More

    ಜೂ. 1ರಂದು ರಾಜೀವ್‌ಗಾಂಧಿ ವಿವಿ ಬೆಳ್ಳಿಹಬ್ಬ ಉದ್ಘಾಟಿಸಲಿರುವ ಮೋದಿ

    ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) 25ನೇ ಸಂಸ್ಥಾಪನಾ ದಿವಸದ ಅಂಗವಾಗಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಜೂ.1ರಂದು ಪ್ರಧಾನಿ ನರೇಂದ್ರ ಮೋದಿು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

    ಇದನ್ನೂ ಓದಿ: ಇನ್ನು ಮುಂದೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ದೇಶಾದ್ಯಂತ ಕರ್ಫ್ಯೂ

    ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ವೈದ್ಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ರಜತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ಇಚ್ಛಿಸಲಾಗಿತ್ತು. ಈಗ ಪ್ರ್ರಧಾನ ಮಂತ್ರಿಗಳೇ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

    800 ಸಂಸ್ಥೆಗಳನ್ನೊಳಗೊಂಡ ಆರ್‌ಜಿಯುಎಚ್‌ಎಸ್‌ನಲ್ಲಿ 2.5 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 23 ಸಾವಿರ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರೂ ಕರೊನಾ ವಿರುದ್ಧದ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದರು.

    ಇದನ್ನೂ ಓದಿ: ಜೂ.1ರಿಂದ ಅಂತರ ರಾಜ್ಯ ಸಂಚಾರ ಮುಕ್ತ, ಮುಕ್ತ

    ಕೋವಿಡ್ ವೈರಾಣುವನ್ನು ಹೆಚ್ಚು ವೈಭವೀಕರಿಸಿ, ಜನರಲ್ಲಿ ಭಯ-ಆತಂಕ ಮೂಡಿಸುವ ರೀತಿಯಲ್ಲಿ ಪ್ರತಿಬಿಂಬಿಸಬಾರದೆಂದು ಸಚಿವ ಡಾ.ಕೆ. ಸುಧಾಕರ್ ಮಾಧ್ಯಮಗಳಿಗೆ ಮನವಿ ಮಾಡಿದರು.

    ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಣೆ; ಜೂನ್ 8ರಿಂದ ದೇವಸ್ಥಾನ, ಹೋಟೆಲ್, ಮಾಲ್ ‌ಓಪನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts