More

    IPL 2023; ಜೋಸ್​ ಬಟ್ಲರ್​, ಯಶಸ್ವಿ ಜೈಸ್ವಾಲ್​ ಅರ್ಧಶತಕ; ರಾಜಸ್ಥಾನ ರಾಯಲ್ಸ್​​ಗೆ 57ರನ್​ ಜಯ

    ಗುವಾಹಟಿ: ಆರಂಭಿಕ ಬ್ಯಾಟ್ಸ್​​ಮ್ಯಾನ್​ಗಳಾದ ಯಶಸ್ವಿ ಜೈಸ್ವಾಲ್​ ಹಾಗೂ ಜೋಸ್​​ ಬಟ್ಲರ್​ ಸಿಡಿಸಿದ ಅರ್ಧಶತಕಗಳ ಫಲವಾಗಿ ರಾಜಸ್ಥಾನ ರಾಯಲ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 57 ರನ್​ಗಳ ಜಯ ಸಾಧಿಸಿದೆ.

    ಗುವಾಹಟಿಯ ಬರ್ಸಾಪುರ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ ರಾಯಲ್ಸ್​ ತಂಡವು 4 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 199ರನ್​ ಗಳಿಸಿತ್ತು.

    ಭರ್ಜರಿ ಆರಂಭ

    ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ ರಾಯಲ್ಸ್​​ ತಂಡವು ಆರಂಭಿಕರಾದ ಜೋಸ್​ ಬಟ್ಲರ್​(79 ರನ್​​, 51ಎಸೆತ, 11 ಬೌಂಡರಿ, 1 ಸಿಕ್ಸರ್​​), ಯಶಸ್ವಿ ಜೈಸ್ವಾಲ್​(60 ರನ್​, 31 ಎಸೆತ, 11 ಬೌಂಡರಿ, 1 ಸಿಕ್ಸರ್​), ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ ಶಿಮ್ರೋನ್​ ಹೆಟ್ಮೆಯರ್​ (39 ರನ್​​, 21 ಎಸೆತ, 1 ಬೌಂಡರಿ, 4 ಸಿಕ್ಸರ್​) ಫಲವಾಗಿ 20 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 199 ರನ್​ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್​​ ತಂಡಕ್ಕೆ 200 ರನ್​ಗಳ ಬೃಹತ್​ ಮೊತ್ತವನ್ನ ಸವಾಲಾಗಿ ನೀಡಿತ್ತು.

    ಇದನ್ನು ಓದಿ: IPL 2023; ಗಾಯದ ಸಮಸ್ಯೆ ನಡುವೆ ಬದಲಿ ಆಟಗಾರರ ಮೊರೆ ಹೋದ RCB

    ವಾರ್ನರ್​​-ಲಲಿತ್​ ಯಾದವ್​ ಹೋರಾಟ ವ್ಯರ್ಥ

    ಬೃಹತ್​ ಮೊತ್ತ ಬೆನ್ನತ್ತಿದ ಡೆಹಲಿ ಕ್ಯಾಪಿಟಲ್ಸ್​ ತಂಡವು ಆರಂಭಿಕ ವೈಫಲ್ಯದ ಹೊರತ್ತಾಗಿಯೂ ನಾಯಕ ಡೇವಿಡ್​ ವಾರ್ನರ್​(65 ರನ್​, 55 ಎಸೆತ, 7 ಬೌಂಡರಿ), ಮಧ್ಯಮ ಕ್ರಮಾಂಕದ ಬ್ಯಾಟ್ಸ್​​ಮ್ಯಾನ್​ ಲಲಿತ್​ ಯಾದವ್​ (38 ರನ್​, 24 ಎಸೆತ, 5 ಬೌಂಡರಿ) ಫಲವಾಗಿ 9 ವಿಕೆಟ್​ ನಷ್ಕ್ಕೆ 20 ಓವರ್​ಗಳಲ್ಲಿ 142 ರನ್​ಗಳಿಸಿ 57 ರನ್​​ಗಳ ಸೋಲೊಪ್ಪಿಕೊಂಡಿತ್ತು.

    RR ಪರ ಟ್ರೆಂಟ್​ ಬೌಲ್ಟ್​(4-1-29-2), ಸಂದೀಪ್​ ಶರ್ಮ(4-0-20-1), ಆರ್​.ಅಶ್ವಿನ್​(4-025-2), ಯಜುವೇಂದ್ರ ಚಹಲ್​ (4-0-27-3) ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts