More

    ಮೇಕೆದಾಟಿನಲ್ಲಿ ಮಹತ್ವದ ಸಭೆ ನಡೆಸಿದ ಸಚಿವ ರಮೇಶ್​ ಜಾರಕಿಹೊಳಿ

    ರಾಮನಗರ: ಕನಕಪುರ ತಾಲೂಕಿನ ಮೇಕೆದಾಟಿಗೆ ಸೋಮವಾರ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಕುರಿತು ಸ್ಥಳ ವೀಕ್ಷಣೆ ಮಾಡಿದರು.

    ಮೇಕೆದಾಟು ಯೋಜನೆ ಜಾರಿಯಾದರೆ ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಿಗೆ ಭಾರೀ ಅನುಕೂಲವಾಗಲಿದೆ. ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆಗೆ ಡಿಪಿಆರ್ ಸಲ್ಲಿಸಲಾಗಿತ್ತಾದರೂ ಆ ಸರ್ಕಾರ ಪತನವಾದ ನಂತರ ಯೋಜನೆ ಕೂಡ ಮೂಲೆ ಸೇರಿತ್ತು. ಇದೀಗ ಮತ್ತೆ ಮರುಜೀವ ಬಂದಿದ್ದು, ಜಲಸಂಪನ್ಮೂಲ ಸಚಿವರು ಮೇಕೆದಾಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಗುರುವಾರ ದೆಹಲಿಗೆ ತೆರಳುತ್ತಿದ್ದು, ಅಂದು ಪರಿಸರ ಇಲಾಖೆ ಮತ್ತು ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಈ ಯೋಜನೆಗಿರುವ ಅಡತಡೆಗಳನ್ನು ನಿವಾರಿಸುತ್ತೇವೆ. ಅಂದು ಮುಖ್ಯಮಂತ್ರಿಗಳೂ ನಮ್ಮೊಟ್ಟಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.

    ಇದನ್ನೂ ಓದಿರಿ ‘ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ’

    ಮೇಕೆದಾಟು ಯೋಜನೆಯ ಕಾಮಗಾರಿಗೆ ಶೀಘ್ರವೇ ಚಾಲನೆ ಸಿಗಲಿದೆ. ಈಗಾಗಲೇ ಯೋಜನೆ ವಿಚಾರವಾಗಿ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಅಗತ್ಯ ಬಿದ್ದರೆ ತಮಿಳುನಾಡು ಸರ್ಕಾರದೊಂದಿಗೂ ಚರ್ಚಿಸಲಾಗುತ್ತದೆ ಎಂದು ರಮೇಶ್ ಜಾರಕಿಹೋಳಿ ಹೇಳಿದರು. ಸಿ.ಪಿ.ಯೋಗೇಶ್ವರ್​ ಉಪಸ್ಥಿತರಿದ್ದರು.

    ಮೇಕೆದಾಟು ಯೋಜನೆ ಜಾರಿಯಾದಲ್ಲಿ ರಾಮನಗರ, ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಅನುಕೂಲ ಆಗಲಿದೆ.

    1982ರಲ್ಲೇ ನನ್ನ ಧರ್ಮಪತ್ನಿ ಜತೆ ಮಲೇಶಿಯಾದಲ್ಲಿ ಕ್ಯಾಸಿನೋ ನೋಡಿದ್ದೀನಿ; ಕುಮಾರಸ್ವಾಮಿ

    ರಾಗಿಣಿ ಸಂಪರ್ಕದಲ್ಲಿದ್ದ ಕಾಂಗ್ರೆಸ್​ ಮುಖಂಡ ಸಿಸಿಬಿ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts