More

    ಪುನೀತ್​ಗೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ ಮತ್ತು ತೆಲುಗು ನಟ ವಿಜಯ್ ದೇವರಕೊಂಡ

    ಬೆಂಗಳೂರು: ಈಗಾಗಲೇ ಶೂಟಿಂಗ್ ಮುಗಿಸಿಕೊಂಡಿರುವ ಯುವರತ್ನ ಚಿತ್ರ ಬಿಡುಗಡೆಗೆ ಹತ್ತಿರ ಬಂದಿದೆ. ಒಂದಾದ ಮೇಲೊಂದರಂತೆ ಹಾಡುಗಳ ಮೂಲಕ ಪುನೀತ್ ಅಭಿಮಾನಿಗಳಿಗೆ ಸರ್ಪ್ರೈಸ್​ ಉಡುಗೊರೆ ನೀಡುತ್ತಿದ್ದಾರೆ. ಇದೀಗ ಮತ್ತೊಂದು ಹಾಡಿನ ಮೂಲಕ ಆಗಮಿಸುತ್ತಿದ್ದಾರೆ. ಈ ಹಾಡಿನ ಬಿಡುಗಡೆಗೆ ಇಬ್ಬರು ಸ್ಟಾರ್​ಗಳು ಪುನೀತ್​ಗೆ ಕೈ ಜೋಡಿಸಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ನಲ್ಲಿ ಶುರುವಾಯ್ತು ‘ದಿಯಾ’ ರಿಮೇಕ್ ಕೆಲಸ; ಜನವರಿಯಿಂದ ಶೂಟಿಂಗ್​ ಶುರು

    ಕನ್ನಡದ ರಕ್ಷಿತ್ ಶೆಟ್ಟಿ ಮತ್ತು ತೆಲುಗಿನ ವಿಜಯ್ ದೇವರಕೊಂಡ ಯುವರತ್ನ ಚಿತ್ರದ ಲಿರಿಕಲ್ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಈ ವಿಚಾರವನ್ನು ಚಿತ್ರ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಹೇಳಿಕೊಂಡಿದ್ದು, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಹಾಡನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡರೆ, ತೆಲುಗು ಅವತರಣಿಕೆಯನ್ನು ವಿಜಯ್ ದೇವರಕೊಂಡ ರಿಲೀಸ್ ಮಾಡಲಿದ್ದಾರೆ.

    ಇದನ್ನೂ ಓದಿ: VIDEO| ಅಜ್ಜಿ ಮನೆಯಲ್ಲಿ ರಾಬರ್ಟ್ ಬೆಡಗಿಯ ಅಡಿಕೆ ಸುಲಿಯುವಿಕೆ ಹೇಗಿದೆ ನೋಡಿ…

    ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ತಂಡ ತಯಾರಿ ನಡೆಸುತ್ತಿದೆ. ಈಗಾಗಲೇ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಆಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂದಹಾಗೆ, ಸಂತೋಷ್ ಆನಂದ್​ ರಾಮ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್​ ಸಾಯೇಷಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ.

    ಕೆಜಿಎಫ್​ ಶೂಟಿಂಗ್​ ಮುಗಿದು ವಾರವಾಯ್ತು; ಮನೆಯತ್ತ ಇನ್ನೂ ಮುಖ ಮಾಡದ ಯಶ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts