More

    ಇಂದು ಸಂಜೆ ಫಿಲಂ ರಿಲೀಸ್​ ಮಾಡ್ತಾರಂತೆ ಜಾರಕಿಹೊಳಿ! ಅದು ಯಾರ ಸಿನಿಮಾ?

    ಬೆಂಗಳೂರು: ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಆಡಿಯೋ-ವಿಡಿಯೋ ಫೈಟ್ ಮುಂದುವರಿಯಲಿದೆ. ಇಂದು ಸಂಜೆ 4ಗಂಟೆ ಬಳಿಕ ಸಿನಿಮಾ ತೋರಿಸ್ತೀನಿ ಎಂದು ನಿನ್ನೆಯೇ ರಮೇಶ್ ಜಾರಕಿಹೊಳಿ ಎಚ್ಚರಿಸಿದ್ದರು. ಅದು ಯಾವ ಸಿನಿಮಾ? ಯಾರದ್ದು? ಎಂಬುದಕ್ಕೆ ಸಂಜೆವರೆಗೂ ಕಾಯಲೇಬೇಕು.

    ನಿನ್ನೆ ಸಿಡಿ ಲೇಡಿ ಮೂರನೇ ವಿಡಿಯೋ ಬಿಡುಗಡೆ ಮಾಡುವ ಜತೆಗೆ ತನ್ನ ವಕೀಲ ಜಗದೀಶ್​ ಮೂಲಕ ರಮೇಶ್​ಜಾರಕಿಹೊಳಿ ವಿರುದ್ಧ ಕೇಸ್​ ದಾಖಲಿಸಿದ್ದರು. ಇದಾದ ಕೆಲವೇ ಸಮಯದಲ್ಲಿ ಸಿಡಿ ಯುವತಿ, ತನ್ನ-ತಂದೆ-ತಾಯಿ ಜತೆ ಮಾತನಾಡಿರುವ ಹಾಗೂ ಆ ವೇಳೆ ಡಿಕೆಶಿ ಹೆಸರು ಪ್ರಸ್ತಾಪಿಸಿದ್ದ ಆಡಿಯೋ ವೈರಲ್​ ಆಗಿ ಮತ್ತಷ್ಟು ಸಂಚಲನ ಮೂಡಿಸಿತ್ತು. ಇಂದು ಬೆಳಂಬೆಳಗ್ಗೆ 4ನೇ ವಿಡಿಯೋ ಬಿಡಗಡೆ ಮಾಡಿರುವ ಯುವತಿ, ರಮೇಶ್​ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನ್ನಿಸುತ್ತಿದೆ ಎಂದಿದ್ದಾಳೆ. ಇದಕ್ಕೂ ಮುನ್ನ ಅಂದ್ರೆ ನಿನ್ನೆ ಮಾತನಾಡಿದ್ದ ಜಾರಕಿಹೊಳಿ, ಶನಿವಾರ ಸಂಜೆ ಸಿನಿಮಾ ತೋರಿಸ್ತೀನಿ, ಇನ್ಮುಂದೆ ನಮ್ಮ ಆಟ ಶುರು ಎಂದಿದ್ದರು. ಇದನ್ನೂ ಓದಿರಿ ವಿಚಾರಣೆಗೆ ಬರಬೇಕಾದ್ರೆ ಇದನ್ನು ನೆರವೇರಿಸಿ: ಎಸ್​ಐಟಿಗೆ ತಲೆನೋವಾದ ಸಿಡಿ ಲೇಡಿಯ ಮತ್ತೊಂದು ವಿಡಿಯೋ!

    ಯುವತಿ ನಿನ್ನೆ ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದಳು. ಈ ಬೆನ್ನಲ್ಲೇ ವಕೀಲರನ್ನ ಭೇಟಿಯಾಗಿದ್ದ ರಮೇಶ್, ಅವರ ಕೊನೆಯ ಅಸ್ತ್ರ ಮುಗಿದಿದೆ. ಇನ್ಮುಂದೆ ನಮ್ಮ ಆಟ ಶುರು ಅಂತ ಹೇಳಿದ್ರು. ಡಿಕೆಶಿ ನನ್ನ ಸ್ನೇಹಿತ ಅಂತಲೇ ಕಾಲೆಳೆದಿದ್ದ ರಮೇಶ್​, ಷಡ್ಯಂತ್ರ ಮಾಡಿದವರನ್ನ ಜೈಲಿಗೆ ಕಳಿಸೋವರೆಗೂ ಬಿಡೋದಿಲ್ಲ ಎಂದು ಸವಾಲ್ ಹಾಕಿದ್ದರು. ಹೀಗೆ ಹೇಳಿದ ಒಂದು ಗಂಟೆಯಲ್ಲೇ ಯುವತಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಅದರಲ್ಲಿ ಯುವತಿಯೇ ಆ ವಿಡಿಯೋ ನಖಲಿ ಅಂತ ಹೇಳಿದ್ದು ಉಲ್ಲೇಖವಾಗಿದೆ. ಇಂದು ಸಂಜೆ ಯಾರಿಗೆ ಕಾದಿದೆ ಆಪತ್ತು? ಯಾರ ಹೆಸರೆಲ್ಲಾ ಬಹಿರಂಗವಾಗಲಿದೆ? ಇವತ್ತಿನ ಬಾಂಬ್ ಆಡಿಯೋನಾ ಅಥವಾ ವಿಡಿಯೋನಾ ಎಂಬ ಕುತೂಹಲ ದಟ್ಟವಾಗಿದೆ.

    ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಜಾರಕಿಹೊಳಿ ಸ್ಪರ್ಧೆ: ನಾಮಪತ್ರ ಸಲ್ಲಿಕೆ ವೇಳೆ ಬಾರದಂತೆ ಡಿಕೆಶಿಗೆ ಸೂಚನೆ

    ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts