More

    ಬೀರೂರಿನಲ್ಲಿ ರಾಮನಾಮ ಜಪ

    ಬೀರೂರು: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತವನ್ನು ಶ್ರೀರಾಮನ ಭಾವಚಿತ್ರ ಹಾಗೂ ಬಂಟಿಂಗ್ಸ್‌ಗಳಿಂದ ಕೇಸರಿಮಯವಾಗಿಸಲಾಗಿದೆ.

    ಪಟ್ಟಣದ ಕರಗಲ್ ಬೀದಿ ಶ್ರೀ ಬೇಟೆ ರಂಗನಾಥಸ್ವಾಮಿ, ಉಪ್ಪಾರಕ್ಯಾಂಪ್‌ನ ರಾಮಮಂದಿರ, ಗಣಪತಿ ಪೆಂಡಾಲ್ ಮುಂಭಾಗದ ವೀರಾಂಜನೇಯ, ಮಹಾನವಮಿ ಬಯಲಿನ ಶಿವಾಜಿ ಪುತ್ಥಳಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಶ್ರೀ ವೀರಭದ್ರಸ್ವಾಮಿ ಯುವಕ ಸಂಘ, ರಂಭಾಪುರಿ ಶಾಖಾ ಮಠ, ಸವಿತಾ ಸಮಾಜ ಸೇರಿದಂತೆ ಬಹಳಷ್ಟು ದೇವಾಲಯಗಳು, ಸಂಘ ಸಂಸ್ಥೆಗಳಲ್ಲಿ ಶ್ರೀರಾಮನ ಬ್ಯಾನರ್ಸ್‌ ಮತ್ತು ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಇಡೀ ಪಟ್ಟಣದಲ್ಲಿ ಕೇಸರಿ ಬಾವುಟಗಳು, ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ಅಂಗಡಿಗಳ ಮುಂದೆ ಶ್ರೀರಾಮನ ಕಟೌಟ್‌ಗಳನ್ನು ಅಳವಡಿಸಲಾಗಿದೆ.
    ವಿಶೇಷವಾಗಿ ಶ್ರೀರಾಂಪುರ ಬಡಾವಣೆಯಲ್ಲಿ ಶ್ರೀ ಪಟ್ಟಾಭಿರಾಮ ಚಂದ್ರಮೌಳೀಶ್ವರ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಪ್ಠಾಪನೆ ನೇರ ಪ್ರಸಾರ ವೀಕ್ಷಣೆಗಾಗಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಜ.22ರ ಮಧ್ಯಾಹ್ನ ಶ್ರೀರಾಮನ ಉತ್ಸವ ಏರ್ಪಡಿಸಲಾಗಿದೆ. ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿದೆ. ವಿವಿಧ ದೇವಾಲಯ ಹಾಗೂ ಆಟೋ ಸಂಘಗಳಲ್ಲಿ ಪಾನಕ, ಕೋಸಂಬರಿ ವಿನಿಯೋಗ, ಅನ್ನಸಂತರ್ಪಣೆಗೆ ಸಿದ್ಧತೆ ಮಾಡಲಾಗಿದೆ. ಹಲವು ಶ್ರೀ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ 22ರಂದು ಮೂಲ ಮೂರ್ತಿಗೆ ಅಭಿಷೇಕ, ಅಲಂಕಾರ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts