More

    ದೆಹಲಿಯಲ್ಲಿ ಫಡ್ನವಿಸ್-ರಮೇಶ್ ಜಾರಕಿಹೊಳಿ ಭೇಟಿ; ರಾಜೀನಾಮೆ ಕುರಿತು ಏನೆಂದರು?

    ನವದೆಹಲಿ: ಮಂಗಳವಾರ ದೆಹಲಿಗೆ ದಿಢೀರ್ ಧಾವಿಸಿದ ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಹಾರಾಷ್ಟ್ರ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿದ್ದಾರೆ. ಈ ಹಿಂದೆ ಅವರು ಮುಂಬೈನಲ್ಲಿ ಫಡ್ನವಿಸ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದ ಜಾರಕಿಹೊಳಿ, ಅದೇ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ಬಂದಿದ್ದಾರಾ ಎಂಬ ಅನುಮಾನ ಮೂಡಿದೆ.

    ದಿಲ್ಲಿ ವಿಮಾನ ನಿಲ್ದಾಣ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಜಾರಕಿಹೊಳಿ, ದಿಲ್ಲಿಯಲ್ಲಿ ಕೆಲವು ನಾಯಕರನ್ನು ಭೇಟಿ ಮಾಡಲಿದ್ದೇನೆ. ಬಿಜೆಪಿಯಲ್ಲೇ ಮೂವರು ನಾಯಕರು ನನ್ನ ವಿರುದ್ಧ ಪಿತೂರಿ ಮಾಡಿ, ಬೆನ್ನಿಗೆ ಚೂರಿ ಹಾಕಿದರು. ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ದೆಹಲಿಯಲ್ಲಿ 2 ದಿನ ಇರಲಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ನಿಮ್ಮೊಂದಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದೂ ಹೇಳಿದ್ದಾರೆ.

    ಇದನ್ನೂ ಓದಿ: ಗುಮ್ಮಟನಗರಿಯಲ್ಲಿ ಕುತೂಹಲಕಾರಿ ಬೆಳವಣಿಗೆ; ಶಾಸಕ ಯತ್ನಾಳರಿಗೆ ಜತೆಯಾಗಿ ನಿಲ್ಲುವೆ ಎಂದ ಸಿ.ಪಿ.ಯೋಗೀಶ್ವರ್

    ಬಿಜೆಪಿಗೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಸಿಎಂ ಯಡಿಯೂರಪ್ಪನರು ನನಗೆ ಅನ್ಯಾಯ ಮಾಡಿಲ್ಲ. ವಿನಾಕಾರಣ ನಾನು ಅವರ ವಿರುದ್ಧ ಮಾತನಾಡಬಾರದು ಎಂದೂ ಸ್ಪಷ್ಟಪಡಿಸಿದರು. ಮಂಗಳವಾರ ಮಧ್ಯಾಹ್ನ ಎರಡೂವರೆಗೆ ದೆಹಲಿ ತಲುಪಿದ್ದ ರಮೇಶ್, ಆರ್‌ಎಸ್‌ಎಸ್ ಮುಖಂಡರೊಬ್ಬರ ಮನೆಯಲ್ಲಿ ಫಡ್ನವಿಸ್ ಜತೆಗೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.

    ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್​ ಮಾಹಿತಿ ಇಲ್ಲಿದೆ…

    ಕೆಥೊಲಿಕ್ ಪಾದ್ರಿಗಳ ಸೆಕ್ಸ್​ ಸ್ಕ್ಯಾಂಡಲ್​: 30 ತಿಂಗಳಲ್ಲಿ 368 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ!

    ಪ್ರಿಯಕರನ ಮೇಲಿನ ಸಿಟ್ಟಿಗೆ ಆತನ ಬೈಕಿಗೇ ಕಿಚ್ಚಿಟ್ಟಳು; ಧಗಧಗನೆ ಹೊತ್ತಿ ಉರಿಯಿತು ಅವಳೇ ಕೊಟ್ಟಿದ್ದ ದುಬಾರಿ ಗಿಫ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts