More

    ಈಗ ತಿನ್ನಿರಿ, EMI ನಂತರ ಪಾವತಿಸಿ; ಹಣ್ಣಿನ ವ್ಯಾಪಾರಿಯ ವಿಶಿಷ್ಟ ಕೊಡುಗೆ

    ಪುಣೆ: ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣಿನ ದರ್ಬಾರ್​ ಶುರುವಾಗಿದ್ದು ತಳಿಗಳ ಬೆಲೆ ಕೂಡ ಜೋರಾಗಿದೆ.

    ಪುಣೆಯಲ್ಲಿ ಹಣ್ಣಿನ ವ್ಯಾಪಾರಿ ಒಬ್ಬರು ಅಲ್ಪಾನ್ಸೊ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸುವವರಿಗೆ ವಿಶೇಷ ಕೊಡುಗೆ ಒಂದನ್ನು ನೀಡುವ ಸುದ್ದಿಯಲ್ಲಿದ್ದಾರೆ.

    ಈಗ ತಿನ್ನಿರಿ ನಂತರ EMI ಪಾವತಿಸಿ

    ದೇವಘಡ್​ ಮತ್ತು ರತ್ನಗಿರಿಯಲ್ಲಿ ಬೆಳೆಯುವ ಅಲ್ಪಾನ್ಸೊ ತಳಿಯ ಮಾವಿನ ಹಣ್ಣುಗಳಿಗೆ ಬೇಡಿಕೆ ಜಾಸ್ತಿ ಇದ್ದು ಇದರ ಬೆಲೆ 800-1300 ರೂಪಾಯಿ ಎಂದು ಹೇಳಲಾಗಿದೆ.

    ಪುಣೆಯ ಗುರುಕೃಪಾ ಟ್ರೇಡರ್ಸ್​ ಮತ್ತು ಪ್ರೂಟ್​ ಪ್ರಾಡಕ್ಟ್​​​ ಮಾಲೀಕರಾದ ಗೌರವ್​ ಸನಸ್​ ತಮ್ಮ ಅಂಗಡಿಗೆ ಭೇಟಿ ನೀಡುವ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡುತ್ತಿದ್ದು ಮಾವಿನ ಹಣ್ಣನ್ನು ಈಗ ತಿನ್ನಿರಿ ನಂತರ EMI ಪಾವತಿಸಿ ಎಂದು ಹೇಳುವ ಮೂಲಕ ಸುದ್ದಿಯಲ್ಲಿದ್ದಾರೆ.

    Mango

    ಇದನ್ನೂ ಓದಿ: ತೈವಾನ್​ ಅಧ್ಯಕ್ಷೆ ಅಮೆರಿಕ ಭೇಟಿ; ಸಮರಾಭ್ಯಾಸ ಆರಂಭಿಸಿದ ಚೀನಾ

    ಮಾವಿನ ಹಣ್ಣುಗಳನ್ನು ಈ ಸೌಲಭ್ಯಗಳೊಂದಿಗೆ ಯಾಕೆ ಖರೀದಿಸಬಾರದು

    ಈ ಕುರಿತು ಮಾತನಾಡಿರುವ ಅಂಗಡಿ ಮಾಲೀಕ ಗೌರವ್​ ಸನಸ್​ ಟಿವಿ, ಫ್ರಿಡ್ಜ್​, ವಾಷಿಂಗ್​ ಮೆಷೀನ್​, ಎಸಿ, ಮೋಬೈಲ್​ ಸೇರಿದಂತೆ ಇನ್ನಿತರ ವಸ್ತುಗಳನ್ನು ನಾವು EMI ಮೂಲಕ ಖರೀದಿಸುತ್ತೇವೆ. ಹಾಗೆಯೇ ದುಬಾರಿ ಬೆಲೆ ಇರುವ ಹಣ್ಣುಗಳನ್ನು ಯಾಕೆ EMI ಮೂಲಕ ಖರೀದಿಸಬಾರದು ಎಂದು ಪ್ರಶ್ನಿಸಿದ್ದಾರೆ.

    ನಮ್ಮ ಉದ್ದೇಶ ಇರುವುದು ಪ್ರತಿ ಒಬ್ಬರು ಈ ತಳಿಯ ಮಾವಿನ ಹಣ್ಣುಗಳನ್ನು ಖರೀದಿಸುವಂತಾಗಬೇಕು. ಇಡೀ ಮಾರುಕಟ್ಟೆಯಲ್ಲಿ ಹಣ್ಣುಗಳಿಗೆ ನಾವೇ ಪ್ರಪ್ರಥಮ ಬಾರಿಗೆ EMI ಸೌಲಭ್ಯ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ವಸ್ತುಗಳನ್ನು ಖರೀದಿಸುವಾ ಗ ಪಾಲಿಸುವ ವಿಧಾನಗಳು ಇದಕ್ಕೂ ಅನ್ವಯ

    ನಾವು ಟಿವಿ, ಫ್ರಿಡ್ಜ್​, ವಾಷಿಂಗ್​ ಮೆಷೀನ್​, ಎಸಿ, ಮೋಬೈಲ್​ ಸೇರಿದಂತೆ ಇನ್ನಿತರ ವಸ್ತುಗಳನ್ನು EMIನಲ್ಲಿ ಖರೀದಿಸುವಾಗ ಪಾಲಿಸುವ ವಿಧಾನಗಳನ್ನು ಇಲ್ಲಿ ಕೂಡ ಪಾಲಿಸಬೇಕು. ಗ್ರಾಹಕರು ಕ್ರೆಡಿಟ್​ ಕಾರ್ಡ್​ ಮೂಲಕ ಹಣ ಪಾವತಿಸಿ ಮುರು, ಆರು ಅಥವಾ 12 ತಿಂಗಳಉಗಳ ಕಂತಿನಲ್ಲಿ ಮೊತ್ತವನ್ನು ಪಾವತಿಸಬಹುದು.

    ಆದರೆ, ಗ್ರಾಹಕರು EMI ಸೌಲಭ್ಯ ಸಿಗಬೇಕೆಂದರೆ ಕನಿಷ್ಠ ಎಂದರು 5,000 ಸಾವಿರ ಮೌಲ್ಯದ ಮಾವಿನ ಹಣ್ಣುಗಳನ್ನು ಖರೀದಿಸಬೇಕು. ಇದುವರೆಗೂ ನಾಲ್ಕು ಗ್ರಾಹಕರು EMI ಸೌಲಭ್ಯದ ಮೂಲಕ ಹಣ್ಣುಗಳನ್ನು ಖರೀದಿಸಿದ್ದಾರೆ ಎಂದು ಅಂಗಡಿ ಮಾಲೀಕ ಗೌರವ್​ ಸನಸ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts