More

    ರಾಮನಗರ ಜೈಲಿಗೆ ಪಾದರಾಯನಪುರ ಆರೋಪಿಗಳ ಸ್ಥಳಾಂತರ: ಹೊಣೆ ಯಾರು?

    ಬೆಂಗಳೂರು: ಕರೊನಾ ಸೋಂಕು ಹರಡುವಿಕೆಯಲ್ಲಿ ಹಸಿರು ವಲಯದಲ್ಲಿದ್ದ ರಾಮನಗರವನ್ನು ಕೆಂಪು ವಲಯವನ್ನಾಗಿ ಪರಿವರ್ತನೆ ಮಾಡಿದ್ದಕ್ಕೆ ಯಾರು ಹೊಣೆ ಹೊರುತ್ತಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಟ್ವೀಟ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಳುವವರ ಅವಿವೇಕತನದಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಮನಗರ ಜಿಲ್ಲೆಯ ಜನರ ನೆಮ್ಮದಿ ಕೆಟ್ಟಿದೆ. ಸೋಂಕು ತಡೆಯಬೇಕಾದ ಸರ್ಕಾರವೇ ಜಿಲ್ಲೆಗೆ ಸೋಂಕು ಹರಡಿದೆ. ಜಿಲ್ಲೆಗೆ ಸೋಂಕು ಹರಡಿದ ಕ್ರಮವನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಟ್ವೀಟರ್​ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಹಸಿರು ವಲಯದ ಜಿಲ್ಲೆಗಳಲ್ಲಿ ಕಾರ್ಖಾನೆಗಳ ಆರಂಭಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ರಾಮನಗರ ಹೊರತುಪಡಿಸಿ ಎಂದು ಉಲ್ಲೇಖಿಸಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ರಾಮನಗರ ಜೈಲಿನಲ್ಲಿದ್ದ ಪಾದರಾಯನಪುರ ಆರೋಪಿಗಳ ಸ್ಥಳಾಂತರ: ಬೆಂಗಳೂರಿನ ಹೆಗಡೆ ನಗರದ ಹಜ್​ಭವನಕ್ಕೆ ಪುಂಡರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts