More

    ತಣ್ಣೀರ ಸ್ನಾನ ಎಷ್ಟು ಪ್ರಯೋಜನಕಾರಿ? ಈ ಸಂಗತಿ ತಿಳಿದ್ರೆ, ಇನ್ಮುಂದೆ ಬಿಸಿ ನೀರೇ ಮುಟ್ಟಲ್ಲ ನೀವು!

    ಬೆಂಗಳೂರು: ನಮ್ಮ ದಿನಚರಿ ಪ್ರಾರಂಭವಾಗುವುದೇ ಜಳಕದಿಂದ. ಕೆಲವರು ದಿನಕ್ಕೆ ಒಂದು ಬಾರಿ ಸ್ನಾನ ಮಾಡಿದ್ರೆ, ಇನ್ನೂ ಕೆಲವರು ಎರಡು ಬಾರಿ ಮಾಡುತ್ತಾರೆ. ಎರಡೆರೆಡು ಬಾರಿ ಏಕೆಂದು ಒಂದಷ್ಟು ಜನ ಪ್ರಶ್ನಿಸಬಹುದು. ಇದಕ್ಕೆ ಕಾರಣ, ಬೆಳಗ್ಗೆ ಕೆಲಸಕ್ಕೆ ಹೋಗುವ ಮುನ್ನ ಒಂದು ಬಾರಿ ಮಾಡಿದರೆ, ಕೆಲಸ ಮುಗಿದ ಮೇಲೆ ಬೆವರಿರುತ್ತೇವೆ ಎಂದು ಇನ್ನೊಂದು ಬಾರಿ ಆಯಾಸ ಇಳಿಸಿಕೊಳ್ಳುವಲ್ಲಿ, ಉತ್ತಮ ನಿದ್ರೆಗಾಗಿ ಎರಡು ಬಾರಿ ಮಾಡುವ ಅಭ್ಯಾಸ ಕೆಲವರದ್ದು.

    ಇದನ್ನೂ ಓದಿ: ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಕೊಡಿ: ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ

    ಬಿಸಿನೀರಿನಿಂದ ಸ್ನಾನ ಮಾಡುವುದೇ ಇಂದು ಹೆಚ್ಚು ಚಾಲ್ತಿಯಲ್ಲಿದೆ. ಅದರಲ್ಲೂ ಎಲೆಕ್ಟ್ರಿಕ್ ಗೀಸರ್, ಗ್ಯಾಸ್​ ಗೀಸರ್​, ಸೋಲರ್​ ಹೀಗೆ ಮುಂತಾದ ವಸ್ತುಗಳ ಸಹಾಯದಿಂದ ಬಿಸಿ ನೀರ ಜಳಕ ಕೆಲವರಿಗೆ ಹಿತ ಕೊಡುತ್ತದೆ. ಆದರೆ, ಅದರಿಂದ ಕೆಲವು ದುಷ್ಪರಿಣಾಮಗಳಿವೆ. ಬಿಸಿನೀರ ಬಳಕೆಗಿಂತ ತಣ್ಣೀರಿನ ಸ್ನಾನ ಮಾಡುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿದ್ದು, ಒಂದು ರೀತಿ ಜಲಚಿಕಿತ್ಸೆ ಸಿಕ್ಕಂತಾಗುತ್ತದೆ.

    70°Fಗಿಂತ ಕಡಿಮೆ ನೀರಿನ ತಾಪಮಾನವನ್ನು ಹೊಂದಿರುವ ನೀರಿನ ಸ್ನಾನ ದೇಹಕ್ಕೆ ಉತ್ತಮ. ಹಾಗಾದ್ರೆ, ನಮ್ಮ ದೇಹದ ಆರೋಗ್ಯಕ್ಕೆ ತಣ್ನೀರು ಸ್ನಾನ ಎಷ್ಟು ಪ್ರಯೋಜನಕಾರಿ ಆಗುತ್ತದೆ. ಏನೆಲ್ಲಾ ಸಮಸ್ಯೆಗಳು ನಿಯಂತ್ರಣಗೊಳ್ಳುತ್ತದೆ ಎಂಬುದರ ಮಾಹಿತಿ ಇಲ್ಲಿದೆ ಗಮನಿಸಿ.

    ಇದನ್ನೂ ಓದಿ: RCB ತಂಡದ ಈ ಇಬ್ಬರು ಬ್ಯಾಟ್ಸ್​ಮನ್​ ವಿಕೆಟ್​ ತೆಗೆಯಲು ಬುಮ್ರಾ ಸಜ್ಜು! ಯಾರ ಮುಡಿಗೆ ಗೆಲುವು?

    ವಾರಕ್ಕೆ 2ರಿಂದ 3 ಬಾರಿ ತಣ್ಣೀರಿನ ಸ್ನಾನವನ್ನು 5 ನಿಮಿಷಗಳವರೆಗೆ ಮಾಡುವುದರಿಂದ ಖಿನ್ನತೆಯ ಲಕ್ಷಣಗಳು ದೂರವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ತಣ್ಣೀರು ಸಹಾಯ ಮಾಡುತ್ತದೆ. ಖಿನ್ನತೆಯಿಂದ ಬಳಲುವ ಜನರಿಗೆ ಇದೊಂದು ರೀತಿ ಸೌಮ್ಯವಾದ ಎಲೆಕ್ಟ್ರೋಶಾಕ್ ಚಿಕಿತ್ಸೆಯಾಗಿ ಕೆಲಸ ಮಾಡುತ್ತದೆ. ತಣ್ಣೀರು ನಿಮ್ಮ ಮೆದುಳಿಗೆ ಅನೇಕ ವಿದ್ಯುತ್ ಪ್ರಚೋದನೆಗಳನ್ನು ರವಾನಿಸುತ್ತದೆ. ಕೆಲವೊಮ್ಮೆ ಹ್ಯಾಪಿನೆಸ್​ ಹಾರ್ಮೋನುಗಳು ಎಂದು ಕರೆಯಲ್ಪಡುವ ಎಂಡಾರ್ಫಿನ್ಗಳು ಸಹ ಬಿಡುಗಡೆಯಾಗುತ್ತವೆ.

    ತಣ್ಣೀರಿನ ಸ್ನಾನ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ಸಾಮಾನ್ಯ ರೋಗಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವ್ಯಕ್ತಿಯ ಮನಸ್ಥಿತಿಯನ್ನು ಸುಧಾರಿಸುತ್ತದೆ ಹಾಗೂ ಒತ್ತಡವನ್ನು ನಿವಾರಿಸುತ್ತದೆ.

    ಇದನ್ನೂ ಓದಿ: ಎಲ್ಟು ಮುತ್ತಾ ಮೊದಲ ನೋಟ; ಪೋಸ್ಟರ್ ರಿಲೀಸ್ ಮಾಡಿದ ಶೈಲಜಾ, ಸಂಗೀತ, ರಮೇಶ್

    ಸ್ನಾಯುಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ತಣ್ಣೀರಿನ ಸ್ನಾನವನ್ನು ತೆಗೆದುಕೊಳ್ಳುವುದರಿಂದ ಸ್ನಾಯು ನೋವಿನಿಂದ ಪರಿಹಾರವನ್ನು ಪಡೆಯಬಹುದಾಗಿದೆ. ಇದು ಕೋಲ್ಡ್ ಕಂಪ್ರೆಷನ್​ನಂತೆ ಕೆಲಸ ಮಾಡುತ್ತದೆ. ಚರ್ಮ ಮತ್ತು ಕೂದಲಿಗೂ ಪ್ರಯೋಜನಕಾರಿ. ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ, ನಿಮ್ಮ ಚರ್ಮ ಒಣಗುತ್ತದೆ ಮತ್ತು ಕಿರಿಕಿರಿ ಉಂಟಾಗುತ್ತದೆ. ತಣ್ಣೀರಿನ ಸ್ನಾನ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ,(ಏಜೆನ್ಸೀಸ್).

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

    26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts