More

    ಅಕಾಲಿಕ ಮಳೆಗೆ ತತ್ತರಿಸಿದ ಅನ್ನದಾತ: ನೆಲ ಕಚ್ಚಿದ ಬೆಳೆ, ಅಪಾರ ನಷ್ಟ!

    ಚಂಡೀಗಢ: ಬೆಳೆ, ಇಳುವರಿ ಕೈಗೆ ಸಿಗಲು ಸಕಾಲದಲ್ಲಿ ಉತ್ತಮ ಮಳೆಯಾಗಲಿ ಎಂದು ರೈತರು ಆಶಿಸುತ್ತಾರೆ. ಆದರೆ ಈ ಬಾರಿ ಅಕಾಲಿಕ ಮಳೆ ರೈತರು ನಿರೀಕ್ಷೆ ಮಾಡದ ರೀತಿ ಬಂದು ಹೋಗಿದೆ. ಸಾಕಷ್ಟು ಬೆಳೆಹಾನಿಯಾಗಿದೆ. ಪಂಜಾಬ್​ ಹಲವು ಭಾಗಗಳಲ್ಲಿ ಶನಿವಾರ ಅಕಾಲಿಕ ಮಳೆಯಾಗಿದ್ದು, ಬೆಳೆ ನಷ್ಟದ ಭೀತಿ ಎದುರಾಗಿದೆ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟ ನಿಖಿಲ್​: ಯಾವ ಪಕ್ಷ, ಕ್ಷೇತ್ರ ಇಲ್ಲಿದೆ ಮಾಹಿತಿ?

    ರಾಜ್ಯದ ಹಲವು ಕಡೆ ಬಿರುಗಾಳಿ, ಆಲಿಕಲ್ಲು ಸಹಿತಿ ಭರ್ಜರಿ ಮಳೆಯಾಗಿದೆ. ಬಟಿಂಡಾ, ಫಾಜಿಲ್ಕಾ, ಲುಧಿಯಾನ, ಪಟಿಯಾಲ, ಅಮೃತಸರ ಮತ್ತು ಪಠಾಣ್‌ಕೋಟ್ ಸೇರಿದಂತೆ ಪಂಜಾಬ್‌ನ ಹಲವಾರು ಭಾಗಗಳಲ್ಲಿ ಮಳೆ ಸುರಿದಿದೆ.

    ಪಂಜಾಬ್ ಮತ್ತು ಹರಿಯಾಣದ ಹಲವು ಪ್ರದೇಶಗಳಲ್ಲಿ ಗೋದಿಯ ಕೊಯ್ಲು ಏಪ್ರಿಲ್ 1 ರಿಂದ ಪ್ರಾರಂಭವಾಗುತ್ತದೆ. ಗೋಧಿ ಬೆಳೆ ಕಟಾವಿಗೆ ಸಿದ್ಧವಾಗಿದ್ದ ಸಮಯದಲ್ಲಿ ಜೋರಾದ ಗಾಳಿ ಸಹಿತ ಭಾರಿ ಮಳೆ ಸುರಿದಿದ್ದು ರೈತರಲ್ಲಿ ಆತಂಕ ತಂದಿದೆ.

    ರಾಜ್ಯದಲ್ಲಿ ಬಿರುಗಾಳಿ ಹಾಗೂ ಜೋರು ಮಳೆಗೆ ಗೋಧಿ ಬೆಳೆ ನೆಲಕಚ್ಚಿದ್ದು ರೈತರ ಬೆಳೆಗಳು ನೆಲಸಮವಾಗಿವೆ. ಕಟಾವು ವೇಳೆ ಸುರಿದ ಅಕಾಲಿಕ ಮಳೆಯಿಂದ ಇದರ ಕೊಯ್ಲು ಮಾಡುವುದು ಕಷ್ಟದ ಕೆಲಸ ಇದರಿಂದ ಬೆಳೆ ಇಳುವರಿ ಮೇಲೆ ಹೊಡೆತ ಬೀಳುತ್ತದೆ. ಈ ಅಕಾಲಿಕ ಮಳೆಯಿಂದಾಗಿ ಗೋಧಿ ಇಳುವರಿ ಮೇಲೆ ಪರಿಣಾಮ ಬೀರಲಿದೆ ಎಂದು ಬಟಿಂಡಾದ ರೈತರೊಬ್ಬರು ನೋವನ್ನು ತೋಡಿಕೊಂಡಿದ್ದಾರೆ.

    ರಾಜ್ಯದ ಮಾಲ್ವಾ ಪ್ರಾಂತ್ಯದಲ್ಲಿ ಸುರಿದ ಅಕಾಳಿಕ ಮಳೆಗೆ ಗೋಧಿ ಬೆಳೆ ಹಾನಿಗೀಡಾಗಿದೆ. ಕೆಲ ದಿನಗಳ ಹಿಂದೆಯೂ ಆಲಿಕಲ್ಲು ಸಹಿತ ಮಳೆ ಸುರಿದು ರೈತರ ನೆಮ್ಮದಿ ಹಾಳು ಮಾಡಿತ್ತು. ಹೀಗಾಗಿ ತಕ್ಷಣ ಬೆಳೆ ನಷ್ಟದ ಸಮೀಕ್ಷೆ ನಡೆಸಲು ಆದೇಶಿಸಬೇಕು. ಜತೆಗೆ ರೈತರಿಗೆ ಮಧ್ಯಂತರ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನು ಶಿರೋಮಣಿ ಅಕಾಲಿದಳ ಆಗ್ರಹಿಸಿದೆ.

    ಈ ಕುರಿತು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ತಮ್ಮ ಟ್ಟೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಬಟಿಂಡಾದ ಸಂಸದೆ ಹರಿಸಿಮ್ರತ್ ಕೌರ್ ಬಾದಲ್ ಪ್ರತಿಕ್ರಿಯಿಸಿ, ಮಾಲ್ವಾ ಪ್ರದೇಶದಲ್ಲಿ ಒಂದು ಎರಡು ಬಾರಿ ಬಿರುಗಾಳಿ ಸಮೇತ ಆಲಿಕಲ್ಲು ಮಳೆಯಾಗಿದೆ. ಬೆಳೆ ಹಾನಿ ಅನುಭವಿಸಿದ ರೈತರಿಗೆ ಈವರೆಗೂ ಯಾವುದೇ ಪರಿಹಾರವನ್ನು ಸರ್ಕಾರ ಕೊಟ್ಟಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ತಕ್ಷಣ ಬೆಳೆಹಾನಿ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಬೆಳೆ ಹಾನಿ ಸಮೀಕ್ಷೆಯನ್ನು ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

    ನನ್ನದು ಪಕ್ಕಾ ಲವ್‌ ಮ್ಯಾರೇಜ್‌, ಆದರೆ ಒಂದು ಕಂಡೀಷನ್….: ನಟ ವಿಜಯ್​ ಮನದಾಳದ ಮಾತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts