More

    ಬಿಹಾರ ಸರ್ಕಾರ ರಚನೆ: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ – ಭಾನುವಾರ ಎನ್​ಡಿಎ ಸಭೆ

    ಪಟನಾ: ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಫಗು ಚೌಹಾನ್​ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ಅವರು, 16ನೇ ವಿಧಾನಸಭೆಯನ್ನು ಬರ್ಖಾಸ್ತುಗೊಳಿಸುವಂತೆ ಮನವಿ ಮಾಡಿದ್ದಾರೆ. ಹೊಸ ಎನ್​ಡಿಎ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯುವ ತನಕ ನಿತೀಶ್ ಕುಮಾರ್ ಅವರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.

    ಹಾಲಿ ವಿಧಾನಸಭೆಯ ಅವಧಿ ನವೆಂಬರ್​ 29ರ ತನಕ ಇದೆ. ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿರುವ ಕಾರಣ, ಹೊಸ ಸರ್ಕಾರ ರಚನೆಗೆ ಅಗತ್ಯ ಕ್ರಮಗಳು ಆರಂಭವಾಗಿವೆ. ಭಾನುವಾರ ಎನ್​ಡಿಎ ಸಭೆ ನಡೆಯಲಿದ್ದು, ಎನ್​ಡಿಎ ನಾಯಕ, ಮುಖ್ಯಮಂತ್ರಿ ಯಾರೆಂಬುದು ನಿರ್ಣಯಿಸಿಕೊಂಡು ಸರ್ಕಾರ ರಚನೆಯ ಹಕ್ಕನ್ನು ಮಂಡಿಸಲಿದ್ದಾರೆ.

    ಇದನ್ನೂ ಓದಿ: ‘ಉಹೂಂ, ಇದು ನನ್ನ ಕೊನೆಯ ಚುನಾವಣೆ ಅಲ್ಲವೇ ಅಲ್ಲ’, ಗೆದ್ದ ಮೇಲೆ ಉಲ್ಟಾ ಹೊಡೆದ ನಿತೀಶ್​ ಕುಮಾರ್​

    ಇಂದು ಬೆಳಗ್ಗೆ, ಎನ್​ಡಿಎಯ ನಾಲ್ಕು ಮಿತ್ರ ಪಕ್ಷಗಳಾದ ಜೆಡಿಯು, ಬಿಜೆಪಿ, ಎಚ್​ಎಎಂ ಮತ್ತು ವಿಕಾಸ್​ ಶೀಲ್​ ಇನ್ಸಾನ್ ಪಾರ್ಟಿಯ ನಾಯಕರು ಅನೌಪಚಾರಿಕವಾಗಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಸಭೆ ಸೇರಿದ್ದರು. ಈ ಸಭೆಯಲ್ಲೇ ಭಾನುವಾರದ ಎನ್​ಡಿಎ ಸಭೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೈತ್ರಿಕೂಟದಲ್ಲಿ ಬಿಜೆಪಿಗೆ ಅತ್ಯಧಿಕ 74 ಸ್ಥಾನಗಳು ಬಂದಿದ್ದರೂ, ಅದಕ್ಕಿಂತ 31 ಸ್ಥಾನ ಕಡಿಮೆ ಬಂದಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನೇ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಭಾನುವಾರದ ಎನ್​ಡಿಎ ಸಭೆಯ ಸರ್ಕಾರ ರಚನೆಯ ನಂತರ ಚಿತ್ರಣ ಸ್ಪಷ್ಟವಾಗಲಿದೆ. (ಏಜೆನ್ಸೀಸ್)

    ಈ ಊರಲ್ಲಿ ಕಾರ್ತೀಕ ಮಾಸದಲ್ಲಿ ಗಣೇಶೋತ್ಸವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts