More

    ಬೀದಿಯಲ್ಲಿ ಹೂ ಮಾರುತ್ತಿದ್ದ ಯುವತಿಗೆ ಸಿಕ್ತು ಅಮೆರಿಕ ಪ್ರತಿಷ್ಠಿತ ವಿವಿಯಲ್ಲಿ ಪಿಎಚ್​ಡಿ ಸೀಟ್​​!

    ನವದೆಹಲಿ: ಬೀದಿಬದಿಯಲ್ಲಿ ಹೂ ಮಾರುತ್ತಿದ್ದ ಯುವತಿಗೆ ತನ್ನ ಪರಿಶ್ರಮದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಒಲಿದು ಬಂದಿದೆ. ಈಗ ಅಮೆರಿಕ ಪ್ರತಿಷ್ಟಿತ ಕಾಲೇಜಿನಲ್ಲಿ ಪಿಎಚ್​ಡಿ ಅಧ್ಯಯನ ಮಾಡಲು ಅವಕಾಶ ಸಿಕ್ಕಿದೆ.

    ಕ್ಯಾಲಿಫೋರ್ನಿಯಾದ ವಿಶ್ವ ವಿದ್ಯಾಲಯದಲ್ಲಿ ಸೀಟು ಗಿಟ್ಟಿಸಿಕೊಂಡಿರುವ ಪ್ರತಿಭಾನ್ವಿತೆಯ ಹೆಸರು ಸರಿತಾ ಮಾಲಿ. ಈಕೆಗೆ 28ವರ್ಷ. ತನ್ನ ತಂದೆ ಜತೆ ಬೀದಿಯಲ್ಲಿ ಹೂ ಮಾರುತ್ತಲೇ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಈಗ ವಿದೇಶ ಹಾರಲಿದ್ದಾಳೆ. ಈಕೆ ಪ್ರಸ್ತುರ ಜೆಎನ್​ಯು ನಲ್ಲಿ ಹಿಂದಿ ಭಾಷೆಯ ಮೇಲೆ ಪಿಹೆಚ್​ಡಿ ಆಯ್ಕೆಮಾಡಿಕೊಂಡಿದ್ದು, ಸದ್ಯ ಎಂಎ ಮತ್ತು ಎಂಫಿಲ್​​ ಪದವಿ ಪಡೆದಿದ್ದು,  ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಲು ಜೆಎನ್​​ಯುಯಿಂದ ಆಯ್ಕೆಯಾಗಿದ್ದಾಳೆ.

    ಜೀವನದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ತುಂಬಾ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ್ದೇನೆ. ಇದಕ್ಕೆ ನನ್ನ ತಂದೆ-ತಾಯಿ ಹಾಗೂ ಕುಟುಂಬದವರು ತುಂಬಾ ಸಹಾಯ ಮಾಡಿದ್ದಾರೆ ಎಂದು ಸರಿತಾ ಸಂತಸ ವ್ಯಕ್ತಪಡಿಸಿದ್ದಾರೆ.ಸರಿತಾ ಕುಟುಂಬದಲ್ಲಿ ತಂದೆ-ತಾಯಿ, ಓರ್ವ ಸಹೋದರಿ ಹಾಗೂ ಇಬ್ಬರು ಸಹೋದರರಿದ್ದಾರೆ. ಇಡೀ ಕುಟುಂಬಕ್ಕೆ ತಂದೆಯೊಬ್ಬರೇ ದುಡಿಯಬೇಕಿತ್ತು. ಇನ್ನು ಮುಂದೆಯಾದರೂ ನಾವು ಜೀವನ ರೂಪಿಸಿಕೊಳ್ಳುತ್ತೇವೆ ಎಂದು ಸರಿತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಲಾಕ್​ಡೌನ್​ ಸಮಯದಲ್ಲಿ ನಾವು ತುಂಬಾ ಕಷ್ಟಪಟ್ಟೆವು ಎಂದಿರುವ ಈಕೆ, ವಿಶೇಷವಾಗಿ ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬಗಳಲ್ಲಿ ಹೂವು ಮಾರಾಟ ಮಾಡುತ್ತಿದ್ದೆ. ಇನ್ನು ರಜಾ ದಿನಗಳಲ್ಲೂ ಇದೇ ಕೆಲಸ ಮಾಡಿ ತಮ್ಮ ತಂದೆಗೆ ನೆರವಾಗುತ್ತಿದ್ದೆ ಎಂದು ಸರಿತಾ ಹೇಳಿಕೊಂಡಿದ್ದಾರೆ.

    ಜೆಎನ್​ಯು ನನ್ನ ಜೀವನದಲ್ಲಿ ಪ್ರಮುಖ ತಿರುವನ್ನೇ ನೀಡಿತ್ತು, ಉತ್ತಮ ವಿದ್ಯಾಭ್ಯಾಸದ ನೆರವನ್ನು ನೀಡಿದ್ದಲ್ಲದೇ ಇಂತಹ ದೊಡ್ಡ ಅವಕಾಶವನ್ನು ನೀಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    2010ರಲ್ಲಿ ಮೊಬೈಲ್​, ಇಂಟರ್​ ನೆಟ್​ ಸಂಪಕ್ ಈಗಿನಂತಿರಲಿಲ್ಲ. ಆಗ ಕೆಲವರಿಂದ ಮಾಹಿತಿ ಪಡೆದು ಜೆಎನ್​ಯುಗೆ ತೆರಳಿ ದಾಖಲಾಗಿದ್ದೆ. ಇಂದು ಇಂತಹ ಅವಕಾಶ ನೀಡಿರುವ ವಿಶ್ವವಿದ್ಯಾಲಯಕ್ಕೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸರಿತಾ ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​) 

    ಮತ್ತೊಮ್ಮೆ ಸುದ್ದಿಯಲ್ಲಿ ಕರಾಟೆ ಕಲ್ಯಾಣಿ: ಈಕೆ ವಿರುದ್ಧ ಎರಡೆರಡು ಪ್ರಕರಣ ದಾಖಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts