More

    ಸಂಸತ್​​ ಬಿಕ್ಕಟ್ಟು ನೀಗಿಸಲು ಸರ್ಕಾರ, ವಿಪಕ್ಷಗಳಿಗೆ ಆಗ್ರಹ

    ನವದೆಹಲಿ : ಸಂಸತ್ತಿನಲ್ಲಿ ಉಂಟಾಗಿರುವ ಕಹಿ ವಾತಾವರಣವನ್ನು ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಪರಿಹರಿಸಿಕೊಳ್ಳುವಂತೆ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮಂಗಳವಾರ ಆಗ್ರಹಿಸಿದ್ದಾರೆ. ಈ ಬಗ್ಗೆ ಇಂದು ರಾಜ್ಯಸಭೆಯ ಕಲಾಪವನ್ನು ಮೊದಲ ಬಾರಿಗೆ ಮುಂದೂಡಿದ ನಂತರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಾಯ್ಡು ಚರ್ಚಿಸಿದರು ಎಂದು ತಿಳಿದುಬಂದಿದೆ.

    ಈ ಬಗ್ಗೆ ಸೋಮವಾರ ಸಂಜೆ, ರಕ್ಷಣಾ ಸಚಿವ ರಾಜನಾಥ್​ ಸಿಂಗ್, ಗೃಹ ಸಚಿವ ಅಮಿತ್​ ಷಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ, ರಾಜ್ಯಸಭೆಯ ನಾಯಕ ಪಿಯೂಶ್​ ಗೋಯಲ್​ ಅವರುಗಳೊಂದಿಗೆ ಕೂಡ ಸಭೆ ನಡೆಸಿ ನಾಯ್ಡು ಅವರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: “ನಿನ್ನ ಜೊತೆ ನಾನಿದ್ದೇನೆ” – ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಸೋದರಿ

    ಜುಲೈ 19 ರಂದು ಕಲಾಪಗಳು ಆರಂಭವಾದಾಗಿನಿಂದ ಕಳೆದ ಎರಡು ವಾರಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕಲಾಪಗಳು ಸುಸೂತ್ರವಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ ಮತ್ತು ವಿಪಕ್ಷಗಳು ಪರಸ್ಪರ ಮಾತನಾಡಿ, ಸೌಹಾರ್ದಯುತ ಪರಿಹಾರವನ್ನು ಹುಡುಕಬೇಕು ಎಂದು ನಾಯ್ಡು ಒತ್ತಾಯಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ‘ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಅಪಮಾನ’ – ವಿಪಕ್ಷಗಳ ನಡೆಗೆ ಮೋದಿ ಅಸಮಾಧಾನ

    ದಾಖಲೆ ಮುರಿದು ಚಿನ್ನ ಗೆದ್ದ ನಾರ್ವೇ ಕ್ರೀಡಾಪಟು; ಅಂಗಿ ಹರಿದು ಸಂಭ್ರಮಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts