More

    ಸಿಬಿಐಗೆ ಸಿಡಿ ಕೇಸ್ ಕೊಡಿ… ಎಂದು ಆಗ್ರಹಿಸುತ್ತಲೇ ಹೊಸ ಬಾಂಬ್​ ಸಿಡಿಸಿದ ರಮೇಶ್​ ಜಾರಕಿಹೊಳಿ

    ಬೆಳಗಾವಿ: ಡಿ.ಕೆ.ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಅದನ್ನು ಗಟ್ಟಿಯಾಗಿ ನಿಂತು ಎದುರಿಸಿ ಹೊರಗೆ ಬಂದಿದ್ದೇನೆ. ಸಿಡಿ ಕೇಸ್ ಅನ್ನು ಸಿಬಿಐಗೆ ಕೊಡಿಸುತ್ತೇನೆ‌ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದರು.

    ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ರಮೇಶ್​ ಜಾರಕಿಹೊಳಿ, ಅಮಿತ್ ಶಾ ಅವರ ಜತೆ ಮಾತನಾಡಿದ್ದೇನೆ. ಸಿಡಿ ಕೇಸ್​ನಲ್ಲಿ ಮಹಾನಾಯಕನ ಕೈವಾಡ ಇದೆ ಅನ್ನೋದಕ್ಕೆ ನನ್ನ ಬಳಿ ಸಾಕ್ಷಿ ಇದೆ. 40 ಕೋಟಿ ರೂ. ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಸಿಡಿ ಕೇಸಲ್ಲಿ ಸಿಕ್ಕಿಸಿ ಹಾಕಿಸಿದ್ದೇನೆ ಎಂದು ಸ್ವತಃ ಡಿಕೆಶಿಯೇ ಮಾತಾಡಿರುವ ಸಂಭಾಷಣೆ ನನಗೆ ಸಿಕ್ಕಿದೆ. ಸಿಡಿ ಕೇಸ್​ನ ಇಬ್ಬರು ಪ್ರಮುಖ ಆರೋಪಿಗಳು ಶಿರಾ ಹಾಗೂ ದೇವನಹಳ್ಳಿ ಮೂಲದವರು. ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ ಆತನ ಮನೆಯಲ್ಲಿ 90ರಿಂದ 110 ಸಿಡಿಗಳು ಸಿಕ್ಕಿವೆ. ಆತನ ಮನೆ ಮೇಲೆ ದಾಳಿ ಮಾಡಲು ಹೋದ ಅಧಿಕಾರಿಯೊಬ್ಬರ ಸಿಡಿಯೂ ಆ ವೇಳೆ ಸಿಕ್ಕಿದೆ ಎಂದು ಹೊಸ ಬಾಂಬ್​ ಸಿಡಿಸಿದರು.

    ಅಧಿಕಾರಿಯ ಸಿಡಿಯನ್ನೂ ಮುಚ್ಚಿಟ್ಟಿದ್ದಾರೆ. ಹಾಗಾಗಿ ಈ ಪ್ರಕರಣವನ್ನ ಸಿಬಿಐಗೆ ಕೊಡಬೇಕು. ಮುಂದಿನ ವಾರ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನ ಭೇಟಿಯಾಗುತ್ತೇನೆ. ಸಿಬಿಐ ವಿಚಾರಣೆಗೆ ಕೊಟ್ಟು ಮಹಾನಾಯಕನ ಪೂರ್ತಿ ಮುಖವಾಡ ಕಳಚಬೇಕು, ಅವನಿಗೆ ಬುದ್ಧಿ ಕಲಿಸಬೇಕು. ನನ್ನಂತೆ ಬೇರೆಯವರು ಸಂಕಷ್ಟಕ್ಕೆ ಸಿಲುಕಬಾರದು. ಬಹಳಷ್ಟು ಜನರನ್ನ ಬ್ಲ್ಯಾಕ್​ಮೇಲ್ ಮಾಡಲು ಡಿಕೆಶಿ ರೆಡಿಯಾಗಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಸಂತೋಷ ಪಾಟೀಲ್ ಆತ್ಮಹತ್ಯೆ ಕೇಸ್​ ಅನ್ನೂ ಸಿಬಿಐಗೆ ವಹಿಸಬೇಕು. ನನ್ನನ್ನು ಕಂಡ್ರೆ ಡಿಕೆಶಿಗೆ ಹೆದರಿಕೆ ಇದೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

    ಹಳೇ ಸ್ಕೂಟರ್​ನಲ್ಲಿ ದೇಶ ಸುತ್ತಿದ ತಾಯಿ-ಮಗನಿಂದ ಕುಕ್ಕೆಯಲ್ಲಿ ವಿಶೇಷ ಪೂಜೆ

    ಭ್ರಷ್ಟಾಚಾರಕ್ಕೆ ಜನ್ಮ ನೀಡಿದ್ದೇ ಕಾಂಗ್ರೆಸ್, ಉದ್ಯೋಗ ಮಾರಾಟ-ಅಪರಾಧಿಗಳನ್ನ ಬಿಡುವುದೇ ಈ ಪಕ್ಷದ ಚಾಳಿ: ಸಿಎಂ ಬೊಮ್ಮಾಯಿ‌ ಆಕ್ರೋಶ

    ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಅವಘಡ: ಮಾಲ್ಗುಡಿ ಎಕ್ಸ್​ಪ್ರೆಸ್ ರೈಲಿಗೆ ಸಿಲುಕಿ ಮಹಿಳೆಯರಿಬ್ಬರ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts