More

    ರಾಯಲ್ಸ್-ಕೆಕೆಆರ್ ಕದನ ಕುತೂಹಲ, ಯಾರೇ ಗೆದ್ದರೂ ಬಿಡುವುದಿಲ್ಲ ಪ್ಲೇಆಫ್ ಚಿಂತೆ..!

    ದುಬೈ: ತೂಗುಯ್ಯಲೆಯಲ್ಲಿರುವ ಪ್ಲೇಆಫ್ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಕೋಲ್ಕತ ನೈಟ್‌ರೈಡರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಭಾನುವಾರ ನಿರ್ಣಾಯಕ ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಮುಂದಿನ ಹಂತಕ್ಕೇರಲು ಇತರ ಪಂದ್ಯಗಳ ಫಲಿತಾಂಶವನ್ನೂ ಅವಲಂಬಿಸಬೇಕಿದೆ. ಉಭಯ ತಂಡಗಳ ರನ್‌ರೇಟ್ ಕೂಡ ಕಳಪೆಯಾಗಿರುವುದರಿಂದ ದೊಡ್ಡ ಅಂತರದ ಗೆಲುವು ಕಂಡರಷ್ಟೇ ಪ್ಲೇಆಫ್ ಆಸೆ ಇಡಬಹುದಾಗಿದೆ. ಜತೆಗೆ ಕಿಂಗ್ಸ್ ಇಲೆವೆನ್ ಮತ್ತು ಸನ್‌ರೈಸರ್ಸ್‌ ಸೋಲಿಗೂ ಪ್ರಾರ್ಥಿಸಬೇಕಿದೆ. ಶುಕ್ರವಾರ ನಡೆದ ಹಣಾಹಣಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮಣಿಸಿ ಮುಂದಿನ ಹಾದಿ ಹೋರಾಟ ಉಳಿಸಿಕೊಂಡಿರುವ ರಾಜಸ್ಥಾನ ತಂಡ ಉತ್ತಮ ಲಯದಲ್ಲಿದ್ದು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಕಳೆದ ಎರಡು ಪಂದ್ಯಗಳಲ್ಲಿ ನೀರಸ ನಿರ್ವಹಣೆಯೊಂದಿಗೆ ಮಂಕಾಗಿರುವ ಕೆಕೆಆರ್ ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ.

    ಟೀಮ್ ನ್ಯೂಸ್
    ಕೆಕೆಆರ್:
    ಸತತ 2 ಸೋಲಿನಿಂದ ಕಂಗೆಟ್ಟಿರುವ ಕೆಕೆಆರ್ ತಂಡ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ರಿಂಕು ಸಿಂಗ್ ಬದಲಿಗೆ ಕುಲದೀಪ್ ಯಾದವ್ ಹನ್ನೊಂದರ ಬಳಗದಲ್ಲಿ ಕಣಕ್ಕಿಳಿಯಬಹುದು.
    ಸಂಭಾವ್ಯ ತಂಡ: ನಿತೀಶ್ ರಾಣಾ, ಶುಭಮಾನ್ ಗಿಲ್, ರಾಹುಲ್ ತ್ರಿಪಾಠಿ, ಸುನೀಲ್ ನಾರಾಯಣ್, ಇವೊಯಿನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೀ), ರಿಂಕು ಸಿಂಗ್/ಕುಲದೀಪ್ ಯಾದವ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ, ಲಾಕಿ ಫರ್ಗ್ಯುಸನ್.
    ಕಳೆದ ಪಂದ್ಯ: ಸಿಎಸ್‌ಕೆ ಎದುರು 6 ವಿಕೆಟ್ ಸೋಲು

    ರಾಜಸ್ಥಾನ:
    ಕಳೆದ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿರುವ ರಾಜಸ್ಥಾನ ರಾಯಲ್ಸ್, ಅದೇ ತಂಡ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
    ಸಂಭಾವ್ಯ ತಂಡ: ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸಂಜು ಸ್ಯಾಮ್ಸನ್ (ವಿಕೀ), ಸ್ಟೀವನ್ ಸ್ಮಿತ್ (ನಾಯಕ), ಜೋಸ್ ಬಟ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಜ್ರೋಾ ಆರ್ಚರ್, ವರುಣ್ ಆರನ್.
    ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು 7 ವಿಕೆಟ್ ಜಯ

    ಪಂದ್ಯ ಆರಂಭ: ಮಧ್ಯಾಹ್ನ 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 21, ಕೆಕೆಆರ್: 11, ರಾಜಸ್ಥಾನ : 10

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts