More

    ತನ್ನ ಕನಸಿನ ಮನೆಗೆ ಮಾಜಿ ಸಿಎಂಗಳ ಹೆಸರಿಟ್ಟ ಸಂಸದ

    ವಿಜಯಪುರ: ಸಂಸದರೊಬ್ಬರು ತಮ್ಮ ಕನಸಿನ ಮನೆಗೆ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ನಾಮಕರಣ ಮಾಡಿದ್ದಾರೆ. ಆ ಮೂಲಕ ತನ್ನ ನೆಚ್ಚಿನ ನಾಯಕರ ಕುರಿತು ಅಭಿಮಾನ ಮೆರೆದಿದ್ದಾರೆ.

    ನಗರ ಹೊರವಲಯದಲ್ಲಿ ಬಿಜೆಪಿ ಸಂಸದ, ಕೇಂದ್ರದ ಮಾಜಿ ಸಚಿವ ರಮೇಶ್ ಜಿಗಜಿಣಗಿ ಅವರು ನೂತನ ಮನೆ ನಿರ್ಮಿಸಿದ್ದಾರೆ. ಈ ನಿವಾಸಕ್ಕೆ ದಿ. ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್​ ಅವರ ಹೆಸರನ್ನೇ ಇಟ್ಟಿದ್ದಾರೆ. ಇದನ್ನೂ ಓದಿರಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಬರಹ; ಕಾಂಗ್ರೆಸ್​ ಮುಖಂಡ ಅರೆಸ್ಟ್

    ತನ್ನ ಕನಸಿನ ಮನೆಗೆ ಮಾಜಿ ಸಿಎಂಗಳ ಹೆಸರಿಟ್ಟ ಸಂಸದರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್​.ಪಟೇಲ್​ರ ಅಪ್ಪಟ ಶಿಷ್ಯ ರಮೇಶ ಜಿಗಜಿಣಗಿ. ಇಂದು(ಆ.29) ದಿ.ರಾಮಕೃಷ್ಣ ಹೆಗಡೆ ಅವರ ಜನ್ಮದಿನ. ಹಾಗಾಗಿ ಆ ನಾಯಕರ ಸ್ಮರಣಾರ್ಥ ತನ್ನ ಮನೆಗೆ ಅವರ ಹೆಸರನ್ನೇ ನಾಮಕರಣ ಮಾಡಿದ್ದಾರೆ.

    ಗೃಹ, ಕಂದಾಯ, ಅಬಕಾರಿ, ಸಮಾಜ ಕಲ್ಯಾಣ ಸೇರಿದಂತೆ ನಾನಾ ಇಲಾಖೆಯ ಸಚಿವರಾಗಿದ್ದ ರಮೇಶ ಜಿಗಜಿಣಗಿ, ಇದೀಗ ವಿನೂತ ಹೆಜ್ಜೆ ಇಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts