More

    ರಾಮಲಿಂಗಾರೆಡ್ಡಿಯವರು ಕಾಂಗ್ರೆಸ್ ಪಕ್ಷದ ಮುಂದಿನ ಡಿಸಿಎಂ: ಜಾಲತಾಣದಲ್ಲಿ ಭರ್ಜರಿ ಕ್ಯಾಂಪೇನ್

    ಆನೇಕಲ್​: ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಎನ್ನುವಂತಹ ವಿಚಾರ ಬಾರಿ ಚರ್ಚೆಯಲ್ಲಿರುವ ಬೆನ್ನಲ್ಲೇ ಮಾಜಿ ಸಚಿವ ರಾಮಲಿಂಗಾರೆಡ್ಡಿಯವರೇ ಉಪಮುಖ್ಯಮಂತ್ರಿ ಎಂದು ತಮ್ಮ ಹುಟ್ಟೂರಿನಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೇನ್ ಶುರುಮಾಡಿದ್ದಾರೆ.

    ಹೌದು ಮಾಜಿ ಸಚಿವ ರಾಮಲಿಂಗಾರೆಡ್ಡಿಯವರ ಹುಟ್ಟೂರಾದ ಆನೇಕಲ್ ತಾಲ್ಲೂಕಿನಾದ್ಯಂತ ಮುಂದಿನ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ರಾಮಲಿಂಗಾರೆಡ್ಡಿಯವರು ಎಂದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರು ಪೋಸ್ಟ್ ಗಳನ್ನ ಹಾಕುತ್ತಿದ್ದಾರೆ.

    ಕಾಂಗ್ರೆಸ್ ಪಕ್ಷದ ಸರಳ ಸಜ್ಜನಿಕೆಯ ರಾಜಕಾರಣಿಯಾಗಿರುವ ರಾಮಲಿಂಗಾರೆಡ್ಡಿಯವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಹೊಂದಿದ್ದು, ಸಿಎಂ ರೇಸ್ ನಲ್ಲಿ ಇರುವವರಿಗಿಂತ ಇವರೇ ಮುಖ್ಯಮಂತ್ರಿ ಸ್ಥಾನಕ್ಕೆ ಬೆಸ್ಟ್, ಈಗಾಗಲೇ ಮುಖ್ಯಮಂತ್ರಿ ರೇಸ್ ನಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಇರುವುದರಿಂದ ಉಪಮುಖ್ಯಮಂತ್ರಿ ಆಗುವುದು ಖಚಿತ ಎಂದು ಬೆಂಬಲಿಗರು ಕ್ಯಾಂಪೇನ್ ಶುರುಮಾಡಿದ್ದಾರೆ.

    ಈ ಹಿಂದೆಯೂ ಸಹ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ರಾಮಲಿಂಗಾರೆಡ್ಡಿಯವರಿಗೆ ಸಚಿವ ಸ್ಥಾನ ಸಿಗದೆ ಇದ್ದಾಗ ಬೆಂಬಲಿಗರು ಹಾಗೂ ಕಾರ್ಯಕರ್ತರು ಬೃಹತ್ ಹೋರಾಟವನ್ನೇ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವನ್ನ ಹೊರಹಾಕಿದ್ದರು. ಆದ್ರೆ ಸರಳತೆಗೆ ಹೆಸರಾದ ಮಾಜಿ ಸಚಿವ ರಾಮಲಿಂಗಾರೆಡ್ಡಿಯವರು ಮಾತ್ರ ಎಲ್ಲಿಯೂ ಅಧಿಕಾರಕ್ಕೆ ಆಸೆ ಪಡೆದೆ ತಮಗೆ ನೀಡಿದ ಜವಾಬ್ದಾರಿ ಕೆಲಸವನ್ನು ಮಾಡಿಕೊಂಡು ಹೋಗಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಪಕ್ಷದ ಮುಂದಿನ ಸಿಎಂ ಯಾರು ಎನ್ನುವ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಾಮಲಿಂಗಾರೆಡ್ಡಿಯವರ ಬೆಂಬಲಿಗರು ಹಾಗೂ ಬಿಟಿಎಂ ವಿಧಾನಸಭಾ ಕ್ಷೇತ್ರಗಳಲ್ಲಿನ ಬೆಂಬಲಿಗರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಮುಖ್ಯಮಂತ್ರಿ ಆಗುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಕ್ಯಾಂಪೆನ್ ನಡೆಸುತ್ತಿದ್ದಾರೆ.

    ಜನ ಅಭಿಪ್ರಾಯವೇ ನನ್ನ ಅಭಿಪ್ರಾಯ: ಸಿದ್ದರಾಮಯ್ಯ ಪರ ಜಮೀರ್ ಬಳಿಕ ಅಖಂಡ ದನಿ

    2 ದಿನದ ಅಂತರದಲ್ಲಿ ಮೂವರು ಯುವತಿಯರ ದುರಂತ ಸಾವು: ಸಾಕ್ಷರತಾ ರಾಜ್ಯ ಕೇರಳಕ್ಕೆ ಕಪ್ಪುಚುಕ್ಕೆ

    ನೀರವ್, ಮಲ್ಯ, ಚೋಕ್ಸಿಯಿಂದ ವಶಕ್ಕೆ ಪಡೆದ ಆಸ್ತಿಯಲ್ಲಿ 9,371 ಕೋಟಿ ರೂ.ಗಳನ್ನು ಬ್ಯಾಂಕ್​ಗಳಿಗೆ ವರ್ಗಾಯಿಸಿದ ಇಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts