ರಾಜಕೀಯಕ್ಕೆ ಎಂಟ್ರಿ ಕೊಟ್ಟ ಟಾಲಿವುಡ್​ ನಟ ನಿಖಿಲ್​: ಯಾವ ಪಕ್ಷ, ಕ್ಷೇತ್ರ ಇಲ್ಲಿದೆ ಮಾಹಿತಿ?

nikil
Published on

ಅಮರಾವತಿ: ಆಂಧ್ರಪ್ರದೇಶ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ಆಂಧ್ರದಲ್ಲಿ ಚುನಾವಣಾ ರಾಜಕೀಯ ಗರಿಗೆದರಿದ್ದು, ಇಂದು (ಶನಿವಾರ) ತೆಲುಗು ನಟ ನಿಖಿಲ್ ಸಿದ್ದಾರ್ಥ್‌ ತೆಲುಗು ದೇಶಂ ಪಕ್ಷ ಸೇರ್ಪಡೆಯಾಗಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಖಿಲ್​ ಅವರು ಸ್ಪರ್ಧಿಸುವ ಬಗ್ಗೆ ಹಲವು ದಿನಗಳಿಂದ ಸುದ್ದಿಯಾಗಿತ್ತು. ನಿಖಿಲ್​ ಅವರು ಯಾವ ಪಾರ್ಟಿ ಸೇರಿಕೊಳ್ತಾರೆ. ಎಲ್ಲಿಂದ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಅನ್ನೋದು ಸಸ್ಪೆನ್ಸ್ ಆಗಿತ್ತು. ಅಂತಿಮವಾಗಿ ತೆಲುಗು ದೇಶಂ (ಟಿಡಿಪಿ) ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್​ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ನಟ ನಿಖಿಲ್ ಈ ಬಾರಿ ಪ್ರತ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನಲಾಗಿದೆ. ಆದರೆ ತೆಲುಗು ದೇಶಂ ಪಕ್ಷದ ಪರವಾಗಿ ರಾಜ್ಯಾದ್ಯಂತ ಸ್ಟಾರ್ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಟಿಡಿಪಿ ಅಂತಿಮ ಪಟ್ಟಿ ಬಿಡುಗಡೆ: ತೆಲುಗು ದೇಶಂ ಪಕ್ಷವು 4 ಲೋಕಸಭೆ ಮತ್ತು 9 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಈ ಪಟ್ಟಿಯನ್ನು ಶುಕ್ರವಾರ ಘೋಷಣೆ ಮಾಡಲಾಗಿದೆ. ವಿಜಯನಗರಂ ಟಿಡಿಪಿ ಸಂಸದ ಅಭ್ಯರ್ಥಿಯಾಗಿ ಅಪ್ಪಲನಾಯ್ಡು ಮತ್ತು ಒಂಗೋಲ್ ಸಂಸದ ಅಭ್ಯರ್ಥಿಯಾಗಿ ಮಾಗುಂಟ ಶ್ರೀನಿವಾಸರೆಡ್ಡಿ ಅವರ ಹೆಸರನ್ನು ಅಂತಿಮಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net