More

    ಟಾಪ್​-10 ಪೀಕ್​ ಕನ್​ಕರೆನ್ಸಿ ಪಟ್ಟಿಗೆ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್​: ಅಧಿಕವಾಗುತ್ತಿದೆ ಆರ್​ಆರ್​ ಜನಪ್ರಿಯತೆ

    ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ತಂಡವು ಇತ್ತೀಚೆಗೆ ಭಾರಿ ಜನಪ್ರಿಯತೆ ಗಳಿಸುತ್ತಿದ್ದು, ಟಿವಿ ವೀಕ್ಷಣೆಯ ಪೀಕ್ ಕನ್​ಕರೆನ್ಸಿ ಪಟ್ಟಿಯಲ್ಲಿ ಇದೇ ಮೊದಲ ಸಲ ಟಾಪ್​-10 ಸ್ಥಾನಕ್ಕೆ ಪ್ರವೇಶ ಮಾಡಿದೆ. ಸ್ಟಾರ್​ಸ್ಪೋರ್ಟ್ಸ್​ನಲ್ಲಿ ಪ್ರಸಾರವಾದ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೂಲಕ ಇದು ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.

    ಒಟ್ಟು 48 ಪಂದ್ಯಗಳ ಪೈಕಿ 29 ಪಂದ್ಯಗಳು ಟಿವಿ ವೀಕ್ಷಣೆಯಲ್ಲಿ 3 ಕೋಟಿಗೂ ಅಧಿಕ ಪೀಕ್ ಕನ್​ಕರೆನ್ಸಿ ಹೊಂದಿದ್ದು, ಆ ಪೈಕಿ ಚೆನ್ನೈ ಸೂಪರ್​ ಕಿಂಗ್ಸ್​-ಪಂಜಾಬ್ ಕಿಂಗ್ಸ್​, ರಾಜಸ್ಥಾನ ರಾಯಲ್ಸ್​- ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್​-ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯಗಳೂ ಸೇರಿದ್ದು, ಪ್ರಮುಖ ಎನಿಸಿಕೊಂಡಿವೆ.

    ಏಪ್ರಿಲ್ 30ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವರ್ಸಸ್​ ಪಂಜಾಬ್ ಕಿಂಗ್ಸ್ ಪಂದ್ಯದ ಪೀಕ್ ಕನ್​ಕರೆನ್ಸಿ 3.5 ಕೋಟಿ ಆಗಿತ್ತು. ಅದೇ ದಿನ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ಪಂದ್ಯದ ಪೀಕ್​ ಕನ್​ಕರೆನ್ಸಿ 4 ಕೋಟಿ ದಾಖಲಾಗಿತ್ತು. ಇನ್ನು ಮೇ 3ರಂದು ನಡೆದಿದ್ದ ಪಂಜಾಬ್ ಕಿಂಗ್ಸ್ ವರ್ಸಸ್​ ಮುಂಬೈ ಇಂಡಿಯನ್ಸ್​ ನಡುವೆ ನಡೆದ ಪಂದ್ಯದ ಪೀಕ್ ಕನ್​ಕರೆನ್ಸಿ ಕೂಡ 3.5 ಕೋಟಿ ಆಗಿತ್ತು.

    ಮುಂಬೈ ಇಂಡಿಯನ್ಸ್ ಜತೆಗೆ ರಾಜಸ್ಥಾನ್ ರಾಯಲ್ಸ್​ ಟಾಪ್​-10 ಲಿಸ್ಟ್​​ಗೆ ಪ್ರವೇಶ ಮಾಡಿದ್ದರೆ, ಸಿಎಸ್​ಕೆ ಬಳಿಕದ ಅತಿ ಹೆಚ್ಚು ಪಂದ್ಯಗಳಲ್ಲಿ ಕಾಣಿಸಿದ ತಂಡವಾಗುವಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್​ಸಿಬಿ ನಡುವೆ ಪೈಪೋಟಿ ಕಂಡಿದೆ. ಟಾಪ್​-10 ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯಗಳಲ್ಲಿ ನಾಲ್ಕು ಬಾರಿ ಆರ್​ಸಿಬಿ ತಂಡ ಕಾಣಿಸಿಕೊಂಡಿದ್ದು ಸದ್ಯ ಎರಡನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ತಂಡ ಎರಡು ಸಲ ಟಾಪ್-10 ಅತಿ ಹೆಚ್ಚು ವೀಕ್ಷಿತ ಪಂದ್ಯಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

    ಟಾಪ್​-10 ಪೀಕ್​ ಕನ್​ಕರೆನ್ಸಿ ಪಟ್ಟಿಗೆ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್​: ಅಧಿಕವಾಗುತ್ತಿದೆ ಆರ್​ಆರ್​ ಜನಪ್ರಿಯತೆ ಟಾಪ್​-10 ಪೀಕ್​ ಕನ್​ಕರೆನ್ಸಿ ಪಟ್ಟಿಗೆ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್​: ಅಧಿಕವಾಗುತ್ತಿದೆ ಆರ್​ಆರ್​ ಜನಪ್ರಿಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts