ದೊಡ್ಡ ಯುವಕರ ಪಡೆ, ಹಿರಿಯರ ಶಿಕ್ಷಕರು, ನಿವೃತ್ತ ಅಧಿಕಾರಿಗಳ ದೊಡ್ಡ ಸೈನ್ಯವೇ ಇದೆ. ಇದರಿಂದಾಗಿ ರಾಮೋಜಿಗೌಡರ ಗೆಲುವಿನ ನಡೆ ಕ್ಷೇತ್ರದಾದ್ಯಂತ ದೊಡ್ಡ ಅಲೆ ಎಬ್ಬಿಸಿರುವುದು ಕಂಡುಬಂದಿದೆ.

    ತಂದೆಗೆ ಪುತ್ರಿಯ ಸಾಥ್: ನೆಕ್ಸ್​ಪ್ಲೇಸ್ ಇನ್ಪೋ ಪ್ರೖೆ.ಲಿ. ಕಂಪನಿ ಸಿಇಒ ಹರ್ಷಿತ್ ಆರ್. ಗೌಡ ಅವರು ಚುನಾವಣೆಯಲ್ಲಿ ತಮ್ಮ ತಂದೆಗೆ ಬೆಂಬಲವಾಗಿ ನಿಂತುಕೊಂಡು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ನಮಗೆ ತಾಯಿ ಇದ್ದಂತೆ. ಪಕ್ಷ ಕೊಟ್ಟಿರುವ ಅವಕಾಶವನ್ನು ಬಳಸಿಕೊಂಡು ಈ ಬಾರಿ ಶತಾಯಗತಾಯ ತಂದೆಯನ್ನು ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯಿಂದ ಬಂದಿರುವ ಹಿನ್ನೆಲೆಯಲ್ಲಿ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದಾರೆ. ನಮ್ಮ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಸಮಸ್ಯೆಗಳಿಗೆ ಬೇಗ ಪರಿಹಾರ ಸಿಗುತ್ತದೆ. ಲಕ್ಷಕ್ಕೂ ಅಧಿಕ ನಿರುದ್ಯೋಗಿಗಳಿಗೆ ನಮ್ಮ ತಂದೆ ಉದ್ಯೋಗ ಕೊಡಿಸಿದ್ದಾರೆ. ಸಾವಿರಾರು ಕಾರ್ಯಕರ್ತರು ಬೆನ್ನಲುಬಾಗಿ ನಿಂತಿದ್ದಾರೆ. ಹೀಗಾಗಿ, ಇವೆಲ್ಲವೂ ತಂದೆ ಗೆಲುವಿಗೆ ಸಹಕಾರ ಆಗಲಿದೆ. ಅಪ್ಪನ ರಾಜಕೀಯ ಜೀವನ ಇನ್ನಷ್ಟು ಉಜ್ವಲವಾಗಲಿ ಎಂದು ಹರ್ಷಿತ ಆಶಿಸುತ್ತಾರೆ.

    ಪದವೀಧರರ ಆಪದ್ಬಾಂಧವ ರಾಮೋಜಿಗೌಡ

    ವೃತ್ತಿಯಲ್ಲಿ ಶಿಕ್ಷಕ: 1973ರ ಮಾ.20ರಂದು ಕೋಲಾರ ಜಿಲ್ಲೆ ಚಿಂತಾಮಣಿ ತಾಲೂಕಿನ ಮಣಿಗನಹಳ್ಳಿಯ ನಾರಾಯಣಗೌಡ ಮತ್ತು ಅಂಕುಲಮ್ಮ ದಂಪತಿ ಮಗನಾಗಿ (ಅವಳಿ ಮಕ್ಕಳು) ರಾಮೋಜಿಗೌಡ ಜನಿಸಿದರು. ತಮ್ಮ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಹೈಸ್ಕೂಲ್, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಚಿಂತಾಮಣಿಯಲ್ಲಿ ಪೂರೈಸಿದರು. ‘ಟೀಚರ್ ಟ್ರೇನಿಂಗ್’ ಅನ್ನು ಬೇತಮಂಗಲದಲ್ಲಿ ಮುಗಿಸಿ ದೂರ ಶಿಕ್ಷಣ ಮುಖೇನ ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದರು. 1997ರಲ್ಲಿ ಶಿಕ್ಷಕ ಹುದ್ದೆಗೆ ಆಯ್ಕೆಯಾದರು. ಶ್ರೀನಿವಾಸ ತಾಲೂಕಿನ ಪೇಗಳಪಲ್ಲಿ ಸರ್ಕಾರಿ ಶಾಲೆಯಲ್ಲಿ ವೃತ್ತಿ ಆರಂಭಿಸಿದರು. ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮಂಜುಳಾ ಅವರನ್ನು 1997ರಲ್ಲಿ ವರಿಸಿದರು. ದಂಪತಿಗೆ ಹರ್ಷಿತ್ ಮತ್ತು ಹರ್ಷ ಎಂಬ ಮಕ್ಕಳಿದ್ದಾರೆ. 2000ರಲ್ಲಿ ಪತಿ-ಪತ್ನಿ ವರ್ಗಾವಣೆ ಪ್ರಕರಣದಲ್ಲಿ ಬೆಂಗಳೂರಿಗೆ ಬಂದರು. ‘ಆನೇಕಲ್ ರಾಮೋಜಿಗೌಡ’ ಎಂದೇ ಪ್ರಸಿದ್ಧರಾಗಿರುವ ಇವರು, 14 ವರ್ಷಗಳ ಶಿಕ್ಷಕ ವೃತ್ತಿಯಲ್ಲಿದ್ದಾಗಲೇ ಶಿಕ್ಷಕರು, ಪದವೀಧರರು ಸೇರಿ ಎಲ್ಲ ವಲಯಗಳ ಉದ್ಯೋಗಿಗಳ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಮಾಡಿದ್ದಾರೆ. ಬಳಿಕ, ಶಿಕ್ಷಕರ ಸಂಘದ ನಿರ್ದೇಶಕರಾಗಿ, ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ರಾಜ್ಯ ಪದವೀಧರರ ಘಟಕದ ಉಪಾಧ್ಯಕ್ಷರಾಗಿ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಹಾಗೂ ಕರ್ನಾಟಕ ರಾಜ್ಯ ಪದವೀಧರರ ವೇದಿಕೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಘಟನಕಾರರಾಗಿ ಗುರುತಿಸಿಕೊಂಡು ಮುಂಚೂಣಿಯಲ್ಲಿ ನಿಂತು ಹಲವು ಹೋರಾಟ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಹೋರಾಟ, ನಾಯಕತ್ವ ಗುಣದಿಂದ ಹಂತ ಹಂತವಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ಗಮನಾರ್ಹ.

    80 ಲಕ್ಷ ರೂ. ವೆಚ್ಚದಲ್ಲಿ ಶಾಲೆಯ ಅಭಿವೃದ್ಧಿ: ಕೋರಮಂಗಲದ ಜಕ್ಕಸಂದ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದ ರಾಮೋಜಿಗೌಡ, 80 ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಮೂಲಸೌಕರ್ಯ ಕಲ್ಪಿಸಿ ಅಭಿವೃದ್ಧಿ ಮಾಡಿದ್ದಾರೆ. ಶಾಲೆಗೆ ಕೊಠಡಿ, ಶೌಚಗೃಹ, ಅಡುಗೆ ಮನೆ, ಟೈಲ್ಸ್ ಅಳವಡಿಕೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ಖಾಸಗಿ ಶಾಲೆಯನ್ನೇ ಮೀರಿಸುತ್ತಿದೆ.

    leader

    ಸೋತರೂ ಎದುರಾಳಿಗೆ ಎದೆಗುಂದದ ನಾಯಕ: ಶಿಕ್ಷಕರ ಸಂಘಟನೆಗಳಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ರಾಮೋಜಿಗೌಡರಿಗೆ ಶಿಕ್ಷಕರ ಅಥವಾ ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಒತ್ತಾಯ ಬಂದಿತ್ತು. ಹೀಗಾಗಿ, ಇವರೆಲ್ಲರ ಪ್ರೋತ್ಸಾಹದಿಂದಲೇ 2012ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್​ನಿಂದ ಟಿಕೆಟ್ ಪಡೆದು ಬೆಂಗಳೂರು ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದರು. ಸೋತರೂ ಎದುರಾಳಿಗೆ ಟಕ್ಕರ್ ಕೊಟ್ಟಿರುವುದು ವಿಶೇಷ. 2018ರಲ್ಲಿ ಮತ್ತೆ ಕಾಂಗ್ರೆಸ್​ನಿಂದ ಟಿಕೆಟ್ ಪಡೆದು ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2ನೇ ಬಾರಿಯೂ ಅಲ್ಪ ಮತಗಳಿಂದ ಮತ್ತೆ ಪರಾಜಿತರಾದರು. ಹಿಂದೆ ನಡೆದ ತಪು್ಪ ಸರಿಪಡಿಸಿಕೊಂಡು ಗೆಲ್ಲಲೇಬೇಕೆಂಬ ಪಣತೊಟ್ಟಿದ್ದಾರೆ. ‘ಚಿಂತಕರ ಚಾವಡಿ’ ಎಂದೇ ಕರೆಸಿಕೊಳ್ಳುವ ವಿಧಾನಪರಿಷತ್​ನಲ್ಲಿ ಪದವೀಧರರ ಕ್ಷೇತ್ರದ ಪ್ರತಿನಿಧಿಗಳು, ತಮಗೆ ಮತ ನೀಡಿದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆ. ನನ್ನನ್ನು ಗೆಲ್ಲಿಸಿದರೆ ಶಿಕ್ಷಕರ ಹಾಗೂ ಪದವೀಧರರ ಸಮಸ್ಯೆಯನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆ. ಪದವೀಧರರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ಮುಖೇನ ನಿರುದ್ಯೋಗಿಗಳ ಸಮಸ್ಯೆಗೂ ಪರಿಹಾರ ಒದಗಿಸುತ್ತೇನೆ ಎನ್ನುತ್ತಾರೆ ರಾಮೋಜಿಗೌಡ.

    ಪದವೀಧರರ ಆಪದ್ಬಾಂಧವ ರಾಮೋಜಿಗೌಡ

    ನಿರುದ್ಯೋಗಿಗಳ ಪಾಲಿನ ಕರುಣಾಮಯಿ: ಪದವಿ, ಸ್ನಾತಕೋತ್ತರ ಪಡೆದು ಉದ್ಯೋಗ ಸಿಗದೆ ಕಂಗಾಲಾಗಿದ್ದ ಸಾವಿರಾರು ನಿರುದ್ಯೋಗಿಗಳಿಗೆ ಆಸರೆಯಾದ ರಾಮೋಜಿಗೌಡ, ತಮ್ಮ ನೆಕ್ಸ್​ಪ್ಲೇಸ್ ಇನ್ಪೋ ಪ್ರೖೆ.ಲಿ. ಕಂಪನಿ ಮೂಲಕ ಉಚಿತವಾಗಿ ಕೆಲಸ ಕೊಟ್ಟಿರುವುದು ಗಮನಾರ್ಹ. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಬಿಟಿಎಂ ಲೇಔಟ್, ಜಯನಗರ ಸೇರಿ ಹತ್ತಾರು ಕಡೆಗಳಲ್ಲಿ ‘ಉದ್ಯೋಗ ಮೇಳ’ ಆಯೋಜಿಸಿ 35 ಸಾವಿರಕ್ಕೂ ಅಧಿಕ ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸಿದ್ದಾರೆ. ಪ್ರತಿನಿತ್ಯ 3-4 ಮಂದಿ ಕೆಲಸ ಬೇಕೆಂದು ರಾಮೋಜಿಗೌಡ ಬಳಿ ಬರುತ್ತಿರುತ್ತಾರೆ. ತಮ್ಮ ಕಂಪನಿಯಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಸೇರಿ ಸಾವಿರಾರು ಮಂದಿಗೆ ಕೆಲಸ ನೀಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವವರಿಗೆ ಹಣಕಾಸು ನೆರವು ನೀಡಿದ್ದಾರೆ. ಗೃಹ ನಿರ್ಮಾಣ ಸಂಘದಿಂದ ಹಲವರಿಗೆ ನಿವೇಶನ ಕೊಡಿಸಿದ್ದಾರೆ.

    ಸಾಧನೆಯ ಹೆಜ್ಜೆಗುರುತುಗಳು

    1. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಭಾರತ್ ಜೋಡೋ’ ಪಾದಯಾತ್ರೆಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶದ 12 ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶ, 150 ದಿನ ಕಾಲ 3,570 ಕಿ.ಮೀ. ನಡಿಗೆ ಇದಾಗಿತ್ತು. ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆಯು ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಪಂಜಾಬ್ ಮೂಲಕ ಸಾಗಿ ಜಮ್ಮು- ಕಾಶ್ಮೀರದಲ್ಲಿ ಕೊನೆಗೊಂಡಿತ್ತು.

    2. ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಎಸಿಪಿಟಿ, ಮೆಡಿಕಲ್ ಫೌಂಡೇಷನ್, ಸಿಇಟಿ, ನೀಟ್ ಸೇರಿ ಹಲವು ಕೋರ್ಸ್​ಗಳಿಗೆ ತರಬೇತಿ ನೀಡುವ ಉದ್ದೇಶದಿಂದ 25ಕ್ಕೂ ಅಧಿಕ ಕೋಚಿಂಗ್ ಸೆಂಟರ್​ಗಳನ್ನು ತೆರೆದಿದ್ದಾರೆ. ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡುವ ಜತೆಗೆ ನೂರಾರು ನಿರುದ್ಯೋಗಿ ಶಿಕ್ಷಕರಿಗೆ ಉದ್ಯೋಗ ನೀಡಿದ್ದರು. ಕೋಚಿಂಗ್ ಸೆಂಟರ್​ಗಳಲ್ಲಿ ಶಿಕ್ಷಕರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ತರಬೇತಿ ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ.

    3. ಮಾಗಡಿ ರಸ್ತೆಯಲ್ಲಿ ಬ್ರಿಟನ್ ಇಂಟರ್​ನ್ಯಾಷನಲ್ ಶಾಲೆ ಸ್ಥಾಪಿಸಿ ಹಲವು ಶಿಕ್ಷಕರಿಗೆ ಉದ್ಯೋಗ ನೀಡಿದ್ದಾರೆ.

    4. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಗುರಿ ಹಿನ್ನೆಲೆಯಲ್ಲಿ ಹಲವು ಉದ್ದಿಮೆ ಆರಂಭಿಸಿದ್ದರು. ಕೆಲ ಉದ್ದಿಮೆ ತೆರೆದು ವೈಫಲ್ಯ ಕಂಡರೂ ಬೆಂಗಳೂರು ರೈಸ್ ಮಾಲ್ ತೆರೆದು ಯಶಸ್ವಿಯಾದರು.

    5. ಬೆಂಗಳೂರು ನಗರ ಜಿಲ್ಲೆಯ ಶಿಕ್ಷಕರ ಪತ್ತಿನ ಸಹಕಾರ ಸಂಘದ ಸ್ಥಾಪಕರಾಗಿದ್ದು, ಇದರ ಅಧ್ಯಕ್ಷರಾಗಿ ಹಾಗೂ ಕೆಪಿಸಿಸಿ ರಾಜ್ಯ ಶಿಕ್ಷಕರ ಘಟಕದ ಸಹ ಅಧ್ಯಕ್ಷರಾಗಿದ್ದಾರೆ. ಸಂಘದಲ್ಲಿ ಶಿಕ್ಷಕರು ಮತ್ತು ನೌಕರರಿಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡುವ ಹೊಸ ಯೋಜನೆ ರೂಪಿಸಿ ಶಿಕ್ಷಕ ಕುಟುಂಬಗಳಿಗೆ ವಸತಿ ಕಲ್ಪಿಸಿದ್ದಾರೆ.

    6. ಬಡವರಿಗಾಗಿ ಅರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜಿಸಿ ಕನ್ನಡಕ, ಔಷಧ ವ್ಯವಸ್ಥೆ ಕಲ್ಪಿಸಿದ್ದಾರೆ. ಮಕ್ಕಳಿಗಾಗಿ ಬೇಸಿಗೆ ಶಿಬಿರ ನಡೆಸುತ್ತ ಬರುತ್ತಿದ್ದಾರೆ.

    7. ವಿಧಾನಸಭೆ ಚುನಾವಣೆ ಸೇರಿ ವಿವಿಧ ಚುನಾವಣೆಗಳಲ್ಲಿ ತಮಗೆ ಕೊಟ್ಟಿದ್ದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.

    8. ಶಿಕ್ಷಕರ ಹಾಗೂ ನೌಕರರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ.

    9. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಬಡವರಿಗೆ ಆಹಾರ ಪೊಟ್ಟಣ ವಿತರಿಸಿದ್ದಾರೆ.

    10. ಕೋಲಾರ ಜಿಲ್ಲೆ ಚಿಂತಾಮಣಿ ತಾಲೂಕಿನ ಮಣಿಗನಹಳ್ಳಿ ಗ್ರಾಮದಲ್ಲಿ ದೇವಸ್ಥಾನಗಳ ನವೀಕರಣ ಮಾಡಿಸಿದ್ದಾರೆ.

    ಕಾಂಗ್ರೆಸ್ ಸರ್ಕಾರ ಶಿಕ್ಷಕರಿಗೆ, ನೌಕರರಿಗೆ, ಪದವೀಧರ ನೌಕರರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದರಿಂದಾಗಿ ಈ ಬಾರಿ ಶಿಕ್ಷಕರ ಚುನಾವಣೆಯಲ್ಲಿ ಪುಟ್ಟಣ್ಣ ಗೆದ್ದಿದ್ದಾರೆ. ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರಾಮೋಜಿಗೌಡ ಅವರನ್ನೂಈ ರೀತಿಯೇ ಗೆಲ್ಲಿಸಬೇಕು ಎಂದು ಪದವೀಧರ ಮತದಾರ ಬಂಧುಗಳಿಗೆ ವಿನಂತಿಸುತ್ತೇನೆ.

    | ಸಿದ್ದರಾಮಯ್ಯ ಮುಖ್ಯಮಂತ್ರಿ

    ರಾಮೋಜಿಗೌಡರಲ್ಲಿರುವ ಉತ್ತಮ ಸ್ಪಂದನಾ ಗುಣ ಹಾಗೂ ಈ ಕ್ಷೇತ್ರದ ಮತದಾರರಿಗೆ ಸಮಸ್ಯೆ ಅರ್ಥಮಾಡಿಕೊಂಡು ಬಗೆಹರಿಸುವ ಚಾಣಾಕ್ಷತೆ ಹೊಂದಿದ್ದಾರೆ.ಹಾಗಾಗಿ,ಇವರನ್ನು ಗೆಲ್ಲಿಸಬೇಕು.

            | ಪುಟ್ಟಣ್ಣ ವಿಧಾನಪರಿಷತ್ ಸದಸ್ಯ

    ಕ್ಷೇತ್ರದ ಪದವೀಧರರೊಂದಿಗೆ ಹೊಂದಿರುವ ಎಲ್ಲ ಸಂಘಟನೆ ಗುರುತಿಸಿ ಪಕ್ಷವು ರಾಮೋಜಿಗೌಡ ಅವರಿಗೆ ಟಿಕೆಟ್ ನೀಡಿದೆ. ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಎಲ್ಲರೂ ಅವರ ಗೆಲುವಿಗಾಗಿ ಶ್ರಮಿಸಬೇಕು.

    | ಡಿ.ಕೆ. ಶಿವಕುಮಾರ್ ಡಿಸಿಎಂ

    ರಾಮೋಜಿಗೌಡ ಅವರು ಉತ್ತಮ ಮಾನವೀಯ ಸಂಬಂಧಗಳನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿ. ಶಿಕ್ಷಕ, ಪದವೀಧರ ಸ್ನೇಹಿಯಾಗಿರುವ ಇವರನ್ನು ಬೆಂಬಲಿಸಿ ಗೆಲ್ಲಿಸಿಕೊಂಡು ಬರಬೇಕೆಂದು ಎಲ್ಲ ಪದವೀಧದರಲ್ಲಿ ವಿನಂತಿಸಿಕೊಳ್ಳುತ್ತೇನೆ.

    | ರಾಮಲಿಂಗಾರೆಡ್ಡಿ ಸಚಿವ

    ಅಕಾಲಿಕ ಮಳೆಗೆ ತತ್ತರಿಸಿದ ಅನ್ನದಾತ: ನೆಲ ಕಚ್ಚಿದ ಬೆಳೆ, ಅಪಾರ ನಷ್ಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts