More

    RCB ತಂಡದ ಈ ಇಬ್ಬರು ಬ್ಯಾಟ್ಸ್​ಮನ್​ ವಿಕೆಟ್​ ತೆಗೆಯಲು ಬುಮ್ರಾ ಸಜ್ಜು! ಯಾರ ಮುಡಿಗೆ ಗೆಲುವು?

    ಬೆಂಗಳೂರು: ಇಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ಸೀಸನ್‌ನ 25ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಐದು ಬಾರಿಯ ಚಾಂಪಿಯನ್ ಆದ​ ಮುಂಬೈ ಇಂಡಿಯನ್ಸ್ ಇತ್ತೀಚೆಗೆ ಗೆಲುವಿನ ಖಾತೆ ತೆರೆದರೆ, ಸತತ ಸೋಲುಗಳಿಂದ ಹಿಂದುಳಿದಿರುವ ಆರ್​ಸಿಬಿ ಇನ್ನೂ ಗೆಲುವಿನ ನಿರೀಕ್ಷೆಯಲ್ಲಿದೆ.

    ಇದನ್ನೂ ಓದಿ: ಸಿನಿಮಾ ಹಬ್ಬದೌತಣ; ಯುಗಾದಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳ ಅಪ್ಡೇಟ್

    ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಉತ್ತಮ ಸ್ಕೋರ್​ ಕಲೆಹಾಕುವ ಮೂಲಕ ತನ್ನ ಎದುರಾಳಿಗಳನ್ನು ಮಣಿಸುವಲ್ಲಿ ಸಫಲವಾಯಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 30 ರನ್‌ಗಳ ಭರ್ಜರಿ ಜಯದೊಂದಿಗೆ ತಮ್ಮ ಸತತ ಮೂರು ಸೋಲಿನ ಸ್ಟ್ರೀಕ್​ನ ಮುರಿದರು. ಆದರೆ, ಆರಂಭಿಕ ಪಂದ್ಯದಲ್ಲಿ ಸೋತ ಆರ್​ಸಿಬಿ ತದನಂತರ ಒಂದು ಪಂದ್ಯ ಗೆದ್ದಿದ್ದು ಬಿಟ್ಟರೆ ಉಳಿದೆಲ್ಲಾ ಪಂದ್ಯಗಳನ್ನು ಕೈಚೆಲ್ಲಿತು.

    ಸತತ ಮೂರು ಸೋಲುಗಳನ್ನು ಅನುಭವಿಸಿರುವ ಆರ್​ಸಿಬಿ ತಂಡ ಇಂದಿನ ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆದ್ದು, ಗೆಲುವಿನ ಟ್ರ್ಯಾಕ್‌ಗೆ ಮರಳಲೇಬೇಕಿದೆ. ಈ ಮಧ್ಯೆ ಎಂಐ ತಂಡದ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿಗೆ ಎದುರಾಳಿಗಳು ಬ್ಯಾಟ್ ಮಾಡುವುದು ಕಷ್ಟಕರವಾಗುತ್ತಿದೆ. ಬೆಸ್ಟ್​ ಬೌಲರ್​ಗಳ ಪೈಕಿ ಮುಂಚೂಣಿಯಲ್ಲಿರುವ ಬುಮ್ರಾ ಮೇಲಿನ ನಿರೀಕ್ಷೆ ಇದೀಗ ಮತ್ತಷ್ಟು ದುಪ್ಪಟ್ಟಾಗಿದೆ.

    ಇದನ್ನೂ ಓದಿ: ಬಿಟ್ಟಿ ಭಾಗ್ಯಗಳೆಂದು ಹೀಗಳೆವ ಮಂದಿಗೆ ಇದು ತಪರಾಕಿ ಬಾರಿಸಿದಂತಿದೆ: ಸಿಎಂ ಸಿದ್ದರಾಮಯ್ಯ

    ಇಂದಿನ ಪಂದ್ಯದಲ್ಲಿ ಆರ್​ಸಿಬಿಯ ಸ್ಟಾರ್​ ಬ್ಯಾಟ್ಸ್​ಮನ್​ಗಳಾದ ವಿರಾಟ್​ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ವಿಕೆಟ್​ಗಳ ಮೇಲೆ ಮುಂಬೈ ತಂಡದ ಕಣ್ಣು ಬಿದ್ದಿದ್ದು, ಇವರಿಬ್ಬರ ವಿಕೆಟ್​ ತೆಗೆದುಕೊಳ್ಳುವುದು ಬುಮ್ರಾ ಗುರಿಯಾಗಿದೆ. ತನ್ನ ಬೌಲಿಂಗ್ ದಾಳಿಗೆ ವಿರಾಟ್​ ಮತ್ತು ಗ್ಲೆನ್ ಆರಂಭಿಕ ಹಂತದಲ್ಲೇ ವಿಕೆಟ್ ಒಪ್ಪಿಸುತ್ತಾರಾ? ಅಥವಾ ಅಬ್ಬರಿಸುತ್ತಾರಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

    ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಬುದ್ದಿ ಕಲಿಸಲು ಮುಂದಾದ್ರು ಫ್ಯಾನ್ಸ್​! ಹೀಗೆ ಮಾಡೋದೇ ಸರಿ ಅಂತಿದ್ದಾರೆ…

    ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts