More

    ಅಭಿವೃದ್ಧಿಯಲ್ಲಿ ಸಾಧನೆ ಶಿಖರವೇರಿದ ರಂಭಾಪುರಿ ಶ್ರೀಗಳು

    ಬಾಳೆಹೊನ್ನೂರು: ಜಗದ್ಗುರು ರೇಣುಕಾಚಾರ್ಯರಿಂದ ಸ್ಥಾಪಿತವಾದ ರಂಭಾಪುರಿ ಪೀಠದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಸಾಧನೆ ಶಿಖರ ಏರಿದ್ದಾರೆ ಎಂದು ಜೇಸಿಐ ಪೂರ್ವಾಧ್ಯಕ್ಷ ಎಚ್.ಗೋಪಾಲ್ ಹೇಳಿದರು.
    ರಂಭಾಪುರಿ ಪೀಠದಲ್ಲಿ ಮಲೆನಾಡಿನ ಒಳ್ಳೆಯ ಮನಸ್ಸುಗಳ ಒಕ್ಕೂಟ ಸೋಮವಾರ ರಾತ್ರಿ ಆಯೋಜಿಸಿದ್ದ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ 68ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಜಗದ್ಗುರುಗಳು ಪೀಠಾರೋಹಣ ನಡೆಸಿ 33ವರ್ಷಗಳಾಗಿದ್ದು, ಈ ಅವಧಿಯಲ್ಲಿ ಶ್ರೀಪೀಠದಲ್ಲಿ ಹತ್ತು ಹಲವು ಜನಪರ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಶ್ರೀಪೀಠದ ಚಿತ್ರಣ ಬದಲಿಸಿದ್ದಾರೆ. ಶ್ರೀಪೀಠದಲ್ಲಿ ನಿರಂತರವಾಗಿ ದಾಸೋಹ ವ್ಯವಸ್ಥೆ, ಆಗಮಿಸಿದ ಯಾತ್ರಿಕರಿಗೆ ವಸತಿ ಸೇರಿದಂತೆ ಗುಣಮಟ್ಟದ ಸೇವೆಗಳು ಲಭ್ಯವಾಗಿದೆ. ಜಗದ್ಗುರುಗಳನ್ನು ಆಧುನಿಕ ರಂಭಾಪುರಿ ಪೀಠದ ನಿರ್ಮಾತೃ ಎಂದರೆ ತಪ್ಪಾಗಲಾಗದು. ರಂಭಾಪುರಿ ಜಗದ್ಗುರುಗಳು ಬಾಳೆಹೊನ್ನೂರು ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ತೆರೆದು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ ಎಂದರು.
    ಎನ್.ಆರ್.ಪುರ ತಾಲೂಕು ಚುಸಾಪ ಅಧ್ಯಕ್ಷ ಚೈತನ್ಯ ವೆಂಕಿ ಮಾತನಾಡಿ, ಬಾಳೆಹೊನ್ನೂರು ಪಟ್ಟಣ ಎಂದರೆ ರಂಭಾಪುರಿ ಪೀಠದ ಹೆಸರನ್ನು ಪ್ರತಿಯೊಬ್ಬರೂ ಹೇಳುತ್ತಿದ್ದಾರೆ. ಪ್ರಮುಖವಾಗಿ ಭಕ್ತರು, ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಶ್ರೀಪೀಠವನ್ನು ಅಭಿವೃದ್ಧಿ ಮಾಡಿದ್ದಾರೆ. ಶ್ರೀಪೀಠದಲ್ಲಿ 51ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಶಿಲಾ ವಿಗ್ರಹ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟು ಕಾರ್ಯಾರಂಭ ಮಾಡಿರುವುದು ಜಗದ್ಗುರುಗಳ ಕ್ರಿಯಾಶೀಲತೆ, ದೂರದೃಷ್ಟಿತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
    ರಂಭಾಪುರಿ ಜಗದ್ಗುರುಗಳ ಜನ್ಮ ವರ್ಧಂತಿ ಅಂಗವಾಗಿ ಕ್ಷೇತ್ರನಾಥ ವೀರಭದ್ರಸ್ವಾಮಿ ಹಾಗೂ ದೇವಾಲಯ ಜಗದ್ಗುರು ರೇಣುಕಾಚಾರ್ಯ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts