More

    ಜೆಡಿಯುಗೆ ಹೊಸ ಸಾರಥಿ- ನಾಯಕತ್ವದಿಂದ ಹಿಂದೆ ಸರಿದ್ರು ನಿತೀಶ್ ಕುಮಾರ್ !

    ಪಟನಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಸಂಯುಕ್ತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ನಿತೀಶ್​ ಕುಮಾರ್ ಹಿಂದೆ ಸರಿದಿದ್ದಾರೆ. ಈ ಹೊಣೆಗಾರಿಕೆಯನ್ನು ರಾಜ್ಯಸಭಾ ಸದಸ್ಯ ಆರ್​ಸಿಪಿ ಸಿಂಗ್ ವಹಿಸಿಕೊಳ್ಳಲಿದ್ದಾರೆ. ನಿತೀಶ್ ಕುಮಾರ್ ಅವರ ಆಪ್ತರಾಗಿರುವ ಆರ್​ಸಿಪಿ ಸಿಂಗ್​ ಬಿಹಾರದ ನಲಂದಾ ಜಿಲ್ಲೆಯ ಮುಸ್ತಾಫಾಫುರದವರು.

    ರಾಮಚಂದ್ರ ಪ್ರಸಾದ್ ಸಿಂಗ್ ಎಂಬುದು ಅವರ ಪೂರ್ಣಹೆಸರು. ರಾಜಕೀಯ ರಂಗ ಪ್ರವೇಶಿಸುವ ಮೊದಲು ಅವರು ಉತ್ತರ ಪ್ರದೇಶ ಕೆಡರ್​ನ ಐಎಎಸ್ ಅಧಿಕಾರಿಯಾಗಿದ್ದರು. ಸಿಎಂ ನಿತೀಶ್ ಕುಮಾರ್ ಅವರಿಗೆ ಪ್ರಿನ್ಸಿಪಾಲ್ ಸೆಕ್ರೆಟರಿ ಕೂಡ ಆಗಿದ್ದರು. ಆರ್​ಸಿಪಿ ಸಿಂಗ್ ಅವರು 1958ರ ಜುಲೈ 6 ರಂದು ಜನಿಸಿದರು. ತಂದೆ ಸುಖದೇವ್​ ನಾರಾಯಣ ಸಿಂಗ್, ತಾಯಿ ದುಖಲಾಲೋ ದೇವಿ. ನಲಂದಾ ಜಿಲ್ಲೆಯ ಹುಸೇನ್​ಪುರದಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಇವರು, ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪಟನಾ ಸೈನ್ಸ್ ಕಾಲೇಜು ಮತ್ತು ಜೆಎನ್​ಯುನ ಹಳೆಯ ವಿದ್ಯಾರ್ಥಿ. 1982ರಲ್ಲಿ ಗಿರಿಜಾ ಸಿಂಗ್ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಒಬ್ಬ ಪುತ್ರಿ ಲಿಪಿ ಸಿಂಗ್ 2016ರ ಬ್ಯಾಚಿನ ಐಪಿಎಸ್ ಅಧಿಕಾರಿ.

    ಇದನ್ನೂ ಓದಿ:  ದೇವಸ್ಥಾನದ ಮೇಲೆ ದಾಳಿ ನಡೆಸೋದಕ್ಕೆ ಸಿದ್ಧರಾಗಿದ್ರು ಉಗ್ರರು!: ಪಾಕಿಸ್ತಾನದಿಂದ ಕರೆ ಕೂಡ ಬಂದಿತ್ತು ಅವರಿಗೆ!

    ಸಂಯುಕ್ತ ಜನತಾದಳವನ್ನು ಜಾರ್ಜ್ ಫರ್ನಾಂಡಿಸ್​, ನಿತೀಶ್ ಕುಮಾರ್ ಮತ್ತು ಶರದ್ ಯಾದವ್ ಸೇರಿ 2003ರ ಅಕ್ಟೋಬರ್ 30ರಂದು ಹುಟ್ಟುಹಾಕಿದ್ದರು. ಸಮತಾ ಪಾರ್ಟಿ, ಲೋಕಶಕ್ತಿ ಮತ್ತು ಜನತಾದಳ ಎಂಬ ಪಕ್ಷಗಳು ವಿಲೀನಗೊಂಡು ಹುಟ್ಟಿದ ಪಾರ್ಟಿ ಇದು. ನಿತೀಶ್ ಅವರೊಂದಿಗೆ ಭಿನ್ನಮತ ಏರ್ಪಟ್ಟು 2003ರಿಂದ 2016ರ ತನಕ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶರದ್​ ಯಾದವ್ ಪಕ್ಷ ತ್ಯಜಿಸಿದರು. ಇದರ ಬೆನ್ನಿಗೆ ನಿತೀಶ್​ ಕುಮಾರ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಈಗ ಇತಿಹಾಸ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ್ರು ನಿವೃತ್ತ ಡಿವೈಎಸ್​ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts