More

    ದುಬಾರಿ ಉಡುಗೊರೆ ಕೊಟ್ಟ ಮೈಸೂರಿನ ಹೊಸ ಬಾಯ್​ಫ್ರೆಂಡ್​​ ಪರಿಚಯಿಸಿದ ರಾಖಿ ಸಾವಂತ್​!

    ಮುಂಬೈ: ಇತ್ತೀಚೆಗಷ್ಟೇ ಪತಿಯಿಂದ ದೂರವಾಗಿದ್ದೇನೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್​​ ನಟಿ ರಾಖಿ ಸಾವಂತ್​ ಈಗ ತನ್ನ ಹೊಸ ಬಾಯ್​ಫ್ರೆಂಡನ್ನು ಪರಿಚಯಿಸಿದ್ದಾರೆ.

    ಅದೂ ನಮ್ಮ ಕರ್ನಾಟಕದವರೇ ಆಗಿದ್ದು, ತನ್ನ ಬಾಯ್​ಫ್ರೆಂಡ್​ ಮೈಸೂರಿನವನೆಂದು ಸ್ವತಃ ರಾಖಿಯೇ ಇಬ್ಬರು ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಪರಿಚಯಿಸಿದ್ದಾರೆ. ಆತನ ಹೆಸರು ಆದಿಲ್​ ಎಂದು ರಾಖಿ ಹೇಳಿದ್ದಾರೆ.

    ದುಬಾರಿ ಉಡುಗೊರೆ ಕೊಟ್ಟ ಮೈಸೂರಿನ ಹೊಸ ಬಾಯ್​ಫ್ರೆಂಡ್​​ ಪರಿಚಯಿಸಿದ ರಾಖಿ ಸಾವಂತ್​!

    ಪ್ರೀತಿ, ಪ್ರೇಮ ಹಾಗೂ ಮದುವೆ ವಿಚಾರದಲ್ಲಿ ರಾಖಿ ಸಾವಂತ್​ ಆಗ್ಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವು ವರ್ಷಗಳ ಹಿಂದೆ ಸ್ವಯಂವರ ನಡೆಸಿ ತಾನು ಮದುವೆಯಾಗಿದ್ದೇನೆ ಎಂದಿದ್ದ ರಾಖಿ ನಂತರ ಇಲ್ಲ ಎಂದಿದ್ದೂ ಎಲ್ಲರಿಗೂ ಗೊತ್ತಿರುವ ವಿಚಾರ. ಇದಷ್ಟೇ ಅಲ್ಲದೇ ಕಳೆದ ವರ್ಷ ಮದುವೆಯಾದ ರಾಖಿ ಗಂಡನನ್ನು ಕೆಲಕಾಲ ಪರಿಚಯಿಸಿರಲೇ ಇರಲಿಲ್ಲ.ಹಿಂದಿಯಲ್ಲಿ ಪ್ರಸಾರವಾಗುವ ಜನಪ್ರಿಯ ಬಿಗ್​ ಬಾಸ್​ ಸೋ ಮೂಲಕ ಗಂಡನ ಪರಿಚಯ ಮಾಡಲಾಗಿತ್ತು. ಇಬ್ಬರು ಹೊರಬಂದ ಬಳಿಕ ನಾವು ಬೇರೆಯಾಗಿದ್ದೇವೆ ಎಂದು ಹೇಳಿದ್ದರು.

    ದುಬಾರಿ ಉಡುಗೊರೆ ಕೊಟ್ಟ ಮೈಸೂರಿನ ಹೊಸ ಬಾಯ್​ಫ್ರೆಂಡ್​​ ಪರಿಚಯಿಸಿದ ರಾಖಿ ಸಾವಂತ್​!

    ಇದೀಗ ಹೊಸ ಬಾಯ್​ ಫ್ರೆಂಡ್​ ಹುಡುಕಿಕೊಂಡಿರುವ ರಾಖಿ, ಆತನಿಂದ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಉಡುಗೊರೆಯಾಗಿ ಪಡೆದಿದ್ದು, ಆತ ನನ್ನ ಜೀವನದ ಕೊನೆವರೆಗೂ ಜೊತೆಯಲ್ಲಿರುತ್ತೇನೆ ಎಂದು ಹೇಳಿದ್ದಾನೆ. ಹಾಗಾಗಿ ನಾನು ಉಡುಗೊರೆ ಪಡೆದಿದ್ದೇನೆ ಎಂದು ರಾಖಿ ಹೇಳಿಕೊಂಡಿದ್ದಾರೆ.

    ಒಟ್ಟಾರೆ ರಾಖಿಗೆ ಮದುವೆ, ಬಾಯ್​ಫ್ರೆಂಡ್​ ವಿಚಾರಗಳೇನೂ ಹೊಸತೇನಲ್ಲ. ಇದು ಎಷ್ಟು ದಿನ ಸಾಗುತ್ತೆ ಅನ್ನೋದು ನೋಡಬೇಕೆಂದು ಕಾದುನೋಡಬೇಕಿದೆ. (ಏಜೆನ್ಸೀಸ್​)

    ಮತ್ತೊಮ್ಮೆ ಸುದ್ದಿಯಲ್ಲಿ ಕರಾಟೆ ಕಲ್ಯಾಣಿ: ಈಕೆ ವಿರುದ್ಧ ಎರಡೆರಡು ಪ್ರಕರಣ ದಾಖಲು!

    ಬೀದಿಯಲ್ಲಿ ಹೂ ಮಾರುತ್ತಿದ್ದ ಯುವತಿಗೆ ಸಿಕ್ತು ಅಮೆರಿಕ ಪ್ರತಿಷ್ಠಿತ ವಿವಿಯಲ್ಲಿ ಪಿಎಚ್​ಡಿ ಸೀಟ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts