More

    ಭ್ರಷ್ಟಾಚಾರಕ್ಕೆ ಜನ್ಮ ನೀಡಿದ್ದೇ ಕಾಂಗ್ರೆಸ್, ಉದ್ಯೋಗ ಮಾರಾಟ-ಅಪರಾಧಿಗಳನ್ನ ಬಿಡುವುದೇ ಈ ಪಕ್ಷದ ಚಾಳಿ: ಸಿಎಂ ಬೊಮ್ಮಾಯಿ‌ ಆಕ್ರೋಶ

    ಬೆಂಗಳೂರು: ಭ್ರಷ್ಟಾಚಾರಕ್ಕೆ ಜನ್ಮ ನೀಡಿದ್ದೇ ಕಾಂಗ್ರೆಸ್ ಪಕ್ಷ. ಉದ್ಯೋಗ ಮಾರಾಟ, ಅಪರಾಧಿಗಳು ಸಿಕ್ಕಾಗ ಬಿಡುವುದು ಆ ಪಕ್ಷದ ಚಾಳಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಿಡಿಕಾರಿದರು.

    ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಸಿಎಂ, ಕಾಂಗ್ರೆಸ್ ಆಡಳಿತಾವಧಿಯ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ತನಿಖೆ ನಡೆಯುತ್ತಿದೆ. ಪರೀಕ್ಷೆ ಬರೆಯದವರನ್ನು ಶಿಕ್ಷಕರನ್ನಾಗಿ ನೇಮಿಸಿಕೊಂಡಿದೆ. ಆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಈ ಪ್ರಕರಣದ ಬಗ್ಗೆ ಮೊದಲು ಉತ್ತರ ನೀಡಲಿ ಎಂದು ಸವಾಲು ಹಾಕಿದರು.

    ನೂರು ದೂರು: ಕಾಂಗ್ರೆಸ್​ನವರು ಒಂದು ದೂರು ಕೊಟ್ಟಿದ್ದಾರೆ. ನಾವೂ ನೂರು ದೂರು ಕೊಡಬಹುದು. ಅಂತಹ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಭ್ರಷ್ಟಾಚಾರ, ಅಭಿವೃದ್ಧಿಗೆ‌ ವಿಮುಖವಾಗಿದ್ದರಿಂದಲೇ ಜನರು ಕಳೆದ ಬಾರಿ ಕಾಂಗ್ರೆಸ್​ ಅನ್ನು ಸೋಲಿಸಿದರು. ಈ ಬಾರಿಯೂ ಮತ್ತೆ ಸೋಲಿಸುತ್ತಾರೆ ಎಂಬುದು ಗ್ಯಾರಂಟಿಯಾಗಿದೆ. ಇದರಿಂದಾಗಿ ಉಚಿತ ಘೋಷಣೆ, ‌ಮಹಿಳೆಯರಿಗೆ ನೆರವು ಮುಂತಾದ ಕಾರ್ಯಕ್ರಮಗಳ ಭರವಸೆ ಘೋಷಿಸುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಟೀಕಿಸಿದರು.

    ಕುಕ್ಕರ್ ತನಿಖೆ: ಕುಣಿಗಲ್​ನಲ್ಲಿ ನಾಲ್ಕೈದು ಜನ ಕಾಂಗ್ರೆಸ್ ಶಾಸಕರ ಭಾವಚಿತ್ರವಿರುವ ಕುಕ್ಕರ್​ಗಳನ್ನು ಹಂಚಿರುವುದು ಸಾಕ್ಷಿ ಸಮೇತ ಪತ್ತೆಯಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶ ಪಡಿಸಿಕೊಂಡಿದ್ದಾರೆ. ಇಲಾಖೆ ಈಗಾಗಲೇ ದಂಡ ವಿಧಿಸಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಕಾಂಗ್ರೆಸ್​ನವರ ಕಥೆಯಿದು, ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದೆ. ಬೇರೆಯವರ ಬಗ್ಗೆ ಅಪಪ್ರಚಾರ ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ವಾಗ್ದಾಳಿ ನಡೆಸಿದರು.

    ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ, ರಮೇಶ್​​ ಜಾರಕಿಹೊಳಿ ವಿರುದ್ಧ ಪೊಲೀಸರಿಗೆ ದೂರು ನೀಡಿದ ಡಿಕೆಶಿ-ಸಿದ್ದರಾಮಯ್ಯ

    ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಅವಘಡ: ಮಾಲ್ಗುಡಿ ಎಕ್ಸ್​ಪ್ರೆಸ್ ರೈಲಿಗೆ ಸಿಲುಕಿ ಮಹಿಳೆಯರಿಬ್ಬರ ದುರ್ಮರಣ

    ಹಳೇ ಸ್ಕೂಟರ್​ನಲ್ಲಿ ದೇಶ ಸುತ್ತಿದ ತಾಯಿ-ಮಗನಿಂದ ಕುಕ್ಕೆಯಲ್ಲಿ ವಿಶೇಷ ಪೂಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts